ಸಾರಾಂಶ
ವಿಶ್ವವಿದ್ಯಾಲಯದ ಶುಲ್ಕವನ್ನು ಪಡೆಯಬೇಕು. ಪ್ರವೇಶ ಅರ್ಜಿಯ ಶುಲ್ಕವನ್ನು ಕಡಿತ ಮಾಡಬೇಕು.
ಹೊಸಪೇಟೆ: ವಿಜಯನಗರ ಕಾಲೇಜ್‌ನಲ್ಲಿ ಪದವಿ ಪ್ರವೇಶ 3ನೇ ಸೆಮಿಸ್ಟರ್ ಹಾಗೂ 5ನೇ ಸೆಮಿಸ್ಟರ್ ಶುಲ್ಕ ಕಡಿತ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ಕಾಲೇಜುಗಳಲ್ಲಿ ಪ್ರತಿ ವರ್ಷದ ಹಾಗೆ ಈ ವರ್ಷವೂ ಮೂರನೇ ಸೆಮಿಸ್ಟರ್ ಹಾಗೂ ಐದನೇ ಸೆಮಿಸ್ಟರ್ ಪದವಿ ಕೋರ್ಸ್ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರ್ಕಾರಿ ಶುಲ್ಕದ ಜೊತೆಯಲ್ಲಿ ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ. ಬಡ, ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ಪದವಿ ಪ್ರವೇಶ ಮಾಡಲು ತೊಂದರೆಯಾಗುತ್ತಿದೆ. ಕಾಲೇಜು ಆಡಳಿತ ಮಂಡಳಿ ಮನಬಂದಂತೆ ಶುಲ್ಕವನ್ನು ಹಾಕಿದರೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ವಿಶ್ವವಿದ್ಯಾಲಯದ ಶುಲ್ಕವನ್ನು ಪಡೆಯಬೇಕು. ಪ್ರವೇಶ ಅರ್ಜಿಯ ಶುಲ್ಕವನ್ನು ಕಡಿತ ಮಾಡಬೇಕು. ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಡೊನೇಷನ್ ಪಡೆಯಬಾರದು ಎಂದು ಒತ್ತಾಯಿಸಿದರು.ಎಸ್‌ಎಫ್‌ಐನ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಶಿವಾರೆಡ್ಡಿ, ಜಂಟಿ ಕಾರ್ಯದರ್ಶಿ ಕೆ.ಎ.ಪವನ್‌ಕುಮಾರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಸ್.ಎಫ್.ಐ ವತಿಯಿಂದ ಶನಿವಾರ ವಿಜಯನಗರ ಕಾಲೇಜ್ ಎದುರು ಪ್ರತಿಭಟನೆ ನಡೆಸಲಾಯಿತು.