ಸಾರಾಂಶ
ವಿದ್ಯಾರ್ಥಿ ಸಮುದಾಯ ಅನಗತ್ಯ ಕೆಟ್ಟ ವಿಚಾರಗಳಿಂದ ದೂರವಿದ್ದು, ಕೇವಲ ಸಾಧನೆ ಕಡೆಗೆ ಗಮನಹರಿಸಬೇಕು. ಅವರು ಹೇಳಿಕೊಟ್ಟ ಮಾರ್ಗದಲ್ಲಿ ದೇಶಪ್ರೇಮ ಬೆಳೆಸಿಕೊಳ್ಳೋಣ ತಮ್ಮತನ ಅರಿತು ನಮ್ಮ ಗುರಿಯತ್ತ ಸಾಗೋಣ.
ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಕಿವಿಮಾತು
ಕನ್ನಡಪ್ರಭ ವಾರ್ತೆ ಹೊನ್ನಾಳಿತನಗಾಗಿ ಬದುಕುವವರು ಸಾಮಾನ್ಯ ಮನುಷ್ಯರು, ಆದರೆ ಸಮಾಜ ಹಾಗೂ ಇತರರಿಗಾಗಿ ಬದುಕುವವರು ಮಹಾ ಪುರುಷರು ಇದಕ್ಕೆ ಉದಾಹರಣೆ ಸ್ವಾಮಿ ವಿವೇಕಾನಂದರು. ಭಾರತೀಯ ಆಧ್ಯಾತ್ಮದ ಸಂದೇಶ ಸಾರಿದ ಮಹಾನ್ ಸಂತ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಎಚ್ .ದೇವದಾಸ್ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಸಮುದಾಯ ಅನಗತ್ಯ ಕೆಟ್ಟ ವಿಚಾರಗಳಿಂದ ದೂರವಿದ್ದು, ಕೇವಲ ಸಾಧನೆ ಕಡೆಗೆ ಗಮನಹರಿಸಬೇಕು. ಅವರು ಹೇಳಿಕೊಟ್ಟ ಮಾರ್ಗದಲ್ಲಿ ದೇಶಪ್ರೇಮ ಬೆಳೆಸಿಕೊಳ್ಳೋಣ ತಮ್ಮತನ ಅರಿತು ನಮ್ಮ ಗುರಿಯತ್ತ ಸಾಗೋಣ ಎಂದರು.ಸಮಾರಂಭ ಉದ್ಘಾಟಿಸಿದ ನ್ಯಾಯಾಧೀಶ ದೇವದಾಸ್ ವೇದಿಕೆ ಮೇಲೆ ಕೂರದೇ ವಿದ್ಯಾರ್ಥಿಗಳ ಬಳಿಯೇ ನೆಲದ ಮೇಲೆ ಕುಳಿತು ಮಾತನಾಡಿ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳೊಂದಿಗೆ ಬೆರತು ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.
ಮುಖ್ಯ ಅತಿಥಿಯಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಭರತ್ ಭೀಮಯ್ಯ, ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ, ಸಂಘದ ಉಪಾಧ್ಯಕ್ಷ ಚಂದ್ರಪ್ಪ ಮಡಿವಾಳ, ಉಪನ್ಯಾಸಕ ಕೆ.ವಿ.ಪ್ರಸನ್ನ, ಬಿ.ಇಒ. ನಂಜರಾಜ್ ಅವರು ವಿವೇಕಾನಂದರ ಕುರಿತು ಮಾತನಾಡಿದರು. ವಕೀಲ ಎ.ಬಿ. ಜಗದೀಶ್ ವಿವೇಕಾನಂದರ ಕುರಿತು ಶಿಕ್ಷಕ ಗಿರೀಶ್ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಚ್.ಲಿಂಗಯ್ಯ ಅಧ್ಯಕ್ಷ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ತಿಪ್ಪೇಶಪ್ಪ, ಇಸಿಓ ಮುದ್ದನಗೌಡ, ಅಫ್ಸರ್ ಅಹಮ್ಮದ್, ವಿದ್ಯಾ ಸಂಸ್ಥೆಯ ಹಾಲೇಶ್ ಕುಂಕೂದ್, ಮೋಹನ್,ಕೆ.ಎಸ್. ಮುಖ್ಯ ಶಿಕ್ಷಕ ಪುನೀತ್, ಶಿಕ್ಷಕರು,ವಿದ್ಯಾರ್ಥಿಗಳಿದ್ದರು. ಶಾಲೆ ಮುಖ್ಯ ಶಿಕ್ಷಕ ತಿಮ್ಮೇಶ್ ಸ್ವಾಗತಿಸಿದರು. ಸತೀಶ್ ಬಂಗೇರ ನಿರೂಪಿಸಿದರು, ಮಂಜುನಾಥ ವಂದಿಸಿದರು.