ಯುವಕರು ಸಂಘಟಿತರಾಗಿ, ಶಿಕ್ಷಣ ಮತ್ತು ಕೌಶಲ್ಯಗಳ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗದಗ

ಯುವಕರಲ್ಲಿ ಇಚ್ಛಾಶಕ್ತಿ, ಆಸೆ, ಛಲ, ದೃಢಸಂಕಲ್ಪ ಮತ್ತು ಸಾಧಿಸುವ ಹಂಬಲವಿದ್ದರೆ ದೇವರು ಖಂಡಿತವಾಗಿಯೂ ದಾರಿ ತೋರುತ್ತಾನೆ. ಯುವಶಕ್ತಿಯ ಬೆಳವಣಿಗೆಯೇ ಸಮಾಜದ ಏಳಿಗೆಗೆ ಭದ್ರ ಬುನಾದಿಯಾಗಿದ್ದು, ಯುವಕರು ಸಂಘಟಿತರಾಗಿ, ಶಿಕ್ಷಣ ಮತ್ತು ಕೌಶಲ್ಯಗಳ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಾ. ಮುರುಗೇಶ್ ನಿರಾಣಿ ತಿಳಿಸಿದರು.

ನಗರದ ವಿಜಯ ಲಲಿತ ಕಲಾ ಸಂಸ್ಥೆಯಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಬೆಂಗಳೂರು, ಗದಗ ಜಿಲ್ಲಾ ಘಟಕ ಹಾಗೂ ಜಿಲ್ಲಾ ಪಂಚಮಸಾಲಿ ಯುವ ಘಟಕದ ಸಂಯುಕ್ತಾಶ್ರಯದಲ್ಲಿ 18ರಿಂದ 38 ವರ್ಷದೊಳಗಿನ ಯುವಕ-ಯುವತಿಯರಿಗಾಗಿ ಆಯೋಜಿಸಲಾಗಿದ್ದ ಯುವ ಪಂಚ್-2026 ಯುವಶಕ್ತಿ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಶ್ರೀನಿಜಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ಯುವಕರೂ ಪ್ರಕೃತಿ ಸಂರಕ್ಷಣೆ ಹಾಗೂ ತಮ್ಮ ಸ್ವಯಂ ಅಭಿವೃದ್ಧಿಯ (ವ್ಯಕ್ತಿತ್ವ ವಿಕಸನ) ಜವಾಬ್ದಾರಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಅಭಿವೃದ್ಧಿ ಹಾಗೂ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಡಾ. ಮುರುಗೇಶ್ ನಿರಾಣಿ ಇಂದಿನ ಯುವಕರಿಗೆ ಒಂದು ಅತ್ಯುತ್ತಮ ಉದಾಹರಣೆ ಹಾಗೂ ಮಾದರಿಯಾಗಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಾಗರ್ ಅಂಗಡಿ, ಎಫ್.ಎಸ್. ಸಿದ್ದನಗೌಡರ ಮಾತನಾಡಿದರು.

ಈ ವೇಳೆ ವಿಪ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಶಂಕರ ಬಿಸರಳ್ಳಿ, ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ, ಸಂತೋಷ ಅಕ್ಕಿ, ಕೊಟ್ರೇಶ್ ಕಿಚಡ್ಡಿ, ಎಫ್.ವಿ. ಮರಿಗೌಡರ, ಶಿವಾನಂದ ಪಲ್ಲೇದ, ಶರಣ ಪಾಟೀಲ, ಸೋಮಣ್ಣ ದಂಗಲ, ವಸಂತ ಹುಲಟಿ, ಶೇಖಣ್ಣ ಕಣ್ಣಾಳಿ, ಎಂ.ಎ. ಪಾಟೀಲ, ನಾಗೇಶ್ ಹುಬ್ಬಳ್ಳಿ, ತಿಪ್ಪಣ್ಣ ಕೊಂಚಗೇರಿ, ವಿಜಯಕುಮಾರ ಗಡ್ಡಿ, ಕೆ.ಕೆ. ಮಾಲಗೌಡರ, ಅಶೋಕ್ ಸಂಕಣ್ಣವರ, ಬಸವರಾಜ ತುಳಿ, ಉಮೇಶ್ ಚಿನ್ನು ಪಾಟೀಲ, ಡಾ. ಸಿ.ಕೆ. ರಚನಗೌಡ, ಬಸನಗೌಡ ಪಾಟೀಲ, ರುದ್ರಗೌಡ ಪಾಟೀಲ, ಎಸ್.ಬಿ. ಹೊಸೂರ, ಶರಣಪ್ಪ ಹೊಂಬಳ, ಅಶೋಕ ಬಳ್ಳಾರಿ, ಸುರೇಶ ಬ್ಯಾಲಹುಣಸಿ, ಎಫ್.ಎಸ್. ಪಾಟೀಲ, ವಿವೇಕಾನಂದ ಕಂಪ್ಲಿ ಸೇರಿ ಇತರರು ಇದ್ದರು. ಧರ್ಮರಾಜ ಕೊಂಚಿಗೇರಿ ಸ್ವಾಗತಿಸಿದರು. ಬಸವರಾಜ ಗುಡದೂರು ನಿರೂಪಿಸಿದರು. ಮಂಜುನಾಥ ಮುಧೋಳ ವಂದಿಸಿದರು.