ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜತೆಗೆ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ವಿಶೇಷವಾಗಿ ಸಭಾ ಮರ್ಯಾದೆಯನ್ನು ಪಾಲಿಸುವ ಗುಣವನ್ನು ಕಲಿಯಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದ ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನ ಆವರಣದಲ್ಲಿ ಬುಧವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಎಸ್‌ಜೆಸಿಐಟಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ 23ನೇ ವರ್ಷದ ಆನಂದಮಯ ಬ್ಲಿಸ್‌ಬೀಟ್ 2024 ಯುವೋತ್ಸವ ಉದ್ಘಾಟಿಸಿ ಮಾತನಾಡಿದರು.ಪಠ್
ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಶಾಲಾ ಕಾಲೇಜುಗಳಲ್ಲಿ ಔಪಚಾರಿಕ ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯ, ಆಧ್ಯಾತ್ಮ,ಸಂಗೀತ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಬೇಕು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಳೆದ 23 ವರ್ಷಗಳಿಂದ ಯುವೋತ್ಸವದ ಹೆಸರಿನಲ್ಲಿ ಇದನ್ನು ಸುವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿರುವುದು ಸಂತೋಷ ಕೊಡುವ ಸಂಗತಿಯಾಗಿದೆ ಎಂದರು. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ರಸಋಷಿ ಕುವೆಂಪು ಹೇಳಿದಂತೆ ನಾವು ಏನಾದರೂ ಸರಿಯೇ ಮೊದಲು ಮಾನವರಾಗಬೇಕು. ಮಾನವರಾಗಬೇಕಾದರೆ ಎದೆಯ ದನಿಗೆ ಮನಕೊಡಬೇಕು. ಇದೇ ಅರ್ಥದಲ್ಲಿ ಗೌತಮ ಬುದ್ಧ ಹೇಳಿದ್ದು ನಿಮ್ಮ ಬಾಳಿಗೆ ನೀವೇ ಗುರುವಾಗಬೇಕು ಎಂದು ಹೇಳಿದ್ದರು ಎಂದರು.4 ಸಾವಿರ ವಿದ್ಯಾರ್ಥಿಗಳು ಭಾಗಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ.ಎಸ್. ವಿದ್ಯಾಶಂಕರ್ ಮಾತನಾಡಿ, ವಿಶ್ವವಿದ್ಯಾಲಯವು ಪ್ರಾರಂಭದಿಂದಲೂ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತಪ್ರತಿಭೆಯನ್ನು ಹೊರಗೆಳೆಯಲು ಯುವೋತ್ಸವಗಳನ್ನು ಆಚರಿಸುತ್ತಾ ಬಂದಿದೆ. ಕ್ರೀಡೆ, ತಾಂತ್ರಿಕ,ಸಾಹಿತ್ಯಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಿಗೆ ವೇದಿಕೆಯನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಸುಮಾರು 4 ಸಾವಿರ ವಿದ್ಯಾರ್ಥಿಗಳು ಯುವೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇದೇ ಕಾರಣಕ್ಕೆ ೨೮ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದರು. ವಿದ್ಯಾರ್ಥಿಗಳು ಪಡೆಯುವ ಶಿಕ್ಷಣಕ್ಕೂ ಉದ್ಯೋಗಕ್ಕೂ ಸಂಬಂಧವೇ ಇಲ್ಲದಂತಹ ವಾತಾವರಣವಿದೆ.ಒಂದೆಡೆ ನಿರುದ್ಯೋಗ,ಮತ್ತೊಂದೆಡೆ ಕೌಶಲ್ಯದ ಕೊರತೆಯಿದೆ.ಇದೇ ಕಾರಣಕ್ಕಾಗಿ 20 ಕಾಲೇಜುಗಳಲ್ಲಿ 240 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ಬಾರಿಸು ಕನ್ನಡ ಡಿಂಡಿಮಕಾರ್ಯಕ್ರಮದಲ್ಲಿ ಗಾಯಕಿ ಡಾ.ಶಮಿತ ಮಲ್ನಾಡ್, ರೇಡಿಯೋ ಜಾಕಿ ರಾಜೇಶ್, ಬಿಗ್ ಬಾಸ್ ಸ್ಪರ್ಧಿ ಹಳ್ಳಿಕಾರ್ ವರ್ತೂರ್ ಸಂತೋಷ್ ಮಾತನಾಡಿದರು. ಯುವೋತ್ಸವದಲ್ಲಿ ಗಾಯಕಿ ಶಮಿತ ಮಲ್ನಾಡ್ ಹಾಡಿದ ಮಧುರಾ ಪಿಸುಮಾತಿಗೆ, ಬಾರಿಸು ಕನ್ನಡ ಡಿಂಡಿಮ ಹಾಡುಗಳಿಗೆ ವಿದ್ಯಾರ್ಥಿಗಳು ಕುಣಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲ್ಬುರ್ಗಿ ವಲಯಗಳಿಂದ ವಿವಿಧ ಅಂಗ ಸಂಸ್ಥೆಗಳ ವಿಧ್ಯಾರ್ಥಿಗಳು ಭಾಗವಹಿದ್ದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ
ಕಾರ್ಯಕ್ರಮ ಆರಂಭಕ್ಕೂ ಮೊದಲು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗಣ್ಯರನ್ನು ಸಿಂಗರಿಸಿದ ಎತ್ತಿನ ಬಂಡಿಯನೇರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯ, ವೀರಗಾಸೆ, ಹಾಗೂ ವಿದ್ಯಾರ್ಥಿಗಳ ನೃತ್ಯದೊಂದಿಗೆ ಕಲಾ ವೈಭವ ತಂಡಗಳು ಬಾಗವಿಸಿ ವಿಜೃಂಭಿಸಿದವು.ವೇದಿಕೆಯಲ್ಲಿ ಕೆಎಸ್‌ಆರ್‌ಟಿಸಿ ಉಪ ಆಯುಕ್ತ ಲಕ್ಷ್ಮಣರೆಡ್ಡಿ,ವಿಟಿಯು ರಿಜಿಸ್ಟ್ರಾರ್ ಡಾ.ಸುಧರ್ಶನರೆಡ್ಡಿ,ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ವಿ ಕಡಗದಕೈ,ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ವಿ.ಟಿ.ರಾಜು. ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ. ಕುಲಸಚಿವ ಜೆ.ಸುರೇಶ್, ಆಡಳಿತ ಮಂಡಳಿ ನಿರ್ಧೇಶಕ ಡಾ.ಕೆ.ಪಿ.ಶ್ರೀನಿವಾಸಮೂರ್ತಿ ಮತ್ತಿತರು ಇದ್ದರು.