ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ವಿಶ್ವದಲ್ಲಿ ಅತಿದೊಡ್ಡ ರಾಜಕೀಯ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಬೆಳೆದು ದೇಶದಲ್ಲಿ ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಬಿಜೆಪಿ ಸದಸ್ಯತ್ವ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರು 8800002024 ನಂಬರಿಗೆ ಮಿಸ್ಡ್ ಕಾಲ್ ಮಾಡುವ ಮುಖಾಂತರ ತಮ್ಮ ಸದಸ್ಯತ್ವ ಮತ್ತು ಡಿಜಿಟಲ್ ಸದಸ್ಯತ್ವ ಪಡೆಯುವ ಅಭಿಯಾನ ಆರಂಭಿಸಿದ್ದು, ಇದು ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಿ ಪಕ್ಷ ಸಂಘಟನೆಗೆ ಇನ್ನಷ್ಟು ಬಲ ಬರಲಿದೆ. ಪಕ್ಷವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯೆಂದರೇ ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂಘಟನೆ ಹಾಗೂ ಬಿಜೆಪಿಯೆಂದರೇ ಒಂದು ಚಳುವಳಿಯಾಗಿದ್ದು, ಇಂದಿನಿಂದ ಆರಂಭವಾಗಿರುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಮಿಸ್ಡ್ ಕಾಲ್ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಪಾಲುದಾರರಾಗೋಣ ಎಂದರು.
ನಂತರ ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಮಾತನಾಡಿ, ಮಸ್ಕಿ ಮಂಡಲ ವ್ಯಾಪ್ತಿಯಲ್ಲಿ ನಮ್ಮ ಕಾರ್ಯರ್ತರು ಪಕ್ಷದ ಸದಸ್ಯತ್ವಕ್ಕಾಗಿ ತಪ್ಪದೇ ಮಿಸ್ಡ್ ಕಾಲ್ ಮಾಡುವ ಮೂಲಕ ಸದಸ್ಯತ್ವನ್ನು ಪಡೆದುಕೊಳ್ಳಿ ಇದರಿಂದ ಪಕ್ಷದ ಸಂಘಟನೆಗೆ ಅನೂಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪಕ್ಷದ ಹಿರಿಯ ಮುಖಂಡರಾದ ಡಾ.ಬಿ.ಎಚ್.ಡಿವಟರ್, ಪಂಪಣ್ಣ ಗುಂಡಳ್ಳಿ, ಪ್ರಸನ್ನ ಪಾಟೀಲ್, ಶಂಕ್ರಪ್ಪ ಹಳ್ಳಿ, ಡಾ.ಪಂಚಯ್ಯ ಸ್ವಾಮಿ, ಮೌನೇಶ್ ನಾಯಕ್ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಯುವಮೊರ್ಚಾ ಅದ್ಯಕ್ಷ ಶರಣೆಗೌಡ ತಿಡಿಗೋಳ, ಮಹಿಳಾ ಮೋರ್ಚ ಅಧ್ಯಕ್ಷೆ ಚಂದ್ರಕಲಾ ದೇಶ್ಮುಖ, ಶಾಂತಮ್ಮ ಧನ್ಶೆಟ್ಟಿ, ಉಮಾ ಗಿಡದ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ್ ಬ್ಯಾಳಿ, ಚೇತನ್ ಪಾಟೀಲ್, ರಮೇಶ್ ಗುಡಿಸ್ಲಿ, ಬಸವರಾಜ್ ಬುಕ್ಕಣ್ಣ, ಭರತ್ ಶೇಟ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಗಂಗಾಧರ್ ಕಂಬಳಿಮಠ್, ಶರಣೇಗೌಡ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ್ ಗೋನಾಳ ಚನ್ನಬಸವ ಹಾಲಾಪುರ್, ಪಕ್ಷದ ಪದಾಧಿಕಾರಿಗಳು ಪುರಸಭೆ ಸದಸ್ಯರು ಮುಖಂಡರು ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.