ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಕನ್ನಡಪ್ರಭದ ಯುವ ಆವೃತ್ತಿ ಕೈಯಲ್ಲಿ ಹಿಡಿದು ಓದಿ ಭವಿಷ್ಯದ ಅಭಿವೃದ್ಧಿಗೆ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು ಎಂದು ಮೊರಬ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರನಗೌಡ ಪಾಟೀಲ ಹೇಳಿದರು.
ನವಲಗುಂದ: ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಕನ್ನಡಪ್ರಭದ ಯುವ ಆವೃತ್ತಿ ಕೈಯಲ್ಲಿ ಹಿಡಿದು ಓದಿ ಭವಿಷ್ಯದ ಅಭಿವೃದ್ಧಿಗೆ ಜ್ಞಾನ ಸಂಗ್ರಹ ಮಾಡಿಕೊಳ್ಳಬೇಕು ಎಂದು ಮೊರಬ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರನಗೌಡ ಪಾಟೀಲ ಹೇಳಿದರುಯ
ತಾಲೂಕಿನ ತಿರ್ಲಾಪುರ ಗ್ರಾಮದ ಎನ್.ಸಿ. ವೀರರಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಹೊರತಂದಿರುವ ಕನ್ನಡಪ್ರಭ ಯುವ ಆವೃತ್ತಿಯ ಓದು ತಪ್ಪಬಾರದು. ಪರೀಕ್ಷೆಯ ದೃಷ್ಟಿಯಿಂದ ಅನೇಕ ಮಾಹಿತಿ ಈ ಯುವ ಆವೃತ್ತಿಯಲ್ಲಿ ನೀಡಿದ್ದು, ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದಾಗಿ ತಿಳಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮಹೇಶ ಬಕ್ಕಣ್ಣವರ ಮಾತನಾಡಿ, ಕನ್ನಡಪ್ರಭ ಸತತ 50 ವರ್ಷಗಳಿಂದ ಸಾಮಾಜಿಕ ಪರಿವರ್ತನೆಯಾಗುವ ನಿಟ್ಟಿನಲ್ಲಿ ನಿರಂತರ ಕಾರ್ಯ ಮಾಡುತ್ತಿದೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿ ಶೈಕ್ಷಣಿಕ ಮಾರ್ಗದರ್ಶಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು, ಈ ಶಾಲೆಯ ಎಲ್ಲ ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ಯುವ ಆವೃತ್ತಿಯನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮುಂದಿನ ತಿಂಗಳು ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಕೀರ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗ್ರಾಪಂ ಅಧ್ಯಕ್ಷ ಸಂಜೀವ ನವಲಗುಂದ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಗೋಲನ್ನವರ, ಬಸವರಾಜ ಆಕಳದ, ಶರಣಪ್ಪ ಕೊಪ್ಪದ, ಶಾಲೆ ಪ್ರಧಾನಗುರುಗಳಾದ ಎನ್.ಸಿ. ತಲವಾಯಿ, ಸುಧಾ ಎಸ್.ಎ., ಗಣೇಶ ಭಜಂತ್ರಿ, ಬಿ. ಎಸ್. ಹೊಕ್ರಾಣಿ, ಎಲ್.ಎಸ್. ಜಮಾದಾರ, ಶೋಭಾ ಚಲವಾದಿ, ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸಹಾಯಕ ವ್ಯವಸ್ಥಾಪಕ ನಿಂಗರಾಜ ಹುಲ್ಲೂರ, ತಾಲೂಕು ವರದಿಗಾರ ಫಕ್ರುದ್ದೀನ್ ಎಂ.ಎನ್. ಸೇರಿದಂತೆ ವಿದ್ಯಾರ್ಥಿಗಳು, ಶಾಲಾ ಎಸ್.ಡಿಎಂಸಿ ಪದಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.