ಹುಸೇನಪುರದಲ್ಲಿ ಕುಡಿಯುವ ನೀರಿಗಾಗಿ ಪರದಾಟ

| Published : Jul 23 2025, 12:30 AM IST

ಸಾರಾಂಶ

ಸಮೀಪದ ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನೀರು ಪೂರೈಕೆ ಸ್ಥಗಿತವಾಗಿ ನಾಲ್ಕು ದಿನಗಳಾದರೂ ಸ್ಥಳೀಯ ಆಡಳಿತ ಗಮನ ಹರಿಸುತ್ತಿಲ್ಲ ಎಂದು ಮಹಿಳೆಯರು ಆರೋಪಿಸಿದರು.

ಕವಿತಾಳ: ಸಮೀಪದ ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನೀರು ಪೂರೈಕೆ ಸ್ಥಗಿತವಾಗಿ ನಾಲ್ಕು ದಿನಗಳಾದರೂ ಸ್ಥಳೀಯ ಆಡಳಿತ ಗಮನ ಹರಿಸುತ್ತಿಲ್ಲ ಎಂದು ಮಹಿಳೆಯರು ಆರೋಪಿಸಿದರು.

ಕೊಳವೆಬಾವಿ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ, ಆದರೆ ಮೋಟರ್‌ ಕೆಟ್ಟಿರುವ ಕಾರಣ ನಾಲ್ಕು ದಿನಗಳಿಂದ ನೀರು ಸರಬರಾಜು ಸ್ಥಗಿತವಾಗಿದೆ ಹೀಗಾಗಿ ಜನರು ಕುಡಿಯಲು ಮತ್ತು ಬಳಕೆ ನೀರಿಗೆ ಅಲೆಯುತ್ತಿದ್ದಾರೆ. ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣ ಮಾಡುತ್ತಿದ್ದಾರೆ, ಅವರು ತಮ್ಮ ಜಮೀನಿನ ಕೊಳವೆಬಾಯಿ ನೀರು ಬಳಸುತ್ತಿದ್ದು, ಈಗ ಅವರ ಮನೆಯಿಂದ ನೀರು ತರುತ್ತಿದ್ದೇವೆ ಹೊಲ, ಮನೆ ಕೆಲಸ ಬಿಟ್ಟು ನೀರಿಗಾಗಿ ಅಲೆಯುವಂತಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಹುಸೇನಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದಿದ್ದು, ಕೊಳವೆಬಾವಿ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಓ ಪ್ರಸಾದ ಹೇಳಿದರು.