ಮುಂಡಗೋಡದಲ್ಲಿ ೧೨೫೩ ವಿದ್ಯಾರ್ಥಿಗಳು ಹಾಜರು

| Published : Mar 22 2025, 02:04 AM IST

ಸಾರಾಂಶ

ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ದಿನ ಕನ್ನಡ ಭಾಷೆಗೆ ೧೮ ಜನ ಗೈರು ಹಾಜರಾಗಿದ್ದಾರೆ.

ಮುಂಡಗೋಡ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಮೊದಲ ದಿನ ಕನ್ನಡ ಭಾಷೆಗೆ ೧೮ ಜನ ಗೈರು ಹಾಜರಾಗಿದ್ದಾರೆ.

ತಾಲೂಕಿನಲ್ಲಿ ಪರೀಕ್ಷೆ ಬರೆಯಬೇಕಿದ್ದ ೧೨೭೧ ವಿದ್ಯಾರ್ಥಿಗಳ ಪೈಕಿ ಶುಕ್ರವಾರ ನಡೆದ ಕನ್ನಡ ಭಾಷೆಗೆ ೧೨೫೩ ಜನ ಪರೀಕ್ಷೆ ಬರೆದಿದ್ದು, ೧೮ ಮಕ್ಕಳು ಗೈರು ಹಾಜರಾಗಿದ್ದಾರೆ.

ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಯಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ರೋಟರಿ ಪ್ರೌಢ ಶಾಲೆ, ಲೊಯೋಲಾ ಪ್ರೌಢ ಶಾಲೆ, ತಾಲೂಕಿನ ಕಾತೂರ ಪ್ರೌಢ ಶಾಲೆ ಹಾಗೂ ಮಳಗಿ ಸರಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಒಟ್ಟು ೫ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾವುದೇ ತೊಂದರೆಯಾಗದಂತೆ ಪಾರದರ್ಶಕವಾಗಿ ಪರೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಸುಮಾ ತಿಳಿಸಿದರು.

ಮುಂಡಗೋಡ ತಾಲೂಕಿನಲ್ಲಿ ೧೨೫೩ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದರು.