ಸಾರಾಂಶ
ರಾಮಾಯಣದಂತಹ ಶ್ರೇಷ್ಠ ಮಹಾಕಾವ್ಯದ ಮೂಲಕ ಸಮಸ್ತ ಮನುಕುಲಕ್ಕೆ ನೈತಿಕತೆಯ ಸಂವಿಧಾನ ಕಲ್ಪಿಸಿದ ಮಹರ್ಷಿ ವಾಲ್ಮೀಕಿಯ ವಾರಸುದಾರರಾಗಿರುವ ಹಿಂದುಳಿದ ಬೇಡ, ನಾಯಕ, ವಾಲ್ಮೀಕಿ, ತಳವಾರ ಸಮುದಾಯವು ಅಕ್ಷರದ ಮೂಲಕ ಮಾತ್ರ ವಿಕಾಸವಾಗಲು ಸಾಧ್ಯ.
ಕುಂದಗೋಳ:
ಶೋಷಿತ ವಾಲ್ಮೀಕಿ ನಾಯಕ ಸಮುದಾಯವನ್ನು ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯವಾಗಿ ಸಂಘಟಿಸಿ ಸರ್ವಾಂಗೀಣ ಅಭಿವೃದ್ಧಿಗೊಳಿಸುವ ಆಶಯದೊಂದಿಗೆ ಫೆ. 8 ಹಾಗೂ 9ರಂದು ರಾಜನಹಳ್ಳಿಯಲ್ಲಿ ನಡೆಯಲಿರುವ ವಾಲ್ಮೀಕಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ ಕರೆ ನೀಡಿದರು.ತಾಲೂಕಿನ ಪಶುಪತಿಹಾಳ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಆಯೋಜಿಸಿದ್ದ ಜಾತ್ರಾ ಸಿದ್ಧತೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಮಾಯಣದಂತಹ ಶ್ರೇಷ್ಠ ಮಹಾಕಾವ್ಯದ ಮೂಲಕ ಸಮಸ್ತ ಮನುಕುಲಕ್ಕೆ ನೈತಿಕತೆಯ ಸಂವಿಧಾನ ಕಲ್ಪಿಸಿದ ಮಹರ್ಷಿ ವಾಲ್ಮೀಕಿಯ ವಾರಸುದಾರರಾಗಿರುವ ಹಿಂದುಳಿದ ಬೇಡ, ನಾಯಕ, ವಾಲ್ಮೀಕಿ, ತಳವಾರ ಸಮುದಾಯವು ಅಕ್ಷರದ ಮೂಲಕ ಮಾತ್ರ ವಿಕಾಸವಾಗಲು ಸಾಧ್ಯ. ಸಮಾಜವನ್ನು ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯವಾಗಿ ಜಾಗೃತಿಗೊಳಿಸಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಶಕ್ತರು, ಅಸಹಾಯಕರಿಗೆ ನೆರವಾಗಬೇಕು ಎಂದರು.ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠವು ಪ್ರತಿವರ್ಷ ವಾಲ್ಮೀಕಿ ಜಾತ್ರೆ ಮೂಲಕ ಸಮುದಾಯದ ಜಾಗೃತಿಗೆ ಶ್ರಮಿಸುತ್ತಿದೆ. ಬರುವ ಫೆ. 8 ಹಾಗೂ 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ತಮ್ಮ ತನು, ಮನ ಹಾಗೂ ಧನ ಸೇವೆ ಸಲ್ಲಿಸಬೇಕು ಎಂದರು.
ತಾಲೂಕು ವಾಲ್ಮೀಕಿ ನಾಯಕ ಮಹಾಸಭೆಯ ರಾಜು ದೊಡ್ಡಶಂಕರ, ರೇಣುಕ ಎಂ. ಮಲ್ಲಾಪುರ, ರವಿ ದೊಡ್ಡಮನಿ, ಶಂಕ್ರಣ್ಣ ಹಿತ್ತಲಮನಿ, ರಾಜೀವ ಪುಟ್ಟಣ್ಣನವರ್, ಬಸವರಾಜ ಗೋವಿಂದಪ್ಪನವರ್, ಅಡಿವೆಪ್ಪ ಹೆಬಸೂರ, ಈರಣ್ಣ ಗೌಡನಾಯ್ಕರ್, ಶಿವಾನಂದ ನಾಯ್ಕರ್, ದ್ಯಾವಪ್ಪ ಡೊಳ್ಳಿನ, ಡಾ. ತ್ಯಾಗರಾಜ್, ಜಿ.ಎನ್. ಕೂಬಿಹಾಳ, ಡಾ. ದೊಡ್ಡಮನಿ, ಬಸವರಾಜ ನಾಯ್ಕರ್, ವಿರೂಪಾಕ್ಷ ಸುಂಕದ ಸೇರಿದಂತೆ ಹಲವರಿದ್ದರು.