ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

| Published : Sep 27 2024, 01:20 AM IST

ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಕಪಿಲ್ ಪಬ್ಲಿಕ್ ಶಾಲೆಯವರ ಸಹಯೋಗದಲ್ಲಿ ಜರುಗಿದ 2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಖೋಖೋ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿ ಜಿಲ್ಲಾಮಟ್ಟದ ಖೋಖೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಖೋಖೋ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಕುಮಾರ ಸುಫಿಯಾನ್ ಖಾಜಿ, ಪ್ರವೀಣ ರಾಥೋಡ, ಪೃಥ್ವಿರಾಜ ಇಳಗೇರ, ಪ್ರಥಮ ತುಪ್ಪದ, ವೇದಾಂತ ಕದಮ್, ವಿನಾಯಕ ಮನಗೂಳಿ, ಸುಜಲ ಮಮದಾಪೂರ, ಮುತ್ತುರಾಜ ಜಂಗಮಶೆಟ್ಟಿ, ಗಿರೀಶ ಹಟ್ಟಿ, ಮಹಾಂತೇಶ ಹಾವನ್ನವರ, ಪ್ರೀತಂ ತೇಲಿ ಮತ್ತು ಸ್ಟಿವನ್ ರಾಥೋಡ್ ಈ ವಿದ್ಯಾರ್ಥಿಗಳಿದ್ದ ಖೋಖೋ ತಂಡವು ಉತ್ತಮ ಸಾಧನೆಯನ್ನು ಮಾಡಿ ಜಿಲ್ಲಾಮಟ್ಟದ ಖೋಖೋ ಪಂದ್ಯಾವಳಿಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಪ್ರೌಢಶಾಲಾ ಬಾಲಕರ ವಿಭಾಗದ ಖೋಖೋ ಪಂದ್ಯಾವಳಿಯ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಓದುತ್ತಿರುವ ಕುಮಾರ ಸಮರ್ಥ ಪವಾರ, ಅಜಿತ ಚಹ್ವಾಣ, ಪ್ರಜ್ವಲ ಬಳಬಟ್ಟಿ, ಪ್ರಜ್ವಲ ಬಗಲಿ, ಇಂಜುಮಾಮ್ ಹುದಲಿ, ಋಷಿಕೇಶ ಪಾಟೀಲ, ಅರ್ಷಿಯಾನ ಬಕ್ಷಿ, ಶ್ರೀವತ್ಸವ ಗಿರಿನಿವಾಸ, ಪವನ ಹಳ್ಳದಮನಿ, ಬಸಂತಕುಮಾರ ಚಿಮ್ಮಲಗಿ, ಪ್ರಣವ ಬಿಜ್ಜೂರ, ಸಮರ್ಥ ಬಿರಾದಾರ ಈ ವಿದ್ಯಾರ್ಥಿಗಳಿದ್ದ ಖೋಖೋ ತಂಡವು ಉತ್ತಮ ಸಾಧನೆಯನ್ನು ಮಾಡಿ ಜಿಲ್ಲಾಮಟ್ಟದ ಖೋಖೋ ಪಂದ್ಯಾವಳಿಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಜಿಲ್ಲಾ ಮಟ್ಟದ ಕ್ರೀಡಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಅದ್ಭುತ ಖೋಖೋ ಆಟದ ಸಾಧನೆಗೆ ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಅಧ್ಯಕ್ಷ ಶಾಜು ಜೋಸೆಫ್, ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ಅನಿಲ ತೊರವಿ, ಪ್ರೀತಿ ಕಾಳೆ, ಸವಿತಾ ಕೋಳಿ, ಆನಂದ ಬಿರಾದಾರ ಹಾಗೂ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.