ಪ್ರಕರಣಗಳ ತ್ವರಿತ ವಿಲೇಗೆ ಶ್ರಮಿಸಿ: ನ್ಯಾ.ರಾಜೇಶ್ವರಿ ಹೆಗಡೆ ಸಲಹೆ

| Published : May 28 2024, 01:07 AM IST

ಪ್ರಕರಣಗಳ ತ್ವರಿತ ವಿಲೇಗೆ ಶ್ರಮಿಸಿ: ನ್ಯಾ.ರಾಜೇಶ್ವರಿ ಹೆಗಡೆ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯವನ್ನು ಬಯಸಿ ಕೋರ್ಟ್‌ಗಳಿಗೆ ಬರುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಮೂಲಕ ಹೆಚ್ಚು ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಬೇಕಿದೆ. ಈ ನಿಲ್ಲಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ನ್ಯಾಯಾಧೀಶರು, ವಕೀಲರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದ್ದಾರೆ.

- ವಕೀಲರ ಸಾಂಸ್ಕೃತಿಕ ಭವನದಲ್ಲಿ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನ್ಯಾಯವನ್ನು ಬಯಸಿ ಕೋರ್ಟ್‌ಗಳಿಗೆ ಬರುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಮೂಲಕ ಹೆಚ್ಚು ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಬೇಕಿದೆ. ಈ ನಿಲ್ಲಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ನ್ಯಾಯಾಧೀಶರು, ವಕೀಲರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿದ ಅವರು, 3 ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಲ್ಲಿನ ವಕೀಲರೂ ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ. ವಕೀಲರ ಸಹಕಾರದಿಂದ ಹೆಚ್ಚು ಹೆಚ್ಚು ಪ್ರಕರಣಗಳ ವಿಲೇವಾರಿಯೂ ಸಾಧ್ಯವಾಗಿದೆ ಎಂದರು.

ವಕೀಲರ ಸಂಘ ಅಧ್ಯಕ್ಷ ಎಲ್.ಎಚ್‌. ಅರುಣಕುಮಾರ ಮಾತನಾಡಿ, ನ್ಯಾಯಾಧೀಶರು, ವಕೀಲರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದೇ ರೀತಿ ವಕೀಲರ ಹಕ್ಕುಗಳಿಗೆ ಚ್ಯುತಿ ಬಂದಾಗ ನ್ಯಾಯಾಧೀಶರು ನಮ್ಮ ಸಹಕಾರಕ್ಕೆ ನಿಲ್ಲಬೇಕು. ನ್ಯಾಯಾಧೀಶರ ಕರ್ತವ್ಯಕ್ಕೆ ಚ್ಯುತಿ ಬಂದರೆ ಸಂಘ ಸೇರಿದಂತೆ ನಾವೆಲ್ಲರೂ ನಿಮ್ಮೊಂದಿಗಿರುತ್ತೇವೆ. ನ್ಯಾಯಾಧೀಶರ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ನ್ಯಾಯದಾನ ಮಾಡಲು ಸಹಕರಿಸೋಣ ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ, ದಾವಣಗೆರೆಗೆ ವರ್ಗಾವಣೆಯಾಗಿ ಬಂದಿರುವ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಶಿವಪ್ಪ ಗಂಗಪ್ಪ ಸಲಗರೆ, ವಿ.ಎಲ್.ಅಮರ್, ಸಿ.ನಾಗೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ನ್ಯಾಯಾಧೀಶರರಾದ ನಿವೇದಿತಾ, ರೇಷ್ಮಾ, ಗಾಯತ್ರಿ ಪ್ರಶಾಂತ, ಮಲ್ಲಿಕಾರ್ಜುನ, ಸಿದ್ದರಾಜು, ನಾಜಿಯಾ ಕೌಸರ್, ಮಹಾವೀರ ಕರೆಣ್ಣವರ ಇದ್ದರು. ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜ, ಕಾರ್ಯಕಾರಿ ಸದಸ್ಯರಾದ ಎಂ.ಚೌಡಪ್ಪ, ಟಿ.ಎಚ್. ಮಧುಸೂದನ, ಎಲ್.ನಾಗರಾಜ, ಕೆ.ಎಂ. ನೀಲಕಂಠಯ್ಯ, ಎಂ.ರಾಘವೇಂದ್ರ, ಜಿ.ಜೆ. ಸಂತೋಷಕುಮಾರ, ವಾಗೀಶ ಕಟಗಿಹಳ್ಳಿಮಠ, ಹಿರಿಯ-ಕಿರಿಯ ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

- - - -27ಕೆಡಿವಿಜಿ9:

ದಾವಣಗೆರೆ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ನೂತನ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ವಕೀಲರ ಸಂಘದ ಎಲ್.ಎಚ್. ಅರುಣಕುಮಾರ, ನ್ಯಾಯಾಧೀಶರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.