ಸಾರಾಂಶ
ಓದಿನ ಜೊತೆಗೆ ಕಲಾತ್ಮಕ ವಿಷಯಗಳ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಭರತ ನಾಟ್ಯ ಕಲೆಯಲ್ಲಿ ತೊಡಗಿಕೊಂಡವರು ದೇಶವಷ್ಟೇ ಅಲ್ಲದೇ, ವಿದೇಶದಲ್ಲಿಯೂ ಹೆಸರು ಮಾಡುವ ಮೂಲಕ ಭಾರತ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ಕೆಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತೆರಿಗೆ ಸಲಹೆಗಾರ ಕೆ.ಜಿ.ಅನಂತರಾವ್ ಸಲಹೆ ನೀಡಿದರು.ನಗರದ ಗುರುದೇವ್ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಓದಿನ ಜೊತೆಗೆ ಕಲಾತ್ಮಕ ವಿಷಯಗಳ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಭರತ ನಾಟ್ಯ ಕಲೆಯಲ್ಲಿ ತೊಡಗಿಕೊಂಡವರು ದೇಶವಷ್ಟೇ ಅಲ್ಲದೇ, ವಿದೇಶದಲ್ಲಿಯೂ ಹೆಸರು ಮಾಡುವ ಮೂಲಕ ಭಾರತ ಕಲೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.
ಭಾರತವು ಕೃಷಿ ಪ್ರಧಾನವಾಗಿದ್ದು ಅದರ ಕಡೆಯು ಹೆಚ್ಚು ಗಮನ ಹರಿಸಬೇಕು. ಗುರುದೇವ್ ಲಲಿತಕಲಾ ಅಕಾಡೆಮಿಯ ವಿದ್ಯಾರ್ಥಿಗಳು ಆಸಕ್ತಿಯಿಂದ ಭರತ ನಾಟ್ಯ ಕಲಿಯುತ್ತಿದ್ದಾರೆ, ಅವರಿಗೆ ಪ್ರೇರಣೆಯಾಗಿರುವ ಚೇತನಾ ಮತ್ತು ರಾಧಾಕೃಷ್ಣ ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದು ಆಶಿಸಿದರು.ಗುರುಗಳಾದ ರಾಮಚಂದ್ರನ್ ಸುಬೇದಾರ್ ಗುರೂಜಿ, ಗುರುದೇವ ಲಲಿತಕಲಾ ಅಕಾಡೆಮಿಯ ಮುಖ್ಯಸ್ಥೆ ಚೇತನಾ, ಪಿ.ಎಂ.ರಾಧಾಕೃಷ್ಣ ಭಾಗವಹಿಸಿದ್ದರು.
ಜೆಇಇ ಮುಖ್ಯ ಪರೀಕ್ಷೆ ಎಸ್ ಟಿಜಿ ಸಂಸ್ಥೆ ವಿದ್ಯಾರ್ಥಿಗಳು ಉತ್ತಮ ಸಾಧನೆಪಾಂಡವಪುರ:
ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಜೆಇಇ ಪರೀಕ್ಷೆಯಲ್ಲಿ ಕಾಲೇಜಿನ ರುತ್ವಿಕ್ ಎಸ್. ಶೇ.98.90, ಶಶಾಂಕ್ ಟಿ.ಸಿ. ಶೇ.98.48, ಲೇಖನ ವಿ.ಶೇ.97.97, ಚೇತನ್ ಸ್ವರೂಪ್‌ಗೌಡ ಶೇ.96.48, ಹರ್ಷ ಆರ್. ಶೇ.91.39, ಗಂಭೀರ್‌ಗೌಡ ಸಿ. ಶೇ.90.91, ಚರಣ್ ಆರ್. ಶೇ.90.91, ಶೀತಲ್ ಬಿ.ಆರ್.ಶೇ.90.89, ಗೌತಮ್‌ಕುಮಾರ್ ಯು.ಎಸ್ ಶೇ.90.87, ನಿಶಾಂತ್ ಆರ್.ಎಸ್. ಶೇ.89.96, ಚಿಂತನ್.ವಿ.ಗೌಡ ಶೇ.89.92, ದಿಶಾ.ಪಿ. ಶೇ.89 ಅಂಕಗಳಿಸಿದ್ದಾರೆ.
ಕಾಲೇಜಿನ 20ಕ್ಕೂ ಅಧಿಕ ವಿದ್ಯಾರ್ಥಿಗಳು ಶೇ.86 ರಿಂದ80 ರಷ್ಟು ಅಂಕಗಳಿಸುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು ಸೇರಿದಂತೆ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಉಪನ್ಯಾಸ ವರ್ಗದವರು ಅಭಿನಂಧಿಸಿದ್ದಾರೆ.