ಸಾರಾಂಶ
229ನೇ ವಿಶೇಷ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಡಾ. ವೀರೇಂದ್ರೆ ಹೆಗ್ಗಡೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಒಬ್ಬ ವ್ಯಕ್ತಿಯಾವುದೇ ಅಭ್ಯಾಸಕ್ಕೆ ಬಲಿ ಬಿದ್ದರೆ ಅದರಿಂದ ಹೊರಬರಲುಕಷ್ಟ ಸಾಧ್ಯ. ಹಿಂದಿನ ಕಾಲದಲ್ಲಿ ವ್ರತ ಮಾಡುವ ಮೂಲಕ ಕೆಟ್ಟಅಭ್ಯಾಸವನ್ನು ಬಿಡುತ್ತಿದ್ದರು. ಹಳೆಯ ಜೀವನವನ್ನು ಮರೆತು ಹೊಸ ಜೀವನವನ್ನು ಪ್ರಾರಂಭಿಸಬೇಕಾದರೆ ದೃಢ ಸಂಕಲ್ಪ ಮುಖ್ಯ ಎಂದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಉಜಿರೆಯಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 229ನೇ ವಿಶೇಷ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿರುವ ಶಿಬಿರಾರ್ಥಿಗಳನ್ನು ಧರ್ಮಸ್ಥಳದಲ್ಲಿ ಉದ್ದೇಶಿಸಿ ಮಾತನಾಡಿದರು.ಶಿಬಿರದಲ್ಲಿ ಔಷಧಿ, ಮದ್ದು, ಮಾತ್ರೆ, ಇಂಜಕ್ಷನ್ ಇಲ್ಲದೆ ಮನಪರಿವರ್ತನೆಯ ಮೂಲಕ ವ್ಯಸನ ಬಿಡಿಸುವ ಪ್ರಯತ್ನ ನಡೆಸಲಾಗುತ್ತದೆ. ಇಲ್ಲಿ ಕೊಡುವ ಸಂದೇಶಗಳನ್ನು ಮನನ ಮಾಡಿಕೊಂಡುಹೊಸ ಜೀವನ ನಡೆಸಿದಾಗ ದೈಹಿಕ, ಮಾನಸಿಕ ಸಾಂಸಾರಿಕ, ಆರ್ಥಿಕವಾಗಿ ಬದಲಾವಣೆಗಳಾಗುತ್ತದೆ. ಆದುದರಿಂದ ದೃಢಸಂಕಲ್ಪದಿಂದ ದುಶ್ಚಟಮುಕ್ತರಾಗಿತ ಮ್ಮತಮ್ಮ ಕುಟುಂಬದವರೊಂದಿಗೆಚೆನ್ನಾಗಿ ಬಾಳಿ ಬದುಕಿರಿ ಎಂದು ಶಿಬಿರಾರ್ಥಿಗಳಿಗೆ
ಕಿವಿಮಾತು ಹೇಳಿದರು. ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಆ.19ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.