ಹನೂರಿನ ತುಳಸಿಕೆರೆ ವಿದ್ಯಾರ್ಥಿಗಳಿಗೂ ಬೇಕು ಗುರ್ಕಾ ವಾಹನ

| Published : Jun 24 2024, 01:35 AM IST

ಹನೂರಿನ ತುಳಸಿಕೆರೆ ವಿದ್ಯಾರ್ಥಿಗಳಿಗೂ ಬೇಕು ಗುರ್ಕಾ ವಾಹನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡು ಪ್ರಾಣಿಗಳ ಹಾವಳಿ ನಡುವೆಯೂ ವಿದ್ಯಾರ್ಥಿಗಳು ಶಾಲೆಗೆ ಹೋಗುವುದರಿಂದ ಹನೂರಿನ ತುಳಸಿಕೆರೆ ಗ್ರಾಮದ ವಿದ್ಯಾರ್ಥಿಗಳಿಗೂ ಗುರ್ಕಾ ವಾಹನ ವಿಸ್ತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರ ಆತಂಕ

ಕನ್ನಡಪ್ರಭ ವಾರ್ತೆ ಹನೂರು

ಕಾಡು ಪ್ರಾಣಿಗಳ ಹಾವಳಿ ನಡುವೆಯೂ ವಿದ್ಯಾರ್ಥಿಗಳು ಶಾಲೆಗೆ ಹೋಗುವುದರಿಂದ ತುಳಸಿಕೆರೆ ಗ್ರಾಮದ ವಿದ್ಯಾರ್ಥಿಗಳಿಗೂ ಗುರ್ಕಾ ವಾಹನ ವಿಸ್ತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ತುಳಸಿಕೆರೆ ಗ್ರಾಮದಲ್ಲಿ ಒಂದರಿಂದ ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಮಲೆ ಮಹದೇಶ್ವರ ಬೆಟ್ಟ ಹಾಗೂ ಇನ್ನಿತರ ಕಡೆ ಹೋಗಿ ಬರಲು ಅರಣ್ಯ ಪ್ರದೇಶದ ಕಲ್ಲು ಮಣ್ಣಿನ ರಸ್ತೆಯಲ್ಲಿ ಬರಬೇಕಾಗಿದೆ.

ಜಿಲ್ಲಾಡಳಿತ ತುಳಸಿಕೆರೆ ಗ್ರಾಮದಿಂದ 10 ವಿದ್ಯಾರ್ಥಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ದಿನನಿತ್ಯ ಈ ದುರ್ಗಮ ಅರಣ್ಯದಲ್ಲಿ ಹೋಗಿ ಬರಬೇಕಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಆತಂಕದಲ್ಲಿಯೇ ಮಕ್ಕಳು ಶಾಲೆಗೆ ನಡೆದುಕೊಂಡೆ ಹೋಗಿ ಬರಬೇಕಾಗಿದೆ.

ಜಿಲ್ಲಾಡಳಿತ ಇತ್ತ ಗಮನ ಹರಿಸಿ

ವಿದ್ಯಾರ್ಥಿಗಳ ಪೋಷಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದು ಇಂಡಿಗನತ್ತ ಗ್ರಾಮದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಹೋಗುವ ವಿದ್ಯಾರ್ಥಿಗಳಿಗೆ ಗುರ್ಕಾ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ. ಈ ವಾಹನವನ್ನು ತುಳಸಿಕೆರೆ ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹ ವಿಸ್ತರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ : ಮಲೆ ಮಾದೇಶ್ವರ ಬೆಟ್ಟದಿಂದ 4 ಕಿ.ಮೀ ದೂರದಲ್ಲಿರುವ ತುಳಸಿಕೆರೆ ಗ್ರಾಮದಿಂದ ವಿದ್ಯಾರ್ಥಿಗಳು ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ಹೋಗುವ ಮಾರ್ಗ ಅರಣ್ಯ ಪ್ರದೇಶವಾಗಿದ್ದು, ರಸ್ತೆಯೂ ಸರಿ ಇಲ್ಲ. ಕಾಡಾನೆ, ಚಿರತೆ ಹಾಗೂ ಹಂದಿಗಳ ಸಹ ಈ ಭಾಗದಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿದೆ. ಕಳೆದ ಹಲವಾರು ದಿನಗಳಿಂದ ಕಾಡಾನೆಯೊಂದು ವಿದ್ಯಾರ್ಥಿಗಳು ಗ್ರಾಮಸ್ಥರು ಓಡಾಡುವ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ನಿಂತು ಆತಂಕ ಉಂಟು ಮಾಡಿರುವ ಪ್ರಸಂಗವು ಜರುಗಿದೆ. ಹೀಗಾಗಿ ದಿನನಿತ್ಯ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗಿ ಬರುವ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ದಿನನಿತ್ಯ ಮಕ್ಕಳಿಗೆ ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಲೆ ಮಾದೇಶ್ವರ ಬೆಟ್ಟದಿಂದ 4 ಕಿ.ಮೀ ದೂರದಲ್ಲಿರುವ ಗ್ರಾಮವನ್ನು ಸರ್ಕಾರ ಯಾವುದೇ ಸೌಲಭ್ಯ ಕಲ್ಪಿಸದೆ ಮೂಲಗುಂಪು ಮಾಡಿದೆ. ಇದರ ನಡುವೆಯೂ ಸಹ ತುಳಸಿಕೆರೆ ಗ್ರಾಮದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಲೆ ಮಾದೇಶ್ವರ ಬೆಟ್ಟಕ್ಕೆ ಅರಣ್ಯ ಪ್ರದೇಶದ ದುರ್ಗಮ ರಸ್ತೆಯಲ್ಲಿ ದಿನನಿತ್ಯ ಶಾಲೆಗೆ ಹೋಗಿ ಬರುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ದಾಳಿಗೆ ಒಳಗಾದರೆ ಏನು ಮಾಡುವುದು ಎಂಬ ಪೋಷಕರ ಚಿಂತೆಯಾಗಿದೆ. ಹೀಗಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಇಂಡಿಗನತ್ತ ಗ್ರಾಮಕ್ಕೆ ಗುರ್ಕ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ತುಳಸಿಕೆರೆ ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೂ ಸಹ ವಾಹನದ ವ್ಯವಸ್ಥೆ ವಿಸ್ತರಿಸುವ ಮೂಲಕ ಜಿಲ್ಲಾಡಳಿತ ಆತಂಕದ ನಡುವೆ ಹೋಗಿ ಬರುವ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು.

ಕೆಂಪೇಗೌಡ, ಗ್ರಾಪಂ ಮಾಜಿ ಸದಸ್ಯ, ತುಳಸಿಕೆರೆ