ವಿದ್ಯಾರ್ಥಿಗಳು ತಮ್ಮಲ್ಲಿರುವ ವಿಶೇಷ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಉಪಯೋಗಿಸಿಕೊಳ್ಳಬೇಕು

ಯಲಬುರ್ಗಾ: ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್‌.ವಿ. ಧರಣಾ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಯಲಬುರ್ಗಾ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ವಿಶೇಷ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಉಪಯೋಗಿಸಿಕೊಳ್ಳಬೇಕು. ಪ್ರತಿ ಮಗುವಿಗೆ ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿದರು. ಬಿಆರ್‌ಪಿ ಶರಣಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಬಿಆರ್‌ಪಿ ಹುಸೇನ್ ಭಗವಾನ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶರಣಯ್ಯ ಸರಗಣಾಚಾರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಬಳಿಗಾರ, ಶಿಕ್ಷಕ ಶಶಿಧರ ಮಾಲಿಪಾಟೀಲ್, ಶಾಲೆಯ ಮುಖ್ಯಶಿಕ್ಷಕ ಸಿದ್ದಪ್ಪ ಕಟ್ಟಿ, ಶಿಕ್ಷಕರಾದ ಕಳಕಮಲ್ಲಪ್ಪ ಅಂತೂರ, ಮೈಲಾರಪ್ಪ ನಾಯಕನೂರು, ಪರಮೇಶ ಚಿಂತಾಮಣಿ, ಚಂದ್ರಪ್ಪ ರಾಜೂರು, ನಾಗರಾಜ ನಡುಲಕೇರಿ, ನಾಗರಾಜ ಕುರಿ, ಶಾಂತಪ್ಪ ಜುಮ್ಮಣ್ಣನವರ, ರಾಜಮಹಮ್ಮದ ಬಾಳಿಕಾಯಿ, ಮರ್ತುಜಸಾಬ ಮುಜಾವರ, ಬಸವನಗೌಡ ರಾಯನಗೌಡ್ರ, ಮಂಜು ಕಲ್ಲೂರು, ಶಿವಪ್ಪ ಈಬೇರಿ, ಪ್ರಾಣೇಶ ವಲ್ಮಕೊಂಡಿ ಸೇರಿದಂತೆ ಮತ್ತಿತರರು ಇದ್ದರು.