ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚು ತೊಡಗಿ

| Published : Jul 28 2025, 12:30 AM IST

ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚು ತೊಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚು ತೊಡಗಿ

ಕನ್ನಡಪ್ರಭ ವಾರ್ತೆ ತಿಪಟೂರು

ಇಂದಿನ ಸ್ಪರ್ಧಾ ಜಗತ್ತಿನಲ್ಲಿ ದೊಡ್ಡಮಟ್ಟದ ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆಯ ವಿಷಯ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವೇಗವಾಗಿ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಪೂರಕವಾಗಿ ವಿದ್ಯಾರ್ಥಿ ಸಮೂಹ ಇನ್ನೂ ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕೆಂದು ಫಿಲಿಪೈನ್ಸ್ ದೇಶದ ಟೆಕ್ನಾಲಜಿಕಲ್ ಯುನಿವರ್ಸಿಟಿಯ ಡಾ.ಲೀನ್ ಕಾರ್ಲೋ ಸ್ಯಾಂಟೋಸ್ ಟೊಲೆಂಟಿನೊ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ ವಿಷಯ ಕುರಿತು ಆಯೋಜಿಸಿದ್ದ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿ ಸಮೂಹವು ಇದ್ದಕ್ಕೆ ಪೂರಕವಾಗಿ ತಮ್ಮಗಳ ಕಾರ್ಯವೈಖರಿಗಳನ್ನು ಹೆಚ್ಚಿನ ಗುಣಮಟ್ಟದೊಂದಿಗೆ ಹಲವು ರೀತಿಯ ಅಧ್ಯಯನಗಳ ತಯಾರಿಗಳನ್ನು ಸಕಾಲದಲ್ಲಿ ನಡೆಸುವ ಮೂಲಕ ಉದ್ಯೋಗ ಭದ್ರತೆಗಳನ್ನು ಖಾತರಿಪಡಿಸಿಕೊಳ್ಳಬೇಕು. ಇಂಗ್ಲೆಂಡ್, ಹಾಂಕಾಂಗ್, ಅಮೇರಿಕ, ಚೀನಾ ದೇಶಗಳಲ್ಲಿ ಕೌಶಲ್ಯಯುತ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಿದ್ದು ಈ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳು ನಿಮಗೆ ಅವಶ್ಯಕವಾಗಿದ್ದು ನೂತನ ಅನ್ವೇಷಣೆ, ಸಂಶೋಧನೆಗಳತ್ತ ಕಾರ್ಯಪ್ರವೃತ್ತರಾಗಿ ಪೇಪರ್ ಪ್ರೆಸಂಟೇಷನ್ ಮೂಲಕ ಅವಕಾಶಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಬೆಂಗಳೂರಿನ ಇಂಟೆಲ್ ಕೋರ್ಪೋರೇಶನ್ ಮ್ಯಾನೇಜರ್ ಪ್ರವೀಣ್‌ಕುಮಾರ್ ಮಾತನಾಡಿ, ಕೃತಕ ಬುದ್ಧಿಮತ್ತೆ ಮತ್ತು ಅಂತರ್ಜಾಲ ಭದ್ರತೆ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮಾಹಿತಿ ನೀಡುತ್ತಾ, ಡೇಟಾಸೈನ್ಸ್, ಸೈಬರ್ ಸೆಕ್ಯೂರಿಟಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ನಿಮಗೆ ಸಾಕಷ್ಟು ಅವಶಕಾಶಗಳಿದ್ದು ಇಂಜಿನಿಯರ್ ವಿದ್ಯಾರ್ಥಿಗಲು ಅನ್ವೇಷಣೆಯೊಂದಿಗೆ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಂಡು ಉದ್ಯೋಗಸ್ಥರಾಗಬೇಕೆಂದರು. ಬೆಂಗಳೂರು ಐಇಇಇ ವಿಭಾಗದ ವೈಸ್ ಛೇರ್‌ಮನ್ ಪರಮೇಶಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಐಇಇಇ ವಿಷಯ ಸಂಬಂಧ ಮತ್ತು ತಾಂತ್ರಿಕತೆಯ ಸಾರ್ಥಕತೆಯ ಬಗ್ಗೆ ಹತ್ತು ಹಲವು ಮತ್ತು ವಾಸ್ತವಾಂಶಗಳನ್ನು ಹಿಂದಿನ ಮತ್ತು ಮುಂದಿನ ಸ್ಥಿತಿಗತಿಗಳ ಅಧ್ಯಯನದ ಬಗ್ಗೆ ತೀವ್ರ ನೀಗವಹಿಸುವ ಮೂಲಕ ಎಚ್ಚರಿಕೆಯಿಂದ ಮುಂದೆ ಸಾಗಬೇಕೆಂದು ತಿಳಿಸಿದರು. ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳ ಮೂಲಕ ಗಣನೀಯವಾಗಿ ಉನ್ನತ ಮಟ್ಟದಲ್ಲಿ ವೈಜ್ಞಾನಿಕ ಲೇಖನಗಳು ಮತ್ತು ಉಪನ್ಯಾಸಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಕಾರ್ಯಗಾರಗಳಲ್ಲಿ ಮತ್ತು ಉನ್ನತಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಇಂದಿನ ವಿದ್ಯಾರ್ಥಿ ಸಮೂಹವು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಕೆವಿಎಸ್ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆವಿಎಸ್ ಉಪಾಧ್ಯಕ್ಷ ಜಿ.ಪಿ. ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್. ಸಂಗಮೇಶ್, ಎಚ್.ಜಿ. ಸುಧಾಕರ್, ಟಿ.ಯು. ಜಗದೀಶಮೂರ್ತಿ, ಕೆಐಟಿ ಪ್ರಾಂಶುಪಾಲ ಡಾ.ಜಿ.ಡಿ ಗುರುಮೂರ್ತಿ, ಎಐ ಮತ್ತು ಎಂಎಸ್‌ಇ ವಿಭಾಗದ ಮುಖ್ಯಸ್ಥ ಡಾ.ಎಂ.ಎಲ್. ರವಿಪ್ರಕಾಶ್, ಸಿಎಸ್‌ಇ ವಿಭಾಗದ ಮುಖ್ಯಸ್ಥೆ ಡಾ.ಸಿ.ಮೈತ್ರಿ, ಎಂಬಿಎ ವಿಭಾಗದ ಮುಖ್ಯಸ್ಥೆ ಡಾ.ದೀಪ್ತಿಅಮಿತ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರುಗಳು ಬೋಧಕ, ಬೋಧಕೇತರರು, ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.