ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮೂರು ಕರಡು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಅದರ ಜಾರಿಗೆ ಹೋರಾಟವನ್ನು ಮಾಡಲಾಗುವುದು ಎಂದು ಕರ್ನಾಟಕ ದಕ್ಷಿಣ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಮಾ ಶ್ರೀ ಜೋಡಿದಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪರಿಷತ್‌ನ ಸಂಘಟನಾತ್ಮಾಕ ವಿಚಾರವಾಗಿ ೨೦೨೩-೨೪ನೇ ಸಾಲಿನ ಶಾಖೆಗಳು ಸದಸ್ಯತ್ವ, ಕಾಲೇಜು ಘಟಕ, ಹಾಸ್ಟಲ್ ಘಟಕ, ಸ್ಥಾನ ವಿಸ್ತಾರ ಕೇಂದ್ರ ಕುರಿತಂತೆ ಗರಿವಿಧಿ ಮತ್ತು ಆಯಾಮ ಕಾರ್ಯಗಳ ಕುರಿತು ಚರ್ಚೆಯನ್ನು ನಡೆಸಲಾಯಿತು.ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ರಾಜ್ಯದ ವರ್ತಮಾನ ಪರಿಸ್ಥಿತಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರದ್ದತಿಗೆ ಖಂಡನೆ ಕುರಿತಂತೆ ಅಂಗೀಕರಿಸಲಾಯಿತು. ರಾಜ್ಯ ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್‌ನ್ನು ನಿಲ್ಲಿಸಿದೆ. ಇದರ ಬಗ್ಗೆ ಹೋರಾಟವನ್ನು ಎಬಿವಿಪಿ ಕೈಗೆತ್ತಿಕೊಳ್ಳಲಿದೆ. ಈ ವಿದ್ಯಾರ್ಥಿ ವೇತನವನ್ನು ನಂಬಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದಕ್ಕೆಲ್ಲಾ ರಾಜದ್ಯ ಸರ್ಕಾರ ಬರೆ ಎಳೆಯುತ್ತಿದೆ.ಇದರೊಂದಿಗೆ ಕೇಂದ್ರ ಸರ್ಕಾರ ಶಿಕ್ಷಣ ನೀತಿ ಜಾರಿ ಮಾಡಿದ್ದನ್ನು ರಾಜ್ಯ ಸರ್ಕಾರ ಜಾರಿ ಮಾಡಿತ್ತು, ಆದರೆ ಈಗ ಬಂದಿರುವ ಸರ್ಕಾರ ಅದನ್ನು ರದ್ದು ಮಾಡಿ ತನ್ನದೆ ಆದ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿದೆ, ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದರು.
ರಾಜ್ಯ ಸರ್ಕಾರ ಎನ್ಇಪಿಯನ್ನು ರದ್ದು ಮಾಡಲು ಮುಂದಾಗಿದೆ ಇದನ್ನು ಖಂಡಿಸುತ್ತದೆ. ರಾಜ್ಯದಲ್ಲಿ ಒಂದೊಂದು ಸರ್ಕಾರ ಆಡಳಿತವನ್ನು ನಡೆಸುವಾಗಲೂ ಒಂದೊಂದು ರೀತಿಯ ಶಿಕ್ಷಣ ಪದ್ದತಿಯನ್ನು ಜಾರಿ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಯಾವ ಶಿಕ್ಷಣವನ್ನು ಪಡೆಯಬೇಕೆಂದು ಗೊಂದಲದಲ್ಲಿದ್ದಾರೆ ಎಂದ ಅವರು, ರಾಜ್ಯ ಸರ್ಕಾರ ತನ್ನ ಶಿಕ್ಷಣ ನೀತಿಯನ್ನು ಬರೀ ಕೇವಲ ೫ ತಿಂಗಳಲ್ಲಿಯೇ ತಯಾರು ಮಾಡಿ ವಿದ್ಯಾರ್ಥಿಗಳಿಗೆ ನೀಡುವ ದಿಸೆಯಲ್ಲಿದೆ. ಇದೇ ರೀತಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಇಲ್ಲ, ಇದರ ನಿರ್ಮಾಣಕ್ಕೂ ಸಹಾ ಸರ್ಕಾರ ಮುಂದಾಗಿಲ್ಲ, ಶೌಚಾಲಯಗಳು ಇಲ್ಲವಾಗಿದೆ. ಇದರ ಬಗ್ಗೆ ಸಮೀಕ್ಷೆ ಮಾಡುವುದರ ಮೂಲಕ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು ಎಂದು ಪ್ರೇಮ ತಿಳಿಸಿದರು.೨೦೨೩-೨೪ನೇ ಸಾಲಿನಲ್ಲಿ ಕನಾಟಕ ದಕ್ಷಿಣ ಪ್ರಾಂತದ ೧,೮೩,೬೯೦ ಸದಸ್ಯತ್ವವು, ೧೪೫ ಶಾಖೆಗಳು, ೬೧೫ ಕಾಲೇಜು ಘಟಕಗಳು, ೧೧೮ ಸಂಪರ್ಕ ಸ್ಥಾನ ೧೪೦ ವಿಸ್ತಾರ ಕೇಂದ್ರಗಳನ್ನು ಹೊಂದಿದೆ. ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮಾವೇಶವನ್ನು ಬಾಗಲಕೋಟೆಯಲ್ಲಿ ನಡೆಸಲಾಗುವುದು. ಇದೆ ನ.೯ ರಂದು ಶಿವಮೊಗ್ಗದಲ್ಲಿ ನ.೧೦ ರಂದು ಬೆಂಗಳೂರಿನಲ್ಲಿ ಕಾಲೇಜು ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನವದೆಹಲಿಯಲ್ಲಿ ಡಿ.೭ ರಿಂದ ೧೦ರವರೆಗೆ ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಸಿದ್ದೇಶ್, ನಗರ ಕಾರ್ಯದರ್ಶಿ ಗೋಪಿ ವರುಣು ಉಪಸ್ಥಿತರಿದ್ದರು.----
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಕ್ಷಿಣ ಎಬಿವಿಪಿ ರಾಜ್ಯ ಕಾರ್ಯದರ್ಶಿ ಕುಮಾರಿ ಪ್ರೇಮಾ ಶ್ರೀ ಜೋಡಿದಾರ್ ಮಾತನಾಡಿದರು.