ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪರಿಪೂರ್ಣತೆಯಿಂದ ನಿಖರವಾಗಿ ಕಾರ್ಯರೂಪಕ್ಕೆ ಇಳಿಸುವಂತಹ ಸಾಮರ್ಥ್ಯವನ್ನು ಭಾರತೀಯ ತಂತ್ರಜ್ಞರು ಹೊಂದಿದ್ದಾರೆ ಎಂದು ಬಿ.ವಿ.ವಿ.ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಆರ್.ಎನ್. ಹೆರಕಲ್ ಹೇಳಿದರು.ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿಲ್ಲಿ ಐಕ್ಯೂಎಸಿ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಯೋಗದಲ್ಲಿ ನಡೆದ ಕಾಲೇಜು ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಅವಿಷ್ಕಾರ -2025 ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿಗಳ ಆಶಯದ ಮೇಕ್ ಇನ್ ಇಂಡಿಯಾದಂತಹ ಕಲ್ಪನೆಗಳು ಇಂದು ಉತ್ತಮ ಫಲಿತಾಂಶ ನೀಡುತ್ತಿವೆ, ನಮ್ಮ ಸ್ವದೇಶಿ ಪ್ರತಿಭೆಗಳಿಂದ ನಿರ್ಮಿತ ತಾಂತ್ರಿಕ ಉತ್ಪನ್ನಗಳಿಂದ ನಾವಿಂದು ಬೃಹತ್ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದ್ದೇವೆ, ಇಂಥ ವೇದಿಕೆ ಮೂಲಕ ವಿದ್ಯಾರ್ಥಿಗಳು ನಾವೀನ್ಯತೆಗಳ ಕುರಿತು ಯೋಜಿಸಿ ಸಾಕಾರಗೊಳಿಸುವತ್ತ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್. ಹಿರೇಮಠ ಮಾತನಾಡಿ, ಶೈಕ್ಷಣಿಕ ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ನಿರಂತವಾಗಿ ವಿದ್ಯಾರ್ಥಿಗಳಿಗೆ ಅವಕಾಶಗ ಕಲ್ಪಿಸಲಾಗುತ್ತಿದೆ, ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ತಾಂತ್ರಿಕ ನೈಪುಣ್ಯತೆ ಮತ್ತು ಕೌಶಲ್ಯಗಳು ವೃದ್ಧಿಯಾಗಲಿವೆ ಎಂದರು.
ಐಶ್ವರ್ಯ ಹಿಪ್ಪರಗಿ ನಿರೂಪಿಸಿದರು. ಅಕಾಡೆಮಿಕ್ ಡೀನ್ ಡಾ.ಪಿ. ಎನ್. ಕುಲಕರ್ಣಿ, ವೈ.ಎಸ್. ನಾರಾಯಣ, ಅಭಿವೃದ್ಧಿ ಅಧಿಕಾರಿ ಪ್ರೊ.ಬಿ.ಎಸ್. ಹರವಿ, ಡಾ. ಭಾರತಿ ಮೇಟಿ, ಸಂಯೋಜಕ ಡಾ.ಬಿ.ಎಂ. ಅಂಗಡಿ, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.ಧಾರವಾಡ ಐಐಐಟಿ ಪ್ರಾಧ್ಯಾಪಕ ಡಾ.ಮಂಜುನಾಥ, ಡಾ.ಪಂಕಜ ಕುಮಾರ ನಿರ್ಣಾಯಕರಾಗಿದ್ದರು, 2025ರ ಆವಿಷ್ಕಾರ ಸಂಯೋಜಕ ಡಾ.ಮಮತಾ ಸತರೆಡ್ಡಿ ಸ್ವಾಗತಿಸಿದರು, ಆರ್&ಡಿ ವಿಭಾಗದ ಡೀನ್ ಡಾ.ಮಹಾಬಳೇಶ್ವರ.ಎಸ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಅನನ್ಯ ಜೋಶಿ ಪ್ರಾರ್ಥಿಸಿದರು. ಇ.ಸಿ.ಇ ವಿಭಾಗದ ಮುಖ್ಯಸ್ಥೆ ಡಾ.ಜಯಶ್ರೀ ಮಲ್ಲಾಪುರ ವಂದಿಸಿದರು,ಗಮನಸೆಳದ ಪ್ರದರ್ಶನ: ಕೃಷಿಯಲ್ಲಿ ಈರುಳ್ಳಿ ರಾಶಿ ಮಾಡುವ ಯಂತ್ರ, ನೈಟ್ರೋಜಿನ್ ಆಧಾರಿತ ಪರಿಸರಸ್ನೇಹಿ ಜೆಟ್ ಎಂಜಿನ್, ಎಐ ಆಧಾರಿತ ಚಲನವಲನಗಳ ಗುರುತಿಸಿ, ಗಮನಿಸುವ ವ್ಯವಸ್ಥೆ, ಅರಣ್ಯ ಮತ್ತು ಘಾಟ ರಸ್ತೆಗಳಲ್ಲಾಗುವ ಅಪಘಾತ ತಡಗಟ್ಟುವ ಪ್ರಾತ್ಯಕ್ಷಿಕೆ, ಬೂಕಂಪ್ ನ ನಿರೋಧಕ ಕಟ್ಟಡ ನಿರ್ಮಾಣದ ಪ್ರಾಜೇಕ್ಟ್ ಗಳು ಮಗನ ಸೆಳೆದವು. ಕಾಲೇಜು ಮಟ್ಟದ ಬಿ.ಇ ವಿದ್ಯಾರ್ಥಿಗಳು ಸಿದ್ದಪಡಿಸಿದ ಪ್ರಾಜೆಕ್ಟ್ ಪ್ರದರ್ಶನ 2025 ಅವಿಷ್ಕಾರದಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಪ್ರದರ್ಶನ ಮಾಡಿದರು.