ವಿದ್ಯಾರ್ಥಿಗಳಿಂದಲೆ ವಿಶ್ವಗುರು ಕನಸು ನನಸು: ಶಾಸಕ ಬೆಲ್ದಾಳೆ

| Published : Feb 08 2024, 01:32 AM IST

ವಿದ್ಯಾರ್ಥಿಗಳಿಂದಲೆ ವಿಶ್ವಗುರು ಕನಸು ನನಸು: ಶಾಸಕ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ದೇಶ ಕಟ್ಟಬೇಕು. ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆಯವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಮುಂಬರುವ 2047ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ, ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುವ ಧ್ಯೇಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ಕನಸು ನನಸುಗೊಳಿಸುವಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು.

ತಾಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 26ನೇ ವಾರ್ಷಿಕೋತ್ಸವ ಹಾಗೂ ಹೊಂಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬರುವ 25 ವರ್ಷ ನಮಗೆಲ್ಲರಿಗೂ ಬಹಳ ಮಹತ್ವದ್ದಾಗಿವೆ. ಇಂದಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ದೇಶ ಕಟ್ಟುವ ಸಂಕಲ್ಪ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಅಂದಾಗ ಮಾತ್ರ ಭಾರತ ವಿಶ್ವಗುರು ಎನಿಸಲಿದೆ. ಈಗಿನ ಯುವಕರು ಹಾಗೂ ವಿದ್ಯಾರ್ಥಿಗಳ ಮೇಲೆ ಭರವಸೆ ಇಟ್ಟುಕೊಂಡೇ ಮೋದಿ ವಿಶ್ವಗುರು ಕನಸು ಕಂಡಿದ್ದಾರೆ ಎಂದು ಹೇಳಿದರು.

ಇಲ್ಲಿನ ಬಯಲು ರಂಗಮಂದಿರದ ಎದುರು ಮೇಲ್ಛಾವಣಿ ಮಾಡಿಕೊಡುವಂತೆ ಪ್ರಾಚಾರ್ಯ ಚನ್ನಬಸವ ಹೇಡೆ ಮನವಿ ಮಾಡಿದ್ದಾರೆ. ಈಗಾಗಲೆ ಇದಕ್ಕೆ ಅನುಮೋದನೆ ದೊರೆತಿದ್ದು ಇನ್ನು 15 ದಿವಸಗಳಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಪತ್ರಕರ್ತ ಸದಾನಂದ ಜೋಶಿ , ಪ್ರದೀಪ ವಾತಡೆ, ಮಾಣೀಕಪ್ಪಾ ಖಾಶೆಂಪುರ, ಸುರೇಶ ಮಾಶೆಟ್ಟಿ, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಪತ್ರಾಂಕಿತ ವ್ಯವಸ್ಥಾಪಕರಾದ ನಾಗಮಣಿ ವಿ ಹೊಸಮನಿ, ತಾಲೂಕು ಕಲ್ಯಾಣಾಧಿಕಾರಿ ಸಂಗೀತಾ ಬಿರಾದಾರ, ಗ್ರಾ.ಪಂ ಅಧ್ಯಕ್ಷೆ ಧರ್ಮಾಬಾಯಿ ಮಿಟ್ಟುಸಿಂಗ ರಾಠೋಡ, ಪಿಡಿಓ ಬಿರಾದಾರ ಗೋದಾವರಿ, ಪಾಲಕ ಪ್ರತಿನಿಧಿ ಲಾಲಪ್ಪ ಕೋರಿ, ಸಂಜೀವ ಅಲ್ಲೂರೆ, ಮೊರಾರ್ಜಿ ದೇಸಾಯಿ ಶಾಲೆ ಪ್ರಾಚಾರ್ಯ ಚನ್ನಬಸವ ಹೇಡೆ, ಗೌತಮ ಕುದರೆ, ಸಿದ್ಧಲಿಂಗಯ್ಯ ಮಠಪತಿ, ಮುದಾಸಿರ ಅಲಿ ಇತರರಿದ್ದರು.