ಕನ್ನಡಪ್ರಭ ವಾರ್ತೆ ಹಾಸನ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್- ಯುಜಿ) 2026ರ ಫಲಿತಾಂಶದಲ್ಲಿ ಹಾಸನದ ಆಕಾಶ್ ಎಜ್ಯುಕೇಶನಲ್ ಸರ್ವೀಸಸ್ ಲಿಮಿಟೆಡ್ ವಿದ್ಯಾರ್ಥಿ ನಮಿತ್ ಗೌಡ 720 ಅಂಕಗಳಲ್ಲಿ 624 ಅಂಕಗಳನ್ನು ಗಳಿಸಿ, ಅಖಿಲ ಭಾರತ ಮಟ್ಟದಲ್ಲಿ 4339ನೇ ರ್‍ಯಾಂಕ್ ಪಡೆದು ಹಾಸನ ನಗರ ಟಾಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದೆ ವೇಳೆ ನಗರದ ರಿಂಗ್ ರಸ್ತೆ ಬಳಿ ಇರುವ ಆಕಾಶ್ ಸಂಸ್ಥೆ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಯ ಪರಿಶ್ರಮ, ಶಿಸ್ತುಬದ್ಧ ಸಿದ್ಧತೆ ಹಾಗೂ ಆಕಾಶ್ ಸಂಸ್ಥೆಯ ಗುಣಮಟ್ಟದ ತರಬೇತಿ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ರಾಷ್ಟ್ರಮಟ್ಟದಲ್ಲಿಯೂ ಆಕಾಶ್ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಈ ಬಾರಿ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಟಾಪ್-10ರಲ್ಲಿ ಹಾಗೂ 41 ವಿದ್ಯಾರ್ಥಿಗಳು ಟಾಪ್-100 ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದರು.
ವಿದ್ಯಾರ್ಥಿ ನಮಿತ್ ಗೌಡ 720 ಅಂಕಗಳಲ್ಲಿ 624 ಅಂಕಗಳನ್ನು ಗಳಿಸಿದರೆ, ಎ.ಎಸ್. ವೇದಿಕ್ 578 ಅಂಕ, ಎಚ್.ಜಿ. ನಿಸರ್ಗ 559 ಅಂಕ, ವಿ. ಮಿಥುನ್ 554 ಅಂಕ, ತನುಶ್ರೀ ಎಂ. ಗೌಡ 549 ಅಂಕ, ಎಂ.ವಿ. ಸಿಂಚನಾ 538 ಅಂಕ, ಜಿ.ಆರ್. ಚಂದನ್ 536 ಅಂಕ, ಅದಿಥಿ ಎನ್. ಗೌಡ, 534 ಅಂಕ, ಪಿ. ಚಿನ್ಮಯಿ 530 ಅಂಕ, ಎಂ.ಕೆ. ಡಯಾನಾ 522 ಅಂಕ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ತಮ್ಮ ಯಶಸ್ಸಿನ ಕುರಿತು ಮಾತನಾಡಿದ ನಮಿತ್ ಗೌಡ, ನನ್ನ ಪೋಷಕರ ನಿರಂತರ ಪ್ರೋತ್ಸಾಹ, ಆಕಾಶ್ ಸಂಸ್ಥೆಯ ನಿಯಮಿತ ಮಾಕ್ ಟೆಸ್ಟ್ ಗಳು, ಸಂದೇಹ ಪರಿಹಾರ ತರಗತಿಗಳು ಹಾಗೂ ಉಪನ್ಯಾಸಕರ ಮಾರ್ಗದರ್ಶನವೇ ಈ ಸಾಧನೆಗೆ ಬಲವಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ನಮಿತ್ ಗೌಡ ಅವರ ಸಾಧನೆಗೆ ಆಕಾಶ್ ಎಜ್ಯುಕೇಶನಲ್ ಸರ್ವೀಸಸ್ ಲಿಮಿಟೆಡ್‍ನ ಅಕಾಡೆಮಿಕ್ಸ್ ಮತ್ತು ಬ್ಯುಸಿನೆಸ್ ಹೆಡ್ ಡಾ. ಎಚ್.ಆರ್. ರಾವ್ ಅಭಿನಂದನೆ ಸಲ್ಲಿಸಿ, ಮುಂದಿನ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಜೀವನದಲ್ಲಿ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ನಿರ್ದೇಶಕ ವಿಕ್ರಮ ಚಕ್ರವರ್ತಿ ಡಿ., ಪ್ರಾದೇಶಿಕ ಮಾರಾಟ ಮತ್ತು ಬೆಳವಣಿಗೆ ವಿಭಾಗದ ಉಪ ಮುಖ್ಯಸ್ಥ ಅನಿಲ್ ಕುಮಾರ್ ಎಚ್.ಆರ್., ಸಹಾಯಕ ನಿರ್ದೇಶಕ ಸಾಮವೇದಂ ಬಾಲಶ್ರೀನಿವಾಸ್, ಉಪ ಶಾಖಾ ಮುಖ್ಯಸ್ಥ ನಾಗಭೂಷಣ್ ಸಿ. ಹೂಲಿ ಹಾಗೂ ಫೌಂಡೇಶನ್ ವಿಭಾಗದ ಶೈಕ್ಷಣಿಕ ಮುಖ್ಯಸ್ಥ ಯಾದಲ ಆದಿನಾರಾಯಣ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.