ಸಾರಾಂಶ
ಅಂಕೋಲಾದ ಗುಜರಿಯೋಡೊ ಕೆನರಾ ಖಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚು ಪಡೆದು ಸಾಧನೆ
ಕನ್ನಡಪ್ರಭ ವಾರ್ತೆ ಅಂಕೋಲಾ
ಬಳ್ಳಾರಿಯಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಇನ್ವಿಟೇಷನಲ್ ಕರಾಟೆ ಚಾಂಪಿಯನಶಿಪ್‌ನಲ್ಲಿ ಅಂಕೋಲಾದ ಗುಜರಿಯೋಡೊ ಕೆನರಾ ಖಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚು ಪಡೆದು ಸಾಧನೆಗೈದಿದ್ದಾರೆ.ಕುಮಟೆ ವಿಭಾಗದಲ್ಲಿ ಜಾಹ್ನವಿ ಎಸ್. ಮೊರೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದರೆ, ಕಟಾಸ್ ತೃತೀಯ ಸ್ಥಾನ ಕಂಚಿನ ಪದಕ ಪಡೆದಿದ್ದಾಳೆ. ವೇದಾ ಶಿವಾನಂದ ಹುಲಸ್ವಾರ ಕಟಾ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾಳೆ. ಸೋನಾಕ್ಷಿ ಆರ್.ನಾಯ್ಕ ಕಟಾ ವಿಭಾಗದಲ್ಲಿ ತೃತೀಯ, ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚು ಪಡೆದುಕೊಂಡಿದ್ದಾಳೆ.ಆರ್ಯನ್ ಎಸ್. ನಾಯ್ಕ ಕಟಾ ವಿಭಾಗದಲ್ಲಿ ತೃತೀಯ, ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚು ತನ್ನದಾಗಿಸಿಕೊಂಡಿದ್ದಾನೆ. ಮನಾನ್ ಎಸ್. ಅಹಮದ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚು ಹಾಗೂ ಮಂಥನ ವಿ. ಹುಲಸ್ವಾರ ತೃತೀಯ ಬಹುಮಾನ ಕಂಚು ಪಡೆದಿದ್ದಾರೆ.ಕರಾಟೆ ಸಾಧಕರಿಗೆ ಸೂಕ್ತ ತರಬೇತಿಯನ್ನು ೪ನೇ ಡಾನ್ ಬ್ಲಾಕ್ ಬೆಲ್ಟ್ ಇಂಟರ್‌ನ್ಯಾಷನಲ್ ಕರಾಟೆಪಟು ಶಾಂತಾರಾಮ್ ಎ. ಹುಲಸ್ವಾರ ತರಬೇತಿ ನೀಡಿದ್ದರು.