ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಘಗಳ ವೇದಿಕೆ ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು

ಹರಪನಹಳ್ಳಿ:ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಸಾಹಿತ್ಯದ ಮೌಲ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಕೊಟ್ರೇಶ್ವರ ಹೇಳಿದರು.

ಪಟ್ಟಣದ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ದಾನಿಗಳ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಚಾರ್ಯ ಡಾ. ಎಸ್.ಎಂ.ಸಿದ್ದಲಿಂಗಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಘಗಳ ವೇದಿಕೆ ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು ಎಂದರು.

ದಾನಿಗಳ ಕುಟುಂಬದ ಸದಸ್ಯ ಅಂಬ್ಲಿ ಯೋಗೇಶ್, ಪ್ರಸಾದ್ ಐಕ್ಯೂಎಸಿ ಸಂಚಾಲಕ ಡಾ. ಮಧುಕುಮಾರ್ ಮಾತನಾಡಿದರು. ವಿಶೇಷ ಉಪನ್ಯಾಸದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಹಿತಿಗಳು ಹಳಗನ್ನಡ ಸಾಹಿತ್ಯದ ಶ್ರೀಮಂತಿಕೆ ಪರಿಚಯಿಸಿದರು.

ಡಾ. ಗೋವರ್ದನ ಜಿ.ವೈ. ಸ್ವಾಗತಿಸಿದರು. ಶಿವಕುಮಾರ್ ಬಾಗಳಿ ನಿರೂಪಿಸಿದರು, ನಿವೇದಿತಾ ಪ್ರಾರ್ಥಿಸಿದರು.

ಆಡಳಿತ ಮಂಡಳಿ ಸದಸ್ಯ ಅರುಂಡಿ ನಾಗರಾಜ್, ಪಾಟೀಲ್ ಜಗದೀಶ್ ಗೌಡ್ರು, ಎಸ್ ಎಸ್ ಎಚ್ ಜೈನ ಕಾಲೇಜ್ ಪ್ರಾಂಶುಪಾಲ ಡಾ. ಶರತ್, ಪ್ರಾಧ್ಯಾಪಕ ಡಾ. ಅಣ್ಣೀಶ್ ಆರ್., ಬಸವಲಿಂಗಪ್ಪ ಕೆ., ನವಾಜ್ ಭಾಷಾ, ಡಾ.ರವಿಕುಮಾರ್ ಟಿ.ಆರ್. ಡಾ. ಸುವರ್ಣ ಅರುಂಡಿ, ವೆಂಕಟೇಶ್ ಎಚ್.ಎಸ್., ಸೇರಿದಂತೆ ಹಲವರು ಉಪಸ್ಥಿತರಿದ್ದರು.