ಸಾರಾಂಶ
ಹುಬ್ಬಳ್ಳಿ: ವಿದ್ಯಾರ್ಥಿಗಳು ಮೊದಲು ಓದಬೇಕು. ಓದಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರಿಯಾದ ಸಮಯಕ್ಕೆ ಚಾಕಚಕ್ಯತೆಯಿಂದ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇಂತಹ ಜ್ಞಾನ ಪ್ರತಿಫಲನಕ್ಕೆ ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಶ್ರೀನಿವಾಸ್ ಗಾರ್ಡನ್‌ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯು-ಜೀನಿಯಸ್ 3.0 ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಸ್ಪರ್ಧೆಯಲ್ಲಿ ಬೆಳಗಾವಿ ಜಿಎಸ್‌ಎಸ್ ಪಿಯು ಕಾಲೇಜಿನ ತನ್ಮಯ್ ಕುರುಂದ್ಹಾಡ, ರಾಜ್ಸಿ ಗೊಜಗೆಕರ್ ಜಯಗಳಿಸಿದರು. ಬೆಳಗಾವಿಯ ಗೋಗಟೆ ವಾಣಿಜ್ಯ ಹಾಗೂ ವಿಜ್ಞಾನ ಪಿಯು ಕಾಲೇಜಿನ ಪಾರ್ಥ ವಿ. ಶಿಂಧೆ, ಪೂರ್ವಿ ವಿ. ರಾಜಪುರೋಹಿತ ಅವರು ರನ್ನರ್ ಅಪ್ ಆದರು. ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ 13 ಜಿಲ್ಲೆಗಳ 120 ಶಾಲೆಗಳ 906 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ವಿಜೇತ ತಂಡ ಮೈಸೂರಿನಲ್ಲಿ ನಡೆಯುವ ವಲಯ ಮಟ್ಟದ ರಸಪಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಅಲ್ಲಿ ಜಯಗಳಿಸುವ 2 ತಂಡಗಳು ನವೆಂಬರ್ 7ರಂದು ಮುಂಬೈನಲ್ಲಿ ಆಯೋಜಿಸಿರುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.ಬ್ಯಾಂಕಿನ ಹುಬ್ಬಳ್ಳಿ ಪ್ರಾದೇಶಿಕ ಮುಖ್ಯಸ್ಥ ಕೆ. ಭೈರೇಗೌಡ, ಬೆಳಗಾವಿ ಪ್ರಾದೇಶಿಕ ಮುಖಸ್ಥೆ ಆರತಿ ರೌರ್ನಿಯಾರ್, ಕಲಬುರ್ಗಿ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ., ಕ್ವಿಜ್ ಮಾಸ್ಟರ್ ಬ್ರೆಟಿ ಅಶ್ಲೆ, ಉದ್ಯಮಿ ವಿ.ಎಸ್.ವಿ. ಪ್ರಸಾದ್, ಮೋಹನ್ ಕುಮಾರ, ವೈ.ಎನ್. ರಿತೇಶ್ ಸೇರಿದಂತೆ ಹಲವರಿದ್ದರು.