ಸಾರಾಂಶ
ಶಿರಸಿ: ಸಂಸ್ಕಾರಯುತ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಂಗಳವಾರ ತಾಲೂಕಿನ ಬನವಾಸಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಯೋಜನೆಯಲ್ಲಿ ನಿರ್ಮಾಣಗೊಂಡ ೨ ನೂತನ ಕೊಠಡಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.ಹೆಣ್ಣುಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಆದರಿಂದ ಇಡೀ ಕುಟುಂಬದ ಸದಸ್ಯರು ವಿದ್ಯಾವಂತರಾಗುತ್ತಾರೆ. ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಕೊಂಡರೆ ಸಾಧನೆ ಮಾಡಲು ಸಾಧ್ಯ. ನಡುವಳಿಕೆ ಜಗತ್ತಿನ ಎಲ್ಲರ ಕಡೆಗಳಿಗೂ ಗೌರವ ಸಿಗುತ್ತದೆ. ಇದು ನನ್ನ ಕಾಲೇಜು. ಆದ್ದರಿಂದ ಇದಕ್ಕೆ ಬೇಕಾದ ಸೌಲಭ್ಯ ಒದಗಿಸಲು ನಾನು ಬದ್ಧನಿದ್ದೇನೆ. ಅಗತ್ಯವಾದ ಕಂಪ್ಯೂಟರ್ ಹಾಗೂ ಸಭಾಭವನ ನೀಡುತ್ತೇನೆ. ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರು ಉದ್ಯೋಗದಲ್ಲಿ ಇರುವುದಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ. ೫೦ ರಷ್ಟು ಉದ್ಯೋಗಿಗಳಾಗಬೇಕು. ಸಮಾಜದಲ್ಲಿ ಸಾಮರಸ್ಯ ಬದುಕು ನಿರ್ಮಾಣವಾಗಬೇಕು ಎಂದು ಉದೇಶದಿಂದ ರಾಜ್ಯ ಸರ್ಕಾರ ಮಹಿಳೆಯರಿಗೆ ಗ್ಯಾರೆಂಟಿ ಯೋಜನೆ ನೀಡಿದೆ ಎಂದರು.
ಕಳೆದ ೧೫ ವರ್ಷಗಳಿಂದ ನಿಯತ್ತಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸನ್ನು ಹೊತ್ತಿ ಬನವಾಸಿ ಕಾಲೇಜಿನ ಆಡಳಿತ ಸಮಿತಿಯು ಕೆಲಸ ಮಾಡುತ್ತಿದೆ. ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಈ ಕಾಲೇಜಿಗೆ ಬರುತ್ತಿದ್ದಾರೆ. ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ನೂತನ ವಸತಿ ಗೃಹದ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಿದ್ದೇವೆ. ಅದರಂತೆ ಬಾಲಕರ ಶೌಚಾಲಯ, ಆವರಣದ ತಡೆಗೋಡೆ ಹಾಗೂ ಸಭಾಭವನ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ ಎಂದರು.ಕಾಲೇಜಿನ ಉಪಾಧ್ಯಕ್ಷ ಸಿದ್ದಲಿಂಗಪ್ಪ ಉಗ್ರಾಣದ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಉಪಾಧ್ಯಕ್ಷ ಸಿದ್ದಲಿಂಗೇಶ ನರೇಗಲ್, ತಾಪಂ ಕಾರ್ಯ ನಿರ್ವಣಾಧಿಕಾರಿ ಚನ್ನಬಸಪ್ಪ ಹಾವಣಗಿ, ದ್ಯಾಮಣ್ಣ ದೊಡ್ಮನಿ, ಬಸವರಾಜ ದೊಡ್ಮನಿ, ಗಣಪತಿ ನಾಯ್ಕ, ಬಿ.ಶಿವಾಜಿ ಪ್ರಕಾಶ ಬಂಗ್ಲೆ, ಪೂರ್ಣಿಮಾ ಪಿಳ್ಳೆ, ಶಂಕರ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ದಿನೇಶ.ಕೆ ಸ್ವಾಗತಿಸಿದರು. ಕೀರ್ತಿ ಸಂಗಡಿಗರು ಪ್ರಾರ್ಥಿಸಿದರು.