ನರಗುಂದ: ದೇಶ- ವಿದೇಶಗಳಲ್ಲಿ ತಾಂತ್ರಿಕತೆಯಿಂದ ಹಲವಾರು ರೀತಿ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ತಿಳಿಸಿದರು.

ತಾಲೂಕಿನ ಶಿರೋಳದ ಗ್ರಾಮದ ಗುರುಬಸವ ಜನ ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ನಡೆದ ತೋಂಟದಾರ್ಯ ವಿದ್ಯಾಪೀಠದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಗುರುಬಸವ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನಗಳಲ್ಲಿ ಪಾಲ್ಗೊಳ್ಳುವುದರಿಂದ ಅಧ್ಯಯನಶೀಲತೆ ರೂಢಿಸಿಕೊಳ್ಳಲು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಲು ಸಹಕಾರಿಯಾಗುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ ಮಾತನಾಡಿ, ಈ ವಸ್ತು ಪ್ರದರ್ಶನದಲ್ಲಿ ಉತ್ತಮ, ನೂತನ, ನೈಪುಣ್ಯ ಹೊಂದಿದ ಮಾದರಿಗಳು ಪ್ರದರ್ಶನವಾಗಿದ್ದು, ಶಿರೋಳ ಹಾಗೂ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಇಂತಹ ಪ್ರದರ್ಶನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಐಟಿಐ ಪ್ರಾಚಾರ್ಯ ಬಸವರಾಜ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದಭದಲ್ಲಿ ಪ್ರಕಾಶಗೌಡ ತಿರಕನಗೌಡ್ರ, ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ, ದ್ಯಾಮಣ್ಣ ತೆಗ್ಗಿ, ಚಂದ್ರಶೇಖರ ಸೊಬರದ, ಸತ್ಯವಾನಪ್ಪ ಚಿಕ್ಕನರಗುಂದ, ಸಿಆರ್‌ಪಿ ರಾಘವೇಂದ್ರ ಮುಧೋಳ, ಮುಖ್ಯೋಪಾಧ್ಯಾಯ ಎಸ್.ವಿ. ವಸ್ತ್ರದ, ಐ.ಎಸ್. ಸೋನಾರ, ವೀರನಗೌಡ ಮರಿಗೌಡ, ಶ್ರೀಕಾಂತ ದೊಡಮನಿ, ಶ್ರೀಧರ ಬೇವಿನಕಟ್ಟಿ, ಪ್ರಭುಲಿಂಗ ಶಿರಯಣ್ಣವರ, ಭೂಪತಿ ಧೋತರದ, ಪ್ರೀತಿ ಚಿಕ್ಕಮಠ, ಕಾಳಮ್ಮ ಕಮ್ಮಾರ, ಮಲ್ಲಪ್ಪ ಸಂಗಳದ, ಸೋಮಶೇಖರಪ್ಪ ಗೊರವರ, ಚಂದ್ರಕಾಂತ ಕಾಡದೇವರಮಠ, ಶಿವಾನಂದ ಪೂಜಾರ, ಎಸ್.ಎಂ. ಗಿರಿಯಪ್ಪಗೌಡ್ರ, ಸರಸ್ವತಿ ಗಾಣಗೇರ, ಈಶ್ವರಪ್ಪ ಬಡಿಗೇರ ಎಫ್.ಎಚ್. ಮುಡಿಯಣ್ಣವರ, ಎಸ್.ವಿ. ಹಿರೇಮಠ, ಲಕ್ಷೀ ಜಂಗೀನ, ಎಸ್.ಎಚ್. ಇಟಗಿ, ಗಂಗಾಧರ ಫಾರಗೆ, ಜಿ.ಡಿ. ಕುಳ್ಳೂರ ಸೇರಿದಂತೆ ಮುಂತಾದವರು ಇದ್ದರು.