ಸಾರಾಂಶ
ಜ್ಞಾನಭಾರತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವಕಾಶ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದ ಜ್ಞಾನಭಾರತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಆಕಾಶದಲ್ಲಿ ನಡೆವ ವಿದ್ಯಮಾನಗಳ ಕೌತುಕಗಳು ಮತ್ತು ಪ್ರಮುಖ ಗ್ರಹಗಳನ್ನು ಟೆಲಿಸ್ಕೋಪ್ ಮೂಲಕ ನೋಡಿ ಕುತೂಹಲ ತಣಿಸಿಕೊಂಡರು.
ಪಟ್ಟಣದಲ್ಲಿರುವ ಸಂಸ್ಥೆ ಕಾರ್ಯದರ್ಶಿ ಶರತ್ ಮೂರ್ತಿ ನಿವಾಸದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಗುರು, ಶನಿ, ಶುಕ್ರ ಮತ್ತು ಮಂಗಳ ಸೇರಿ ನಾಲ್ಕು ಗ್ರಹಗಳನ್ನು ಟೆಲಿಸ್ಕೋಪ್ ಸಹಾಯದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.ಈ ಕುರಿತು ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಮಾತನಾಡಿ, ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಆಕಾಶಕಾಯದಲ್ಲಿ ಗೋಚರಿಸುವ ಅಪರೂಪದ ಗ್ರಹಗಳನ್ನು ಟೆಲಿಸ್ಕೋಪ್ ನಿಂದ ನೋಡಲು ಮಕ್ಕಳಿಗೆ ಅವಕಾಶ ಕಲ್ಪಿಸ ಲಾಗಿದೆ. ಇದರಿಂದ ಖಗೋಳದಲ್ಲಿ ನಡೆಯುವ ವಿದ್ಯಮಾನ ಮತ್ತು ಕೌತುಕಗಳನ್ನು ವೀಕ್ಷಿಸುವ ಜೊತೆಯಲ್ಲಿ ಚಿತ್ರ ಸಮೇತ ಗ್ರಹಗಳನ್ನು ಪರಿಚಯಿಸಿದಂತಾಗುತ್ತದೆ. ಅಪರೂಪದ ದೃಶ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಶರತ್ ಕೃಷ್ಣಮೂರ್ತಿ ಮಾತನಾಡಿ, ಊಹೆಗೂ ನಿಲುಕದ ಹಾಗೂ ಅನತಿ ದೂರದಲ್ಲಿರುವ ಆಕಾಶಕಾಯದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಕೌತುಕವನ್ನು ತಣಿಸುವ ನಿಟ್ಟಿನಲ್ಲಿ ಎರಡು ಟೆಲಿಸ್ಕೋಪ್ ಗಳ ಮೂಲಕ ಗ್ರಹಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಖಗೋಳದ ಕುತೂಹಲದ ವಿಷಯಗಳನ್ನು ತಿಳಿಸಿದಂತಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಹನುಮಂತಪ್ಪ ಮತ್ತು ಶಿವಕುಮಾರ್ ಖಗೋಳ ಶಾಸ್ತ್ರದ ಕುರಿತು ವಿದ್ಯಾರ್ಥಿ ಗಳ ಪ್ರಶ್ನೆಗೆ ಉತ್ತರ ನೀಡುವ ಜೊತೆ ಖಗೋಳದಲ್ಲಿ ನಡೆಯುವ ಆಚ್ಚರಿಗಳ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಪ್ರಾಂಶುಪಾಲರಾದ ರಜಿಯಾಬೇಗಂ, ಶಿಕ್ಷಕರಾದ ಮಧುಶ್ರೀ, ಶುಭಶ್ರೀ, ಪೂಜಾ, ಗಿರೀಶ್, ವಸಂತ್, ಹೇಮಾವತಿ, ಲೋಕೇಶ್, ಕಂಸಾಗರ ತ್ಯಾಗರಾಜ ಮತ್ತಿತರರು ಇದ್ದರು.2 ಕೆಕೆಡಿಯು2.,2ಎ. ಕಡೂರಿನ ಜ್ಞಾನಭಾರತಿ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಟೆಲಿಸ್ಕೋಪ್ ಮೂಲಕ ಗ್ರಹಗಳ ವೀಕ್ಷಣೆ ಮಾಡಿದರು.