ನೈತಿಕ ಶಿಕ್ಷಣ ದೊರೆತಾಗ ವಿದ್ಯಾರ್ಥಿ ಭವಿಷ್ಯ ಉಜ್ವಲ: ಎನ್.ಎಸ್. ಸುಧಾಕರ್

| Published : Jul 12 2024, 01:39 AM IST

ಸಾರಾಂಶ

ತರೀಕೆರೆ, ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ದೊರೆತಾಗ ವಿದ್ಯಾರ್ಥಿ ಭವಿಷ್ಯ ಉಜ್ವಲವಾಗುತ್ತದೆ ತರೀಕೆರೆ ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಎಸ್. ಸುಧಾಕರ್ ಹೇಳಿದ್ದಾರೆ.

ಶಾಲೆಯಿಂದ ಶಾಲೆಗೆ ವಚನ ವೈಭವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ದೊರೆತಾಗ ವಿದ್ಯಾರ್ಥಿ ಭವಿಷ್ಯ ಉಜ್ವಲವಾಗುತ್ತದೆ ತರೀಕೆರೆ ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಎಸ್. ಸುಧಾಕರ್ ಹೇಳಿದ್ದಾರೆ.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಸಮೀಪದ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲೆಯಿಂದ ಶಾಲೆಗೆ ವಚನ ವೈಭವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದು ಹೇಳಿದರು.

ವಾಗ್ಮಿ ಎಚ್.ಆರ್.ಚಂದ್ರಪ್ಪ ಮಾತನಾಡಿ 12ನೇ ಶತಮಾನ ವಚನ ಸಾಹಿತ್ಯ ಮನುಷ್ಯನ ಕೈಗನ್ನಡಿ, ಅವುಗಳನ್ನು ಪ.ಗು. ಹಳಕಟ್ಟಿ ಅದನ್ನು ಸಂಗ್ರಹಿಸಿ ಮುದ್ರಿಸುವ ಕೆಲಸಕ್ಕೆ ಕೈ ಹಾಕದಿದ್ದರೆ ಬಹಳ ದೊಡ್ಡ ನಷ್ಟ ಸಾಹಿತ್ಯ ಕ್ಷೇತ್ರಕ್ಕೆ ಮನುಕುಲಕ್ಕೆ ಅಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.ನಿವೃತ್ತ ಪ್ರೌಢಶಾಲಾ ಶಿಕ್ಷಕ ಜಿ. ಚಂದ್ರಶೇಖರಪ್ಪ ಮಾತನಾಡಿ ವಚನ ಸಾಹಿತ್ಯವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಏಕಾಗ್ರತೆ ವೃದ್ದಿಸುತ್ತದೆ, ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗುತ್ತದೆ ಎಂದು ಹೇಳಿದರು.ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಸಿ.ಡಿ.ಮಮತ ಮಾತನಾಡಿ ಅನುಭವ ಮಂಟಪ ಎನ್ನುವುದು ಧಾರ್ಮಿಕ ಸಂಸ್ಥೆ, ಅದೊಂದು ಅನುಭಾವಿಗಳ ಸಂಗಮ, ಸ್ತ್ರೀ ಸ್ವಾತಂತ್ರ್ಯ ಕೊಟ್ಟ ಪವಿತ್ರ ಕ್ಷೇತ್ರ ಎಂದು ಬಣ್ಣಿಸಿದರು.

ನಿವೃತ್ತ ಶಿಕ್ಷಕ ಪುಟ್ಟಪ್ಪ ಮಾತನಾಡಿ ಅಂಗ ಸಂಸ್ಕಾರ. ತ್ಯಾಗದ ಸಂಸ್ಕಾರ, ಇಲ್ಲಿ ಪ್ರೀತಿ ದಯೆ, ಕರುಣೆ ತ್ಯಾಗ ಮಮತೆ ಅಡಗಿದೆ ಎಂದು ಹೇಳಿದರು. ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ.ರಾಜಪ್ಪ ಮಾತನಾಡಿ ನಿರಂತರವಾಗಿ ಶರಣ ಸಾಹಿತ್ಯ ವಿಚಾರ ಧಾರೆಗಳ ಕಾರ್ಯಕ್ರಮವನ್ನು ಪರಿಷತ್ತು ಮಾಡುತ್ತಿದೆ ಎಂದು ಹೇಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಟಿ.ಮಲ್ಲಿಕಾರ್ಜುನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಾನವಂಗಲದ ಜನಪದ ಕಲಾವಿದರು ಸಿ.ಎಂ.ಶಂಕರಪ್ಪ ವಚನ ಗೀತೆಗಳನ್ನು ಹಾಡಿದರು. ನಿವೃತ್ತ ಪ್ರೌಢಶಾಲಾ ಶಿಕ್ಷಕರು ನಾಗೇನಹಳ್ಳಿ ತಿಮ್ಮಯ್ಯ ವಿದ್ಯಾರ್ಥಿಗಳೊಂದಿಗೆ ವಚನ ಪ್ರಶ್ನೆ ಮತ್ತು ಸಂವಾದ ನಡೆಸಿಕೊಟ್ಟರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಷಡಾಕ್ಷರಪ್ಪ, ಮುಖ್ಯೋಪಾಧ್ಯಾಯ ಕೆ.ಟಿ.ಹಾಲೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

10ಕೆಟಿಆರ್.ಕೆ.15ಃ

ತರೀಕೆರೆ ಸಮೀಪದ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ನಡೆದ ವಚನ ವೈಭವ ಕಾರ್ಯಕ್ರಮವನ್ನು ಟಿಎಪಿಸಿಎಂಎಸ್‌ ಅಧ್ಯಕ್ಷ ಎನ್.ಎಸ್.ಸುಧಾಕರ್ ಉದ್ಘಾಟಿಸಿದರು, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಪಿ.ರಾಜಪ್ಪ ಮತ್ತಿತರರು ಇದ್ದರು.