ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳ ಉನ್ನತಿ: ಜಿ.ಎಂ. ಹೊಸ್ಮನಿ

| Published : Sep 15 2025, 01:01 AM IST

ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳ ಉನ್ನತಿ: ಜಿ.ಎಂ. ಹೊಸ್ಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ಪಟ್ಟಣದ ಮಗಜ ಮಂಗಲ ಭವನದಲ್ಲಿ 2001-02ನೇ ಸಾಲಿನ ಶ್ರೀ ಗವಿಸಿದ್ಧೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕುಕನೂರು: ಅಂದಿನ ದಿನಗಳಲ್ಲಿ ಶಿಕ್ಷಕರು ಕಠಿಣವಾದ ಬೋಧನೆ ಮೂಲಕ ಶಿಕ್ಷಣ ನೀಡಿದ್ದರಿಂದ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಸಾಧ್ಯವಾಗಿದೆ ಎಂದು ಶಿಕ್ಷಕ ಜಿ.ಎಂ. ಹೊಸ್ಮನಿ ಹೇಳಿದರು.

ಪಟ್ಟಣದ ಮಗಜ ಮಂಗಲ ಭವನದಲ್ಲಿ 2001-02ನೇ ಸಾಲಿನ ಶ್ರೀ ಗವಿಸಿದ್ಧೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳಿಗೆ ಗೌರವದ ಜತೆ ಭಯವೂ ಇತ್ತು. ಅದು ವಿದ್ಯಾರ್ಥಿಗಳ ಉನ್ನತಿಗೆ ಕಾರಣವಾಗಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಬಸವಣ್ಣೆಮ್ಮ ಅರಳಲೆಮಠ ಮಾತನಾಡಿ, ನಮ್ಮಿಂದ ಕಲಿತ ವಿದ್ಯಾರ್ಥಿಗಳು ದೊಡ್ಡ ವ್ಯಕ್ತಿಗಳಾಗಿ ಬಂದು ನಿಂತಾಗ ಹೆಮ್ಮೆ ಎನಿಸುತ್ತದೆ ಎಂದರು.

ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಆರ್.ಟಿ. ಬಾಕಳೆ ಮಾತನಾಡಿ, ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠವಾದುದು. ನನ್ನ ವೃತ್ತಿ ನನಗೆ ಹೆಮ್ಮೆ ನೀಡಿದೆ ಎಂದರು.

ಹಳೆಯ ವಿದ್ಯಾರ್ಥಿನಿಯಾದ ನಿರ್ಮಲಾ ಹಟ್ಟಿ, ಗಿರಿಜಾ ಹಾಗೂ ವಿದ್ಯಾರ್ಥಿಗಳಾದ ವಿಜಯೇಂದ್ರ ಶಹಪುರ, ಮಂಜುನಾಥ ಗುತ್ತಿ, ಮಂಜುನಾಥ ಮನ್ನಾಪುರ, ಗವಿಸಿದ್ದಪ್ಪ ಕವಲೂರು, ಉದಯ ಕೂಡ್ಲಿಗಿ ಹಾಗೂ ಸಹಪಾಠಿಗಳು ಅನಿಸಿಕೆಗಳನ್ನು ಹಂಚಿಕೊಂಡರು.

ನಿವೃತ್ತ ಮುಖ್ಯೋಪಾಧ್ಯಾಯ ಡಾ. ಕೆ.ಬಿ. ಬ್ಯಾಳಿ, ಶಿಕ್ಷಕರಾದ ವಿ.ಕೆ. ಬಂಡಿವಡ್ಡರ್, ಜಿ.ಎಂ. ಹೊಸಮನಿ, ಎಂ.ಕೆ. ತುಪ್ಪದ, ಎಸ್.ಎಂ. ಹಿರೇಮಠ, ಆರ್.ಟಿ. ಬಾಕಳೆ, ಅಕ್ಕಮಹಾದೇವಿ ಕರಡಿ, ಅನ್ನಪೂರ್ಣಾ ತಿಪ್ಪಶೆಟ್ಟಿ, ರುದ್ರಪ್ಪ ಶಿರೂರು, ಶಿವಪ್ಪ ಇಬೇರಿ, ಆರ್.ಬಿ. ತಳವಾರ, ನಾಗರಾಜ ಕುಕನೂರು, ವಿ.ಬಿ. ಕಟ್ಟಿ, ಎಸ್.ಜೆ. ಪಾಟೀಲ್, ರಾಮಣ್ಣ ಹಳ್ಳಿಕೇರಿ, ಗುದ್ನೇಪ್ಪ ಮನ್ನಾಪುರ ಹಾಗೂ ಶಾಲಾ ಸಿಬ್ಬಂದಿ ಮೃತ್ಯುಂಜಯ ಹಿರೇಮಠ, ಪಿ.ವಿ. ಸುಳಿಭಾವಿ ಇದ್ದರು.