ವಿದ್ಯಾರ್ಥಿಗಳ ಸಾಧನೆಗೆ ಶಿಸ್ತು, ಶ್ರದ್ಧೆ, ಪರಿಶ್ರಮ ಅತ್ಯಂತ ಅವಶ್ಯಕವಾಗಿವೆ ಎಂದು ಗುವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಡಿ.ಎಲ್. ಕಣ್ಣೂರ್ ಅವರು ಹೇಳಿದರು. ನಗರದ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಎಸ್. ಎಂ ತೆಗನೂರು ಪದವಿ ಹಾಗೂ ಪದವಿಪೂರ್ವ ಕಾಲೇಜು ವತಿಯಿಂದ ನಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಿಳ್ಕೋಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲಬುರಗಿ: ವಿದ್ಯಾರ್ಥಿಗಳ ಸಾಧನೆಗೆ ಶಿಸ್ತು, ಶ್ರದ್ಧೆ, ಪರಿಶ್ರಮ ಅತ್ಯಂತ ಅವಶ್ಯಕವಾಗಿವೆ ಎಂದು ಗುವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಡಿ.ಎಲ್. ಕಣ್ಣೂರ್ ಅವರು ಹೇಳಿದರು. ನಗರದ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಎಸ್. ಎಂ ತೆಗನೂರು ಪದವಿ ಹಾಗೂ ಪದವಿಪೂರ್ವ ಕಾಲೇಜು ವತಿಯಿಂದ ನಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಿಳ್ಕೋಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಮ್ಮಿ ಇಲ್ಲ. ಸಾಕಷ್ಟು ಬುದ್ದಿವಂತರಿದ್ದಾರೆ. ಆದರೆ, ಅವರಲ್ಲಿ ಹಿಂಜರಿಕೆ ಭಾವನೆ ಕಾಡುತ್ತಿದೆ. ಅದರಿಂದ ಹೊರಬಂದು ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಿಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅತಿಥಿಯಾಗದ್ದ ಸೈಬರ್ ಕ್ರೈಮ್ ಬ್ರ್ಯಾಂಚ್ ಸಿಪಿಐ ರಾಘವೇಂದ್ರ ಬಜೇಂತ್ರಿ, ಪತ್ರಕರ್ತ ಚಂದ್ರಶೇಖರ ಕವಲಗಾ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ಅತೀ ಅವಶ್ಯಕವಾಗಿದೆ ಎಂದರು.ಪ್ರಾಚಾರ್ಯರಾದ ಡಾ. ಜ್ಯೋತಿ ತೆಗನೂರ ವಾರ್ಷಿಕ ವರದಿ ಓದಿದರು. ಕ್ರೀಡಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅಡುಗೆ ಸ್ಪರ್ಧೆ, ಜೊತೆಗೆ ಕ್ರಿಕೆಟ್ ಹಾಗೂ ಇನ್ನಿತರ ಕ್ರೀಡೆಗಳನ್ನು ಆಚರಿಸಲಾಗಿತ್ತು. ಎಲ್ಲಾ ಸಂಸ್ಕೃತಿ ಕಾರ್ಯಕ್ರಮ ಮತ್ತು ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರವೀಂದ್ರ ತೆಗನೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರಮೇಶ ಬಡಿಗೇರ ಪ್ರಸ್ತಾವಿಕ ಮಾತನಾಡಿದರು. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಾದ ವಿದ್ಯಾ ಧರ್ಮಶೆಟ್ಟಿ, ಈರಯ್ಯ ಸ್ವಾಮಿ, ಸುವರ್ಣ ಬಸೆಪ್ಪಾ, ಶ್ರೀನಿವಾಸ್ ರೇವತಿ ಆರ್ ಪ್ರಭುಲಿಂಗ ಹೂಗಾರ ಗುರುಲಿಂಗಪ್ಪ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಅನಿತಾ. ಆರ್. ಬಡಿಗೇರ್ ಅವರಿಗೆ "ಅತ್ಯುತ್ತಮ ಶಿಕ್ಷಕ " ಪ್ರಶಸ್ತಿ ನೀಡಿ ಗೌರವಿಸಲಾಯಿತು.