ಸಾರಾಂಶ
ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕರ್ಯಕ್ರಮದಲ್ಲಿ ನ್ಯಾ. ಅರುಣಾಕುಮಾರಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಭಾರತೀಯ ಪರಂಪರೆ, ಇತಿಹಾಸ, ಪುರಾಣ, ಸಾಹಿತ್ಯ, ಸಂಸ್ಕೃತಿ, ಕಲಾ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಕಾಲಿಕ ಮೌಲ್ಯದ ಸಾಧನೆಯಾಗಿರುವುದು ಏಕಾಗ್ರತೆಯನ್ನು ಹೊಂದಿದ ವ್ಯಕ್ತಿಗಳಿಂದ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ ಅಭಿಪ್ರಾಯ ಪಟ್ಟರು.
ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಕಾಲೇಜು ಆವರಣದ ಬಿಜಿಎಸ್ ಸಭಾಣಗಣದಲ್ಲಿ ಸರ್ಕಾರಿ ಕಾಲೇಜುಗಳ ಪಿಯುಸಿ ವಿದ್ಯಾರ್ಥಿಗಳಿಗೆ ಎಸ್ ಜೆಸಿಐಟಿ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಆನ್ ಲೈನ್ ತರಗತಿಗಳ ಉದ್ಘಾಟಿಸಿ ಮಾತನಾಡಿದರು.ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ
ವಿದ್ಯಾರ್ಥಿಗಳು ವ್ಯಾಸಂಗ ಅವಧಿಯಲ್ಲಿ ಕಾಲಹರಣ ಮಾಡದೇ ವಿದ್ಯಾಭ್ಯಾಸದತ್ತ ಶ್ರದ್ಧೆ, ಏಕಾಗ್ರತೆ ತೋರಿದಲ್ಲಿ ಉಜ್ವಲ ಭವಿಷ್ಯತ್ ರೂಪಿಸಿಕೊಳ್ಳಬಹುದು, ಯೋಗ ಧ್ಯಾನದಿಂದ ಜ್ಞಾಪಕ ಶಕ್ತಿ ಹೆಚ್ಚಿಸಿಕೊಂಡು ಉತ್ತಮ ಸಂಸ್ಕೃತಿ-ಸಂಸ್ಕಾರ ಬೆಳಸಿ ಕೊಂಡು ಸಂಘ-ಸಂಸ್ಥೆಗಳು ಮತ್ತು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಭಾರತದ ಯುವ ಜನತೆಯಲ್ಲಿ ಜ್ಞಾನ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಭಾರತೀಯರು ಇಂದು ಜಗತ್ತಿನಾದ್ಯಂತ ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಮಕ್ಕಳಿಗೆ ವಿಶಾಲವಾದ ಭವಿಷ್ಯವಿದೆ. ಅದನ್ನು ಸಾಕಾರಗೊಳಿಸಬೇಕಾದ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಹೇಳಿದರು.ಸರ್ಕಾರಿ ಶಾಲೆ ಬಗ್ಗೆ ಕೀಳರಮೆ ಬೇಡ
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಮಾತನಾಡಿ, ನೀವು ಓದುತ್ತಿರುವುದು ಸರ್ಕಾರಿ ಶಾಲಾ- ಕಾಲೇಜುಗಳೆಂದು ಕೀಳರಿಮೆ ಪಡದಿರಿ, ನಾನು ಸರ್ಕಾರಿ ಶಾಲಾ -ಕಾಲೇಜಿನಲ್ಲಿಯೇ ವಿದ್ಯಾಬ್ಯಾಸ ಮಾಡಿ ಇಂದು ಉನ್ನತ ಸ್ಥಾನದಲ್ಲಿದ್ದೇನೆ. ಸರ್ಕಾರಿ ಶಾಲೆಗಳು ಕೆಳ ಮತ್ತು ಮದ್ಯಮ ವರ್ಗದವರಿಗೆ ಜೀವನ ಕಟ್ಟಿಕೊಳ್ಳಲು ಪಾಠ ಕಲಿಸುವ ತಾಣಗಳು ಎಂದರು.ಇಂದಿನ ಸ್ಪಧಾತ್ಮಕ ಯುಗದಲ್ಲಿ ನೀಟ್ ಮತ್ತು ಸಿಇಟಿ ಪರಿಕ್ಷೆಗಳಲ್ಲಿ ಕೇವಲ ನಿಮ್ಮ ಕಾಲೇಜಿನ ಮಟ್ಟದಲ್ಲಿ ಮಾತ್ರ ಸ್ಪರ್ಧೆ ಇರುವುದಿಲ್ಲಾ ದೇಶದ ಮಟ್ಟದಲ್ಲಿ ಸ್ಪರ್ಧೆ ಇರುತ್ತದೆ. ಇದನ್ನು ಗಮನದಲ್ಲಿಟ್ಟು ಕೊಂಡು ಪರೀಕ್ಷೆಗಳಿಗೆ ತಯಾರಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಎಸ್ ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು, ರಿಜಿಸ್ಟ್ರಾರ್ ಸುರೇಶ್, ಪ್ರಾಧ್ಯಾಪಕರಾದ ಡಾ.ರಾಜಶೇಖರ್, ಡಾ.ನರೇಂದ್ರಬಾಬು, ಡಾ.ಶ್ರೀನಿವಾಸರೆಡ್ಡಿ, ವಕೀಲ ಮಂಜುನಾಥರೆಡ್ಡಿ ಮತ್ತಿತರರು ಇದ್ದರು.
ಸಿಕೆಬಿ-3 ಚಿಕ್ಕಬಳ್ಳಾಪುರದ ಎಸ್‌ಜೆಸಿ ತಾಂತ್ರಿಕ ಕಾಲೇಜಿನಲ್ಲಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಗಣ್ಯರು ವಿತರಿಸಿದರು.