ಸಾರಾಂಶ
ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ‘ಕಾನೂನು ಅರಿವು ನೆರವು’ ಕಾರ್ಯಕ್ರಮ ಆಯೋಜನೆ
ಕನ್ನಡಪ್ರಭ ವಾರ್ತೆ ತರೀಕೆರೆವಿದ್ಯಾರ್ಥಿಗಳು ಕಾನೂನನ್ನು ಅರಿತುಕೊಳ್ಳುವ ಮೂಲಕ ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈದ್ಯ ಶ್ರೀಕಾಂತ್ ಹೇಳಿದ್ದಾರೆ.
ಕಾನೂನು ನೆರವು ಸಮಿತಿ, ವಕೀಲರ ಸಂಘ, ತರೀಕೆರೆ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಡೆದ ‘ಕಾನೂನು ಅರಿವು ನೆರವು’ ಕಾರ್ಯಕ್ರಮದ ಉದ್ಗಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಕಾನೂನು ಎಂಬುದು ಸಮುದ್ರವಿದ್ದಂತೆ, ಎಷ್ಟು ತಿಳಿದುಕೊಂಡರೂ ಸಾಲದು, ವಿದ್ಯಾರ್ಥಿಗಳು 18 ವರ್ಷದ ಒಳಗೆ ಇರುವವರು ವಾಹನವನ್ನು ಓಡಿಸಬಾರದು, 18 ವರ್ಷ ತುಂಬಿದ ನಂತರ ಡ್ರೈವಿಂಗ್ ಲೈಸನ್ಸ್ ಮಾಡಿಸಬೇಕು, ವಾಹನ ನೊಂದಣಿಯಾಗಿರಬೇಕು, ಮುಖ್ಯವಾಗಿ ವಾಹನಕ್ಕೆ ಇನ್ಸುರೆನ್ಸ್ ಇರಬೇಕು, ಇಲ್ಲದಿದ್ದಲ್ಲಿ ಅಪಘಾತ ಸಂಭವಿಸಿದರೆ ನೊಂದವ್ಯಕ್ತಿಗೆ ಮಾಲಿಕರೆ ಪರಿಹಾರ ಕೊಡಬೇಕು, ವಿದ್ಯಾರ್ಥಿಗಳು ದುಶ್ಟಟ ಬಿಟ್ಟು ಒಳ್ಳೆಯ ವಿದ್ಯಾವಂತರಾಗಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಬಕ್ಷರಾದ ಬಿ.ಶೇಖರ್ ನಾಯ್ಕ ಮಾತನಾಡಿ, ಕಾನೂನು ಗೊತ್ತಿಲ್ಲ ಎಂದು ತಪ್ಪು ಮಾಡಿದರೆ ಕ್ಷಮೆ ಇಲ್ಲ, ಕಾನೂನು ಎಲ್ಲರಿಗೂ ಒಂದೇ ಎಂದು ಅವರು ಹೇಳಿದರು.ಹಿರಿಯ ವಕೀಲರಾದ ಎಸ್.ಸುರೇಶ್ ಚಂದ್ರ ಅವರು ಕಾನೂನು ಸೇವಾ ಪ್ರಾಥಿಕಾರದ ಬಗ್ಗೆ ಉಪನ್ಯಾಸ ನೀಡಿ, ನ್ಯಾಯಾಲಯದಲ್ಲಿ ಕೇಸನ್ನು ನೆಡೆಸಲು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲದವರಿಗೆ ಕಾನೂನು ಸಮಿತಿಯಿಂದ ಉಚಿತವಾಗಿ ವಕೀಲರನ್ನು ನೇಮಿಸಿ ಕೊಡಲಾಗುವುದು, ಉಳಿದವರಿಗೆ ವಾರ್ಷಿಕ ವರಮಾನ 2 ಲಕ್ಷದ ಒಳಗಿರಬೇಕು, ಕೇವಲ ಒಂದು ಪ್ರಮಾಣ ಪತ್ರವನ್ನು ಸಮಿತಿಗೆ ಸಲ್ಲಿಸಿದರೆ ಸಾಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ವಿಜಯಲಕ್ಷ್ಮಿಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಬಡವ ಬಲ್ಲಿದ ಎಂಬ ಬೇಧ ಬಾವ ಇಲ್ಲ, ಎಲ್ಲರಿಗೂ ಒಂದೇ, ವಿದ್ಯಾರ್ಥಿಗಳು ಕಾಲೇಜಿನ ಗೌರವ ಕಾಪಾಡಬೇಕು ಎಂದು ಹೇಳಿದರು.ವಕೀಲರಾದ ಜಿ.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಮಾತನಾಡಿದರು. ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾದೀಶರಾದ ವೈದ್ಯ ಶ್ರೀಕಾಂತ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನೆಡೆಸಿದರು.