ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳೆವಣಿಗೆಯ ಜೊತೆಗೆ ಪಠ್ಯೇತರವಾಗಿಯೂ ಪರಿಪೂರ್ಣತೆ ಸಾಧಿಸಬೇಕು. ಅವರಲ್ಲಿರುವ ಅಪಾರವಾದ ಪ್ರತಿಭೆಗಳು ಹೊರಹೊಮ್ಮಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಮಾತ್ರವಲ್ಲ ಬದುಕಿನ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸವನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳಬೇಕು. ಈ ನೆಲೆಯಲ್ಲಿ ರೋಟರಿ ಪ್ರತಿ ವರ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ‘ವಿಕಾಸ -2026’ ಅತ್ಯಂತ ಸಮಯೋಚಿತವಾಗಿದೆ ಎಂದು ಕಡಿಯಾಳಿ ಮಹಿಷಮರ್ದಿನಿ ದೇವಾಲಯದ ಧರ್ಮದರ್ಶಿ ವಿಜಯರಾಘವ ರಾವ್ ಹೇಳಿದರು
ಉಡುಪಿ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳೆವಣಿಗೆಯ ಜೊತೆಗೆ ಪಠ್ಯೇತರವಾಗಿಯೂ ಪರಿಪೂರ್ಣತೆ ಸಾಧಿಸಬೇಕು. ಅವರಲ್ಲಿರುವ ಅಪಾರವಾದ ಪ್ರತಿಭೆಗಳು ಹೊರಹೊಮ್ಮಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಮಾತ್ರವಲ್ಲ ಬದುಕಿನ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸವನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳಬೇಕು. ಈ ನೆಲೆಯಲ್ಲಿ ರೋಟರಿ ಪ್ರತಿ ವರ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ‘ವಿಕಾಸ -2026’ ಅತ್ಯಂತ ಸಮಯೋಚಿತವಾಗಿದೆ ಎಂದು ಕಡಿಯಾಳಿ ಮಹಿಷಮರ್ದಿನಿ ದೇವಾಲಯದ ಧರ್ಮದರ್ಶಿ ವಿಜಯರಾಘವ ರಾವ್ ಹೇಳಿದರು.
ರೋಟರಿ ಉಡುಪಿಯು 11 ಇಂಟರ್‍ಯಾಕ್ಟ್ ಕ್ಲಬ್‌ಗಳ ಸದಸ್ಯರಿಗಾಗಿ ಕಡಿಯಾಳಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಆಯೋಜಿಸಿದ ‘ವಿಕಾಸ-2026’ ಮಕ್ಕಳ ಬೌದ್ಧಿಕ ವಿಕಸನ ಕಾರ್‍ಯಾಗಾರವನ್ನು ಉದ್ಘಾಟಿಸಿದರು. ರೋಟರಿ ಉಡುಪಿ ಅಧ್ಯಕ್ಷರಾದ ರೋ ಸೂರಜ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್‍ಯದರ್ಶಿ ಅಶೋಕ್ ಕೋಟಿಯಾನ್ ವಂದಿಸಿದರು. ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ತರಬೇತುದಾರ ಮನೋಜ್ ಕಡಬಾ ‘ವ್ಯಕ್ತಿತ್ವ ವಿಕಸನ’, ಉಡುಪಿ ಡಯಟ್ ಸಂಸ್ಥೆಯ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ ‘ವೃತ್ತಿ ಮಾರ್ಗದರ್ಶನ’, ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆ ‘ಪರೀಕ್ಷಾ ತಯಾರಿ ಮತ್ತು ವ್ಯಸನ ಮುಕ್ತ ಜೀವನ’, ಮತ್ತು ಡಾ. ವೈ. ಸುದರ್ಶನ ರಾವ್ ಅವರು ‘ಆರೋಗ್ಯ ಮತ್ತು ನೈರ್ಮಲ್ಯ’ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ರೋಟರಿಯ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಅವರು ಕಾರ್‍ಯಾಗಾರದ ಸಮನ್ವಯಕಾರರಾಗಿ ನಿರ್ವಹಿಸಿದರು. ಕಾರ್‍ಯಾಗಾರವನ್ನು ಸಂಯೋಜಿಸಿದ ಇಂಟರ್‍ಯಾಕ್ಟ್ ಸಭಾಪತಿ ಮಾಲತಿ ಮೋಹನ ವಂದಿಸಿದರು. ರೋಟರಿಯ ಸಕ್ರಿಯ ಕಾರ್‍ಯಕರ್ತರಾದ ಗೋಪಾಲಕೃಷ್ಣ ಪ್ರಭು, ಗಣಪತಿ ಪ್ರಭು, ಅಮಲ, ಐ.ಕೆ. ಜಯಚಂದ್ರ, ರಾಮಚಂದ್ರ ಉಪಾಧ್ಯಾಯ, ಗುರುರಾಜ ಭಟ್, ರಾಮಚಂದ್ರ ಐತಾಳ್, ದಯಾನಂದ ಶೆಟ್ಟಿ ಮತ್ತು ಶುಭ ಎಸ್. ಬಾಸ್ರಿ ಹಾಗೂ 100ಕ್ಕೂ ಹೆಚ್ಚು ಇಂಟ ರ್‍ಯಾಕ್ಟ್ ಸದಸ್ಯರು ಮತ್ತು ಶಿಕ್ಷಕ ಸಂಯೋಜಕರು ಭಾಗವಹಿಸಿದ್ದರು.