ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆ, ನಾಯಕತ್ವದ ಗುಣ ಬೆಳೆಸಿಕೊಳ್ಳಿ

| Published : Aug 21 2025, 01:00 AM IST

ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆ, ನಾಯಕತ್ವದ ಗುಣ ಬೆಳೆಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಂಗಲ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಸಾಮಾಜಿಕ ಚಿಂತನೆ ಮತ್ತು ನಾಯಕತ್ವದ ಗುಣಗಳ ಬೆಳೆಸಿಕೊಳ್ಳಬೇಕು ಎಂದು ರೋಟರಿ ಅದ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ನೆಲಮಂಗಲ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಸಾಮಾಜಿಕ ಚಿಂತನೆ ಮತ್ತು ನಾಯಕತ್ವದ ಗುಣಗಳ ಬೆಳೆಸಿಕೊಳ್ಳಬೇಕು ಎಂದು ರೋಟರಿ ಅದ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.

ನಗರದಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ. ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ ಅಯೋಜಿಸಿದ್ದ ರೋಟರಿ ಇಂಟರಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಚಿಂತನೆ ಮತ್ತು ನಾಯಕತ್ವದ ಗುಣಗಳ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಾಯಕರಾಗಲು ಮತ್ತು ಅವರಲ್ಲಿ ಆತ್ಮಸ್ಥೆರ್ಯ ತುಂಬಲು ಸಹಾಯ ಮಾಡುತ್ತವೆ. ಇಂದು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಮನೋಭಾವ ಹಾಗೂ ನಾಯಕತ್ವದ ಗುಣ ಅತ್ಯಗತ್ಯ. ನಾವು ಸಂಪಾದಿಸಿದ್ದರಲ್ಲಿ ಅಲ್ಪವನ್ನಾದರೂ ಅಗತ್ಯವಿರುವವರಿಗೆ ಹಂಚಬೇಕು. ರೋಟರಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿ ಕಾರ್ಯ ಮಾಡಬೇಕೆಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲ ಡಾ.ರುದ್ರಮಹೇಶ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆ ಹಾಗೂ ರೋಟರಿಯ ವಿಚಾರಧಾರೆಗಳು ಒಂದೇ ಆಗಿದ್ದು ಮಕ್ಕಳಲ್ಲಿ ಸಮಾಜಮುಖಿ ಆಲೋಚನೆಗಳು ತುಂಬಾ ಅತ್ಯಗತ್ಯವಾಗಿದೆ ಎಂದರು.

ಪದಗ್ರಹಣ ಸ್ವೀಕಾರ: ನಗರದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಅಧ್ಯಕ್ಷರಾಗಿ ನಯನ, ಕಾರ್ಯದರ್ಶಿಯಾಗಿ ನಂದಿತ ಹಾಗೂ ಬಸವೇಶ್ವರ ಇಂಗ್ಲೀಷ್ ಹೈಸ್ಕೂಲ್ ನಲ್ಲಿ ಇಂಟರಾಕ್ಟ್ ಅಧ್ಯಕ್ಷರಾಗಿ ಸುಜಿತ್ಸಾಯಿ, ಕಾರ್ಯದರ್ಶಿಯಾಗಿ ತನುಷ್ ಸೇರಿದಂತೆ ಶ್ರೀ ಮಂಜುನಾಥ ಫ್ರೌಢಶಾಲೆಯ ಇಂಟರಾಕ್ಟ್ ಅಧ್ಯಕ್ಷವಾಗಿ ತೇಜುಮಯಿ ಕಾರ್ಯದರ್ಶಿಯಾಗಿ ಆರ್.ಮದೀಹ ಅವರು ಪದಗ್ರಹಣ ಸ್ವೀಕಾರ ಮಾಡಿದರು.

ಸಂದರ್ಭದಲ್ಲಿ ರೋಟರಿ ಸಂಸ್ಥೆ ಮಾಜಿ ಅದ್ಯಕ್ಷ ಎಂ.ಟಿ. ನವೀನ್ಕುಮಾರ್, ನಿಯೋಜಿತ ಅಧ್ಯಕ್ಷ ಲೋಕೇಶ್ ಖಜಾಂಚಿ ಎಸ್.ಗಂಗರಾಜು, ನಿರ್ದೇಶಕರಾದ ಜ್ಞಾನೇಶ್ವರ್, ಶಂಕರ್, ಸಾಗರ್ಗೌಡ, ಉಪನ್ಯಾಸಕರಾದ ತಾರಾ, ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-20ಕೆಎನ್‌ಎಲ್‌ಎಮ್‌1-ನೆಲಮಂಗಲ ನಗರದಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ. ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ ಅಯೋಜಿಸಿದ್ದ ರೋಟರಿ ಇಂಟರಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭದಲ್ಲಿ ರೋಟರಿ ಅದ್ಯಕ್ಷ ಜಿ.ಆರ್.ನಾಗರಾಜುಕಾಲೇಜು ಪ್ರಾಂಶುಪಾಲ ಡಾ.ರುದ್ರಮಹೇಶ್‌ ರೋಟರಾಕ್ಟ್ ಅಧ್ಯಕ್ಷರಾಗಿ ನಯನ, ಕಾರ್ಯದರ್ಶಿಯಾಗಿ ನಂದಿತ ಹಾಗೂ ಬಸವೇಶ್ವರ ಇಂಗ್ಲೀಷ್ ಹೈಸ್ಕೂಲ್ ನಲ್ಲಿ ಇಂಟರಾಕ್ಟ್ ಅಧ್ಯಕ್ಷರಾಗಿ ಸುಜಿತ್ಸಾಯಿ, ಕಾರ್ಯದರ್ಶಿಯಾಗಿ ತನುಷ್ ಸೇರಿದಂತೆ ಶ್ರೀ ಮಂಜುನಾಥ ಫ್ರೌಢಶಾಲೆಯ ಇಂಟರಾಕ್ಟ್ ಅಧ್ಯಕ್ಷವಾಗಿ ತೇಜುಮಯಿ ಕಾರ್ಯದರ್ಶಿಯಾಗಿ ಆರ್.ಮದೀಹ ಇದ್ದಾರೆ.