ಸಾರಾಂಶ
ಶೃಂಗೇರಿ, ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಇಚ್ಚಾಶಕ್ತಿ, ಕತೃತ್ವಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡಲು ಕೇವಲ ಇಚ್ಚಾಶಕ್ತಿಯೊಂದೇ ಇದ್ದರೆ ಸಾಲದು. ಅದನ್ನು ಸಾಧಿಸಲು ಬೇಕಾದ ಜ್ಞಾನ, ಕ್ರಿಯಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ರಾಜೀವಗಾಂಧಿ ಸಂಸ್ಕೃತ ಪರಿಸರದ 36 ನೇ ವಾರ್ಷಿಕೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ, ಶೃಂಗೇರಿವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಇಚ್ಚಾಶಕ್ತಿ, ಕತೃತ್ವಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡಲು ಕೇವಲ ಇಚ್ಚಾಶಕ್ತಿಯೊಂದೇ ಇದ್ದರೆ ಸಾಲದು. ಅದನ್ನು ಸಾಧಿಸಲು ಬೇಕಾದ ಜ್ಞಾನ, ಕ್ರಿಯಾಶಕ್ತಿ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ರಾಜೀವಗಾಂಧಿ ಸಂಸ್ಕೃತ ಪರಿಸರದ 36 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಬೇಕು. ಕಠಿಣ ಪರಿಶ್ರಮ, ಅಧ್ಯಯನ ಮಾಡುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದರು.ಎನ್ಐಒಎಸ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಭೂಷಣ ಶರ್ಮ ಮಾತನಾಡಿ ಸನಾತನ ಧರ್ಮದ ಏಳಿಗೆಗೆ ಶ್ರೀ ಶಂಕರರ ಕೊಡುಗೆ ಅನನ್ಯ. ಸಂಸ್ಕಾರವಿಲ್ಲದೇ ಸನಾತನ ಧರ್ಮವಿಲ್ಲ. ಆದ್ದರಿಂದ ಸಂಸ್ಕೃತವನ್ನು ಪ್ರಾಥಮಿಕ ಶಿಕ್ಷಣದ ಸ್ತರದಲ್ಲಿ ತರುವಲ್ಲಿ ಎಲ್ಲಾ ಕೆಲಸ ಮಾಡಲಾಗಿದೆ. ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಸುಬ್ರಮಣ್ಯವಿರಿವೆಂಟಿ, ಪ್ರೊ. ಶ್ರೀನಿವಾಸ ವರಖೇಡಿ, ಪ್ರೊ ಹಂಸಧರ ಝಾ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರದ ವಾರ್ಷಿಕ ಪತ್ರಿಕೆ ಭಾರತೀ ಯನ್ನು ಜಗದ್ಗುರು ಬಿಡುಗಡೆಗೊಳಿಸಿದರು.9 ಶ್ರೀ ಚಿತ್ರ 2-ಶೃಂಗೇರಿ ಮೆಣಸೆ ಕೇಂದ್ರಿಯ ಸಂಸ್ಕ್ರತ ವಿದ್ಯಾನಿಲಯದ ರಾಜೀವ ಗಾಂಧಿ ಪರಿಸರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಆಶಿರ್ವಚನ ನೀಡಿದರು.
;Resize=(128,128))
;Resize=(128,128))
;Resize=(128,128))