ಸಾರಾಂಶ
ಹನೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 42 ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಹನೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 42 ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಂಸ್ಥೆಯ ಚಿರಂಜಿವಿ ಜಾವಲಿನ್ ಥ್ರೋ, ಪವನ್ ಕುಮಾರ್ 800 ಮೀ., ಆಕಾಶ್ ಹಾಗೂ ರೇಖಾ ಎತ್ತರ ಜಿಗಿತದಲ್ಲಿ ಕ್ರಮವಾಗಿ ದ್ವಿತೀಯ, ನವೀನ್ ಗುಡ್ಡಗಾಡು ಓಟದಲ್ಲಿ 4ನೇ ಸ್ಥಾನ, ಚಂದನ್ ನಡಿಗೆ ಸ್ಫರ್ಧೆ, ವಿಕಾಶ್ ತ್ರಿವಿಧ ಜಿಗಿತದಲ್ಲಿ ತೃತೀಯ, ಗುಂಪು ಆಟಗಳ ವಿಭಾಗದಲ್ಲಿ ಥ್ರೋಬಾಲ್ ಸ್ಫರ್ಧೆಯಲ್ಲಿ ಸ್ವಾಮಿ ಮತ್ತು ತಂಡ, ಬಾಸ್ಕೇಟ್‌ಬಾಲ್ ಸ್ಫರ್ಧೆಯಲ್ಲಿ ಅಲೆಕ್ಷ್ ಜೋನಾಥನ್ ಮತ್ತು ತಂಡ, ಷಟಲ್‌ಬ್ಯಾಡ್ಮಿಟನ್ ಸ್ಫರ್ಧೆಯಲ್ಲಿ ಭಾಸ್ಕರ್ ಮತ್ತು ತಂಡ, ಚದುರಂಗ ಸ್ಫರ್ಧೆಯಲ್ಲಿಸಂಜಯ್ ಪ್ರಥಮ ಸ್ಥಾನ, ಬಾಲಾಜಿ 5ನೇ ಸ್ಥಾನ, ವಾಲಿಬಾಲ್ ಸ್ಫರ್ಧೆಯಲ್ಲಿ ಸಿದ್ದರಾಜು ಮತ್ತು ತಂಡ, ಫುಟ್‌ಬಾಲ್ ಸ್ಫರ್ಧೆಯಲ್ಲಿ ದರ್ಶನ್ ಮತ್ತು ತಂಡ, ಷಟಲ್‌ಬ್ಯಾಡ್ಮಿಟನ್ ಸ್ಫರ್ಧೆಯಲ್ಲಿ ದೀಕ್ಷಿತ ಮತ್ತು ತಂಡ, ಥ್ರೋ ಬಾಲ್ ಸ್ಫರ್ಧೆಯಲ್ಲಿ
ಮೇಘಲಾ ಮತ್ತು ತಂಡ ದ್ವಿತೀಯ ಸ್ಥಾನಗಳಿಸಿದ್ದಾರೆ. ಖೋ ಖೊ ಸ್ಫರ್ಧೆಯಲ್ಲಿ ಸಾಧನೆ ಮಾಡಿ ಮನೋಜ್ ಮತ್ತು ಮೋಹಿತ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಾಧಕ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ. ಎಸ್ ದತ್ತೇಶ್ ಕುಮಾರ್, ಪ್ರಾಂಶುಪಾಲ ಕೃಷ್ಣೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ರಾಜಪ್ಪ ಅಭಿನಂದಿಸಿದ್ದಾರೆ.