ಸಾರಾಂಶ
ನ.7ರಂದು ಹುಣಸೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪಟ್ಟಣದ ಗೂರಮಾರನಹಳ್ಳಿ ಮುರಾರ್ಜಿದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳ ಹಾಸನ ಜಿಲ್ಲಾ ತಂಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು, ನ.14ರಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನ.7ರಂದು ಹುಣಸೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪಟ್ಟಣದ ಗೂರಮಾರನಹಳ್ಳಿ ಮುರಾರ್ಜಿದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳ ಹಾಸನ ಜಿಲ್ಲಾ ತಂಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು, ನ.14ರಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್ ಕೆ ಪಾಂಡು, ಜಿಲ್ಲಾ ದೈಹಿಕಶಿಕ್ಷಣಾಧಿಕಾರಿ ಮಹದೇವ್, ಬಿ.ಈ.ಒ ದೀಪಾ, ಟಿ.ಪಿ.ಒ ಆನಂದ್, ಪ್ರಾಂಶುಪಾಲರಾದ ಶೈಲಜ ಎಚ್ ಜಿ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರೇಗೌಡ ಎಚ್ ಎಂ, ತರಬೇತುದಾತ ಯಲ್ಲಪ್ಪ ಎಸ್ ಮಾಂಗ್, ತಂಡಗಳ ವ್ಯವಸ್ಥಾಪಕರುಗಳಾದ ಶಂಕರ್ ಡಿ, ರಾಜು ಬಿ.ಎಂ ಹಾಗೂ ಶಾಲೆಯ ಸಿಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಪೌಢಶಾಲಾ ಬಾಲಕರು(ರನ್ನರ್ಸ್): ಚಂದನ್ ಎಸ್.ಎಂ(ನಾಯಕ), ಪ್ರೇಕ್ಷಿತ್ ಸಿ.ವಿ, ನಿತಿನ್, ಚೇತನ್ ಡಿ.ಎನ್, ರೋಹಿತ್ ಕೆ.ಕೆ, ಗಗನ್ ಎಂ.ಕೆ, ನಂದನ್ ವಿ.ವೈ, ಚಂದು ಕೆ.ಎಸ್, ಹೇಮಂತ್ ಗೌಡ, ತರುಣ್, ಪ್ರದೀಪ್, ವಾಸು,ಪ್ರಾಥಮಿಕ ಶಾಲಾ ಬಾಲಕರು: ಸೃಜನ್ ಗೌಡ ಎ.ಎಸ್(ನಾಯಕ), ಧನುಷ್ ಎಂ.ಡಿ, ಸುಜಿತ್ ಎಂ, ಸನತ್ ವಿ, ಜೀವನ್ ಕೆ.ಎಂ, ಮನೋಜ್ ಎನ್.ಸಿ, ಕಿಶೋರ್ ಸಿ.ಪಿ, ಜಯಂತ್ ಎಸ್.ಪಿ, ತನುಷ್ ಗೌಡ, ಭಾಸ್ಕರ್ ಹೆಗಡೆ, ಸುಮನ್, ಭುವನ್, ಸಿದ್ಧಾರ್ಥ್.