ಇಲ್ಲಿನ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ರಾತ್ರಿ ಪಾಳಿಯ ಕೆ.ಎಸ್‌.ಆರ್‌.ಟಿ.ಸಿ. ಬಸ್ ಚಾಲಕರು ಹಾಗೂ ನಿರ್ವಾಹಕರ ಜೊತೆ ವಿಭಿನ್ನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಉಡುಪಿ : ಇಲ್ಲಿನ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ರಾತ್ರಿ ಪಾಳಿಯ ಕೆ.ಎಸ್‌.ಆರ್‌.ಟಿ.ಸಿ. ಬಸ್ ಚಾಲಕರು ಹಾಗೂ ನಿರ್ವಾಹಕರ ಜೊತೆ ವಿಭಿನ್ನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಚಾಲಕರು-ನಿರ್ವಾಹಕರಿಗೆ ಆರತಿ ಬೆಳಗಿ, ಗಂಧವನ್ನಿಟ್ಟು ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಪ್ರತೀ ಬಸ್‌ನ ಒಳಗೆ ದೀಪದ ಪ್ರತೀಕವಾಗಿ ಲೈಟ್ ಇರಿಸಲಾಯಿತು. ಈ ಸಂದರ್ಭದಲ್ಲಿ ಎನ್‌.ಎಸ್‌.ಎಸ್. ಅಧಿಕಾರಿಗಳಾದ ಸುಚಿತ್ ಕೋಟ್ಯಾನ್, ಡಾ.ರೇಖಾ ಎನ್‌. ಚಂದ್ರ, ಫ್ರಾಗ್ರೆನ್ಸ್ ಆಫ್ ಹ್ಯುಮಾನಿಟಿ ಪರವಾಗಿ ರಾಯನ್ ಮಥಾಯಸ್, ಸುಶ್ಮಿತಾ ಕುಮಾರಿ ಹಾಗೂ ಎನ್‌.ಎಸ್‌.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು.