ಸಾರಾಂಶ
- ಉದ್ಯೋಗ ಮೇಳ ಉದ್ಘಾಟಿಸಿ ಪ್ರಾಚಾರ್ಯ ಡಾ.ಜೆ.ಎಲ್.ಈರಣ್ಣ ಕಿವಿಮಾತು
ಕನ್ನಡಪ್ರಭ ವಾರ್ತೆ ಮಾನ್ವಿವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಇದರಿಂದ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜೆ.ಎಲ್.ಈರಣ್ಣ ತಿಳಿಸಿದರು.ಪಟ್ಟಣದ ಕಾಲೇಜಿನಲ್ಲಿ ಫ್ಲೇಸ್ ಮೆಂಟ್ ಸೇಲ್ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್‌ಲೈನ್, ಎಕ್ಸಿಸ್ ಬ್ಯಾಂಕ್, ಐಸಿಐಸಿ ಬ್ಯಾಂಕ್, ಒಪಟಿಮಮ್ ಮ್ಯಾನ್ ಪವರ್ ಸರ್ವಿಸ್, ಜಾಬ್ ಜಂಕ್ಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಉದ್ಯೋಗ ದೊರೆಯಬೇಕಾದಲ್ಲಿ ಶಿಕ್ಷಣದ ಜೋತೆಗೆ ವಿವಿಧ ವಿಷಯಗಳ ಬಗ್ಗೆ ಕೌಶಲ್ಯವನ್ನು ಬೆಳಿಸಿಕೊಳ್ಳಬೇಕು ಹಾಗೂ ಕಂಪ್ಯೂಟರ್ ಬಳಕೆಯ ಬಗ್ಗೆ ಅಗತ್ಯವಾದ ಜ್ಞಾನವನ್ನು ಪಡೆಯುವುದು ಅಗತ್ಯವಾಗಿದೆ ಎಂದರು.ಕನ್ನಡ ಪ್ರಾಧ್ಯಾಪಕ ಡಾ.ಚನ್ನಬಸವ ಮಡಗಿರಿ ಮಾತನಾಡಿದರು.ಮೇಳದಲ್ಲಿ ಸುಮಾರು 120 ಕ್ಕೂ ಹೆಚ್ಚು ಉದ್ಯೋಗಕಾಂಕ್ಷಿಗಳು ತಮ್ಮ ದಾಖಲಾತಿ ಒಳಗೊಂಡ ಅರ್ಜಿಗಳನ್ನು ಸಲ್ಲಿಸಿದರು.ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಡಿ.ಜಿ.ಕರ್ಕಳ್ಳಿ, ಹೆಲ್ಪ್ ಲೈನ್ ನಿರ್ದೇಶಕ ಪಾಂಡುರಂಗರಾವ್, ಯಂಕನಗೌಡ ಪಾಟೀಲ್, ಶ್ರೀಧರ, ಡಾ.ಧನಂಜಯ್,ಡಾ.ಬಸವರಾಜ ಸುಂಕೇಶ್ವರ,ಕೃಷ್ಣ ಸೇರಿದಂತೆ ನೂರಾರು ಉದ್ಯೋಗಕಾಂಕ್ಷಿಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.-------------------19-ಮಾನ್ವಿ-1: ಮಾನ್ವಿ ಪಟ್ಟಣದ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.