ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಬೇಕು: ಬಿದ್ದಾಟಂಡ ಪವನ್ ಮುತ್ತಪ್ಪ

| Published : Jan 01 2025, 12:01 AM IST

ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಬೇಕು: ಬಿದ್ದಾಟಂಡ ಪವನ್ ಮುತ್ತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನುಸೋಮವಾರಪೇಟೆ ಗ್ರೀನ್ ಲ್ಯಾಂಡ್ ಎಸ್ಟೇಟ್ ನ ಮಾಲೀಕ ಬಿದ್ದಾಟಂಡ ಪವನ್ ಮುತ್ತಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಂಸ್ಕಾರ, ಉತ್ತಮ ಗುಣ ನಡತೆಗಳನ್ನು ರೂಢಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಸೋಮವಾರಪೇಟೆ ಗ್ರೀನ್ ಲ್ಯಾಂಡ್ ಎಸ್ಟೇಟ್ ನ ಮಾಲೀಕ ಬಿದ್ದಾಟಂಡ ಪವನ್ ಮುತ್ತಪ್ಪ ಹೇಳಿದರು.ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ವ್ಯಾವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದ ಅವರು ಇಂಗ್ಲೀಷ್ ಭಾಷೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಕರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು. ನಿವೃತ್ತ ಪ್ರಾಂಶುಪಾಲ, ಶಾಲೆಯ ನಿರ್ದೇಶಕ ಪ್ರೊ. ಕಲ್ಯಾಟಂಡ ಪೂಣಚ್ಚ ಮಾತನಾಡಿ, ಪ್ರೌಢ ಶಿಕ್ಷಣವನ್ನು ಹೊಂದಿದ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದುವಲ್ಲಿ ಪೋಷಕರ ಪಾತ್ರ ಮುಖ್ಯ. ಪೋಷಕರ ಸಹಕಾರದಿಂದ ವಿದ್ಯಾಸಂಸ್ಥೆಯಲ್ಲಿ ಉತ್ತಮ ವಿದ್ಯಾರ್ಥಿಗಳು ರೂಪಗೊಂಡು ಶಾಲೆಗೆ ಕೀರ್ತಿ ಬರುವಂತಾಗುತ್ತದೆ ಎಂದರು.ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವು ವರ್ಷಗಳಿಂದ ಶಾಲೆಯು ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುತ್ತಿದೆ. ಈಗಾಗಲೇ ಸಹಸ್ರಾರು ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. ಇದು ಶಾಲೆಗೆ ಹೆಮ್ಮೆಯ ವಿಚಾರ. ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದೆ. ಪಠ್ಯದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕಿದೆ. ಅಂತೆಯೇ ಶಾಲೆಗೆ ಸುಸಜ್ಜಿತ ಆಟದ ಮೈದಾನವನ್ನು ನಿರ್ಮಿಸಲು ಆಡಳಿತ ಮಂಡಳಿ ಉದ್ದೇಶಿಸಿದೆ ಎಂದರು.

ಪೋಷಕರ ಸಹಕಾರದಿಂದ ಶಾಲೆಗೆ ಉತ್ತಮ ಫಲಿತಾಂಶ ತರಲು ಸಾಧ್ಯ. ಹಲವು ವರ್ಷಗಳಿಂದ ಶಾಲೆ ಉತ್ತಮ ಫಲಿತಾಂಶವನ್ನು ನೀಡುತ್ತಿದೆ. ಪರೀಕ್ಷಾ ದಿನಗಳು ಸಮೀಪಿಸುತ್ತಿರುವುದರಿಂದ ಮೊಬೈಲ್, ಟಿವಿ ಗಳಿಂದ ವಿದ್ಯಾರ್ಥಿಗಳು ದೂರವಿದ್ದು ಓದಿನ ಕಡೆಗೆ ಗಮನ ಹರಿಸಬೇಕು ಎಂದರು.ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಅತಿಥಿಗಳು ಬಹುಮಾನ ನೀಡಿ ಶುಭ ಹಾರೈಸಿದರು.ಕಾರ್ಯಕ್ರಮದ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಅಪ್ಪಾರಂಡ ಅಪ್ಪಯ್ಯ, ಕೊಂಬಂಡ ಗಣೇಶ್, ಬೊಪ್ಪಂಡ ಕುಶಾಲಪ್ಪ ನಿವೃತ್ತ ಡಿವೈಎಸ್ ಪಿ, ಬಿದ್ದಾಟಂಡ ಮುತ್ತಣ್ಣ, ನಿವೃತ್ತ ಎ ಸಿ ಪಿ, ಬೊಳ್ಳಚೆಟ್ಟಿರ ಸುರೇಶ್, ಕಲಿಯಂಡ ಕೌಶಿಕ್ ಕುಶಾಲಪ್ಪ, ಅಪ್ಪಚೇಟ್ಟೋಳ ನವೀನ್ ಅಪ್ಪಯ್ಯ, ಚೌರಿರ ಮಂದಣ್ಣ, ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ, ಪೋಷಕರು ಪಾಲ್ಗೊಂಡಿದ್ದರು.ವಿದ್ಯಾರ್ಥಿನಿ ಪರಿದಿ ಪೊನ್ನಮ್ಮ ಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶಿಕ್ಷಕಿ ಕಲ್ಯಾಟಂಡ ತನುಜ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲೆ ಕಲ್ಯಾಟಂಡ ಬಿ ಎಂ ಶಾರದ ಶಾಲಾ ವರದಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕಿ ವಿಶಾಲಾಕ್ಷಿ ಸಂಸ್ಕೃತ ವರದಿ ವಾಚಿಸಿದರು. ಅತಿಥಿಗಳ ಪರಿಚಯವನ್ನು ಉದಿಯಂಡ ಲೀಲಾವತಿ ಮಾಡಿ, ಪಾಡಿಯಮಂಡ ಚಂದ್ರಕಲಾ ಹಾಗೂ ಬೊಳ್ಳಚೆಟ್ಟಿರ ಶೋಭಾ ನಿರೂಪಿಸಿ ಕಂಗಾಂಡ ಸ್ಮಿತಾ ವಂದಿಸಿದರು. ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರನ್ನು ಮನಸೂರೆಗೊಂಡಿತು.