ವಿದ್ಯಾರ್ಥಿಗಳು ಸಾಂಘಿಕ ಚಟುವಟಿಕೆ ಮನೋಭಾವ ಬೆಳೆಸಿಕೊಳ್ಳಿ: ಡಾ.ಜೈರಾಜ

| Published : Feb 19 2024, 01:30 AM IST / Updated: Feb 19 2024, 01:31 AM IST

ವಿದ್ಯಾರ್ಥಿಗಳು ಸಾಂಘಿಕ ಚಟುವಟಿಕೆ ಮನೋಭಾವ ಬೆಳೆಸಿಕೊಳ್ಳಿ: ಡಾ.ಜೈರಾಜ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಲ್ಲಿ ಸಾಂಘಿಕ ಚಟುವಟಿಕೆ, ಸಹಕಾರ ಮನೋಭಾವ ಬೆಳೆಸುವುದಕ್ಕಾಗಿ ಇಂತಹ ಸಂಘದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿ ಸಂಘಟನೆ ಒಂದು ಅರ್ಥ ಪೂರ್ಣ ಲಾಂಛನದಡಿಯಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ ನಡೆಸಿದರೆ ಆಗ ವಿದ್ಯಾರ್ಥಿ ವೈಯಕ್ತಿಕವಾಗಿ, ಸಾಮೂಹಿಕವಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿ ಸಂಘದ ಅಸ್ಮಿತೆ ಮತ್ತು ಅದರ ಅಸ್ತಿತ್ವದ ಗುರುತು ವಿದ್ಯಾರ್ಥಿ ಸಂಘದ ಲಾಂಛನವಾಗಿದೆ. ಅಧಿಕೃತ ಸೀಲು ಇರುವ ಪತ್ರಕ್ಕೆ ಮಾತ್ರವೇ ಮಾನ್ಯತೆ ಇರುವಂತೆ ಅಧಿಕೃತ ಲಾಂಛನವಿರುವ ಸಂಘಟನೆಗೆ ಮಾತ್ರವೇ ಮಾನ್ಯತೆ ಇರುತ್ತದೆ ಎಂದು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ್ ತಿಳಿಸಿದರು.

ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ಹೊಸ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಲಾ ಕನಸು ಪ್ರೆಶರ್ಸ್ ಡೇ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ,ವಿದ್ಯಾರ್ಥಿ ಸಂಘದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಂಘಿಕ ಚಟುವಟಿಕೆ, ಸಹಕಾರ ಮನೋಭಾವ ಬೆಳೆಸುವುದಕ್ಕಾಗಿ ಇಂತಹ ಸಂಘದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿ ಸಂಘಟನೆ ಒಂದು ಅರ್ಥ ಪೂರ್ಣ ಲಾಂಛನದಡಿಯಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ ನಡೆಸಿದರೆ ಆಗ ವಿದ್ಯಾರ್ಥಿ ವೈಯಕ್ತಿಕವಾಗಿ, ಸಾಮೂಹಿಕವಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ಟ ಮಾತನಾಡಿ, ಪ್ರೆಶರ್ಸ್ ಡೇ ಸಮಾರಂಭ ಹಮ್ಮಿಕೊಳ್ಳುವುದರ ಹಿಂದೆ ಹೊಸ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ, ಹಿರಿಯ ಮತ್ತು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ ನಡುವೆ ಉತ್ತಮ ವಾತಾವರಣ ಕಲ್ಪಿಸುವ ಆಶಯ ಅಡಗಿದೆ. ವಿದ್ಯಾರ್ಥಿ ಸಂಘಕ್ಕೆ ಲಾಂಛನ ರಚನೆ ಆದುದು ಖುಷಿಯ ಸಂಗತಿ. ವಿದ್ಯಾರ್ಥಿ ಸಂಘದ ಲಾಂಛನವಾಗಿ ಅನ್ವಯಿಕ ಕಲೆಯ ಸ್ನಾತಕೋತ್ತರ ವಿಭಾಗದ ಕೀರ್ತನಾ ಅಲ್ಫೋನ್ಸಾ ರಚಿಸಿದ ಚಿತ್ರ ಆಯ್ಕೆಯಾಗಿರುತ್ತದೆ ಎಂದು ತಿಳಿಸಿದರು.

ಹಿರಿಯ ಬೋಧನಾ ಸಹಾಯಕ ಡಾ.ಸಂತೋಷ ಕುಮಾರ್ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಧು ಹಿರೇಮಠ, ಉಪಾಧ್ಯಕ್ಷ ವಿ.ಎಂ.ಹರೀಶ್ ಯದ ಬೋಧಕ ವೃಂದ, ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.