ಭಾರತ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪಿವೆ
ಕುಕನೂರು: ಭಾರತೀಯರಿಗೆ ಬಲಿಷ್ಠ ಸಂವಿಧಾನದಿಂದ ಬದುಕುವ ಹಕ್ಕು ದೊರಕಿದೆ ಎಂದು ತಹಸೀಲ್ದಾರ ಬಸವರಾಜ ಬೆಣ್ಣೆ ಶಿರೂರು ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶಭಕ್ತಿಯ ಅಲೆ ಪ್ರತಿಯೊಬ್ಬರಲ್ಲಿ ಒಡಮೂಡಬೇಕು. ಭಾರತಕ್ಕೆ ದೊಡ್ಡ ಸಂವಿಧಾನ ಸಿಕ್ಕಿದೆ.ಅದನ್ನು ದೇಶ, ವಿದೇಶದಲ್ಲಿ ಅಧ್ಯಯನ ಮಾಡಿ ಅಂಬೇಡ್ಕರ್ ನೀಡಿದ್ದಾರೆ ಎಂದರು.ಭಾರತ ಆರ್ಥಿಕವಾಗಿ ಮೂರನೇ ಸ್ಥಾನದಲ್ಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪಿವೆ ಎಂದರು.
ಕೊಪ್ಪಳ ಮಾನಸಿಕ ಆರೋಗ್ಯ ಕೇಂದ್ರ ಆಪ್ತಸಮಾಲೋಚಕ ಕನಕರಾಯ ಭಜಂತ್ರಿ ಉಪನ್ಯಾಸ ನೀಡಿದರು. ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ,ಉಪತಹಸೀಲ್ದಾರ ಮುರುಳೀಧರರಾವ್ ಕುಲಕರ್ಣಿ, ಶಿರಸ್ತೇದಾರ ಮಹಮ್ಮದ ಮುಸ್ತಾಫ್, ತಾಪಂ ಯೋಜನಾಧಿಕಾರಿ ಆನಂದ,ಪತ್ರಕರ್ತ ರುದ್ರಪ್ಪ ಭಂಡಾರಿ, ರಷೀದಸಾಬ್ ಹಣಜಗೇರಿ, ವೀರಯ್ಯ ತೋಂಟದಾರ್ಯಮಠ, ಸಿ.ಆರ್.ಪಿ ಫೀರಸಾಬ್ ದಪೇದಾರ್, ದೈಶಿಕ್ಷಕ ಎಂಸಿ ಹಿರೇಮಠ ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮ ಜರುಗಿದವು. ಸರ್ಕಾರಿ ಪ್ರೌಢಶಾಲೆ ಕುಕನೂರು, ವಿದ್ಯಾನಗರದ ಮಾದ್ಯಮಿಕ ಶಾಲೆ, ರಮಾಬಾಯಿ ಅಂಬೇಡ್ಕರ್ ಶಾಲೆ, ಎಸ್.ಎಫ್.ಎಸ್ ಶಾಲೆ, ಗವಿಸಿದ್ದೇಶ್ವರ ಶಾಲೆ, ಟ್ರಿನಿಟಿ ಶಾಲೆ ಮಕ್ಕಳು ಭಾಗವಹಿಸಿದ್ದರು.