ಕಾರ್ಕಳ: ಭುವನೇಂದ್ರ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿದ್ಯಾರ್ಥಿ ಸರ್ಕಾರದ ಅಧಿವೇಶನ ಶಾಲೆಯ ವರದೇಂದ್ರ ಸದನದಲ್ಲಿ ನಡೆಯಿತು. ಕಲಾಪವನ್ನು ನೂತನ ಸ್ಪೀಕರ್ ಆಗಿ ಆಯ್ಕೆಯಾದ 10ನೇ ತರಗತಿ ವಿದ್ಯಾರ್ಥಿನಿ ಹರಿಪ್ರಿಯಾ ನಡೆಸಿಕೊಟ್ಟರು. ಆಡಳಿತ ಪಕ್ಷದ ಮುಖ್ಯಮಂತ್ರಿ 10ನೇ ತರಗತಿ ವಿದ್ಯಾರ್ಥಿನಿ ಧಾರಿಣಿ ಉಪಾಧ್ಯ ತಮ್ಮ ಸಚಿವ ಸಂಪುಟವನ್ನು ಸಂಸತ್ತಿಗೆ ಪರಿಚಯಿಸಿ, ವಿದ್ಯಾರ್ಥಿಗಳಿಗೆ ಜಾರಿಗೆ ತಂದ ವಿದ್ಯಾರ್ಥಿ ಸ್ನೇಹಿ ಯೋಜನೆ ಮತ್ತು ಶಾಲಾ ನಿಯಮ ಪಾಲನೆ ಬಗ್ಗೆ ತಿಳಿ ಹೇಳಿದರು.

ಇದೇ ಸಂದರ್ಭ ಪ್ರತಿಪಕ್ಷ ನಾಯಕ ಶಮಂತ್ ಹಾಗೂ ಸದಸ್ಯರು ಆಡಳಿತ ಪಕ್ಷದ ಕಾರ್ಯವೈಖರಿ ಮಧ್ಯೆ ಆದ ಲೋಪಗಳ ಬಗ್ಗೆ ಸದನದ ಗಮನ ಸೆಳೆದರು. ಆಗ ಸ್ಪೀಕರ್ ಅವರು ಮಧ್ಯ ಪ್ರವೇಶಿಸಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷವೂ ಸಮನ್ವಯತೆ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ನಮ್ಮ ರಾಜ್ಯದಲ್ಲಿ ದೇಶದದಲ್ಲಿ ಪವಿತ್ರ ಸಂವಿಧಾನ ಶ್ರೇಷ್ಠತೆ ಬಗ್ಗೆ ಹೇಳುವ ವಿಚಾರಗಳನ್ನು ವಿದ್ಯಾರ್ಥಿಗಳಾದ ನಾವೆಲ್ಲರೂ ತಿಳಿದುಕೊಳ್ಳೋಣ ಪಾಲಿಸೋಣ ಎಂದು ಹೇಳಿದರು.

ಸ್ಪೀಕರ್ ಹರಿಪ್ರಿಯ ಅವರು ಸದನವನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಸತ್ತಿನ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರಾದ ಪ್ರಜ್ಞಾ, ಪೃಥ್ವಿ, ಸಿಂಧು, ಪಲ್ಲವಿ, ವೈಷ್ಣವಿ, ಹರ್ಷಿಣಿ, ಶ್ರೇಯಾ, ಅಕ್ಷರಾ, ಸಾನ್ವಿ ಆಚಾರ್ಯ, ನಿತೀಕ್ಷಾ, ಶರಣ್, ಸಮರ್ಥ, ಶಮಂತ್, ಅಶ್ವಿನ್, ತೌಸಿನ್, ಲತೇಶ್, ಮನೀಶ್, ದಿಶಾಂತ್, ಧನ್ವಿತ್ ಹಾಗೂ ಸ್ವಸ್ತಿಕ್ ಉಪಸಿತರಿದ್ದರು. ಮನೀಶ್ ಪ್ರಜ್ವಲ್ ಮಾರ್ಷಲ್ ಆಗಿ ಸಹಕರಿಸಿದರು. ಆಯ್ಕೆಗೊಂಡ ಮಂತ್ರಿಗಳು ಕಲಾಪದಲ್ಲಿ ತಮ್ಮ ತಮ್ಮ ಖಾತೆಯ ಜವಾಬ್ದಾರಿಯ ಬಗ್ಗೆ ಸದನಕ್ಕೆ ತಿಳಿಸಿದರು. ಆಫೀಯಾ ಹಾಗೂ ಅಜೀಬಾ ಕಡತಗಳ ನಿರ್ವಹಣೆ ಮಾಡಿದರು.

ಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಅವರು ವಿದ್ಯಾರ್ಥಿಗಳು ನಡೆಸಿದ ಸಂಸತ್ತು ಕಲಾಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ವಿಜ್ಞಾನ ಶಿಕ್ಷಕ ದಿವ್ಯ ಕುಮಾರ್ ಅವರು ಸಂಸತ್ತು ನಡೆಸುವ ಬಗ್ಗೆ ಮಾರ್ಗದರ್ಶನ ಮಾಡಿದರು. ಅಧಿವೇಶನವನ್ನು ಎಲ್ಲ ವಿದ್ಯಾರ್ಥಿಗಳು ಶಿಕ್ಷಕರು ವೀಕ್ಷಿಸಿದರು.