ಸಾರಾಂಶ
ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಸಾಕ್ಷರರು, ಸಂಸ್ಕಾರ ವಂತರಾಗಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಜಮಖಂಡಿ: ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಸಾಕ್ಷರರು, ಸಂಸ್ಕಾರ ವಂತರಾಗಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಪಿ.ಬಿ. ಹೈಸ್ಕೂಲ್‌ನಲ್ಲಿ ಗುರುವಾರ ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರ ಮಕ್ಕಳ ಕಲಿಕೆಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಬಿಸಿಊಟ, ಪಠ್ಯ-ಪುಸ್ತಕ ವಿತರಣೆ, ಸಮವಸ್ತ್ರ, ಬ್ಯಾಗ ಪೂರೈಸುವ ಮೂಲಕ ಸಶಕ್ತ, ಸಮೃದ್ಧ ಭಾರತದ ನಿರ್ಮಾಣಕ್ಕೆ ಮುಂದಾಗಿದೆ. ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಪಾಠದ ಜತೆಗೆ ದೈಹಿಕವಾಗಿಯೂ ಸದೃಢರಾಗಬೇಕೆಂದರು. ಜಮಖಂಡಿ ಕ್ಷೇತ್ರದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 20 ಸಾವಿರ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಲಾಗಿದೆ. 22 ಸಾವಿರ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ ಎಂದರು. ಉಪಪ್ರಾಚಾರ್ಯ ಭೂಷಣ ಪತ್ತಾರ, ಎಸ್‌ಡಿಎಂಸಿ ಅಧ್ಯಕ್ಷ ಸರ್ವೋತ್ತಮ ಗಲಗಲಿ, ಮುಖಂಡ ಮಲ್ಲುದಾನಗೌಡ, ಮಾಧ್ಯಮ ಸಲಹೆಗಾರ ಶ್ರೀಧರ ಕಂಬಿ, ಅಜಯ, ರಮೇಶ ಆಳಬಾಳ, ರಾಜೇಶ್ವರಿ ಹಿರೇಮಠ, ರಾಜೇಸಾಬ ಕಡಕೋಳ, ಸುರೇಶಗೌಡ ಪಾಟೀಲ, ಗಣೆಶ ಶಿರಗಣ್ಣವರ, ಶಂಕರ ಕಾಳೆ ಇದ್ದರು.