ಹನುಮಸಾಗರ: ವಿದ್ಯಾರ್ಥಿಗಳು ಭಯ ಪಡದೆ ಧೈರ್ಯದಿಂದ ಭಾಷಣ ಮಾಡುವ ಕಲೆ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ರಾಜೇಂದ್ರ ಪಂತ ಹೇಳಿದರು.
ಪಟ್ಟಣದ ಶ್ರೀಅನ್ನದಾನೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡ ಭಾಷಣ ಹಾಗೂ ವಿವಿಧ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ಸ್ಪಷ್ಟವಾಗಿ ಭಾಷಣ ಮಾಡಬೇಕು. ನೀವು ಭಾಷಣ ಮಾಡುವ ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿದಿರಬೇಕು. ಆತ್ಮ ವಿಶ್ವಾಸದಿಂದ ಮಾತನಾಡಬೇಕು. ಗಡಿಬಿಡಿ ಮಾಡಿ ಭಯಪಟ್ಟು ಗೊಂದಲ ಮಾಡಿಕೊಳ್ಳಬಾರದು ಎಂದರು.
ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಯ್ಯ ವಸ್ತ್ರದ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಸ್ಪರ್ಧೆಗಳು ಸಹಕಾರಿಯಾಗಿವೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಇದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಕಲೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಯ್ಯ ವಸ್ತ್ರದ, ಶ್ರೀಶೈಲಪ್ಪ ಮೋಟಗಿ, ಮಲ್ಲಯ್ಯ ಕೋಮಾರಿ, ಕರಿಸಿದ್ದಪ್ಪ ಕುಷ್ಟಗಿ, ಸಿದ್ದಣ್ಣ ಚಿನಿವಾಲರ, ಬಸವಂತಪ್ಪ ಕಂಪ್ಲಿ, ವೀರಪ್ಪ ಮೊಟಗಿ, ಬಸವರಾಜ ಚಿನಿವಾಲರ, ಪ್ರಭುದೇವ ಬ್ಯಾಳಿ, ನಿವೃತ್ತ ಶಿಕ್ಷಕ ಶಿವುಕುಮಾರ ತುಗ್ಗಲಡೋಣಿ, ನಿವೃತ್ತ ಮುಖ್ಯ ಶಿಕ್ಷಕ ಸಿದ್ದರಾಮಯ್ಯ ಕರಕಂತಿಮಠ, ಮುಖ್ಯ ಶಿಕ್ಷಕ ಶರಣಪ್ಪ ಚಿನಿವಾಲರ, ರವಿಕಾಂತಯ್ಯ ಅಮಲಿಕೊಪ್ಪಮಠ ಇತರರಿದ್ದರು.