ಪಾಠದ ಜತೆಗೆ ಆಟೋಟಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿ

| Published : Jan 08 2025, 12:19 AM IST

ಸಾರಾಂಶ

ದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜ್ಞಾನರ್ಜನೆಗೆ ಅನುಕೂಲ

ನರಗುಂದ: ಕ್ರೀಡೆ ಇಲ್ಲದ ಜೀವನ ಕಿಟ್‌ ಇದ್ದ ಹಣ್ಣಿನಂತೆ ಎಂಬ ನಾಣ್ಣುಡಿಯಂತೆ ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತಿ ಮಹತ್ವದ ಸ್ಥಾನ ಪಡೆದಿದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಪಾಠದ ಜತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಎನ್.ಆರ್. ನಿಡಗುಂದಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಬಾಬಾಸಾಹೇಬ್ ಶಿಕ್ಷಣ ಸಮಿತಿಯ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಆ ನಂತರ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜ್ಞಾನರ್ಜನೆಗೆ ಅನುಕೂಲ, ಆರೋಗ್ಯವಾಗಿ ಶರೀರ ಸದೃಢವಾಗಿರಲು ಸಾಧ್ಯವಾಗುತ್ತದೆ.ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೋಳ್ಳಬೇಕೆಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಸಿ.ಜಿ. ಕೋರಿ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ರೂಪಗೊಳ್ಳುತ್ತದೆ.ಆಟೋಟಗಳಲ್ಲಿ ಮಕ್ಕಳು ಭಾಗವಹಿಸಿ ತಾಲೂಕು,ಜಿಲ್ಲಾ, ರಾಜ್ಯ, ರಾಷ್ಟ್ರೀಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ನಮ್ಮ ಶಾಲಾ ಮಕ್ಕಳು ತಾವು ಕಲಿತ ಶಾಲೆಯ ಕೀರ್ತಿ ಹೆಚ್ಚಿಸಬೇಕೆಂದು ಹೇಳಿದರು.

ಪ್ರವೀಣ ಆನೆಗುಂದಿ, ನಿವೃತ್ತ ದೈಹಿಕ ಪರಿವೀಕ್ಷಕ ಎಂ.ಎಂ. ಕಲಹಾಳ, ಅನಿಲ ಜಮಖಂಡಿ, ಪ್ರಧಾನ ಗುರು ಪಿ.ವಿ. ಕೆಂಚನಗೌಡ್ರ, ಪ್ರಾಥಮಿಕ ವಿಭಾಗದ ಪ್ರಧಾನ ಗುರು ಎಫ್.ವಿ ಶಿರುಂದಮಠ ಸಂಯೋಜಕ ಬಿ.ಎಸ್. ಕಬಾಡ್ರ, ಎಸ್.ಎಸ್. ಸಂಪಗಾವ, ಎಸ್.ವಿ. ಬ್ಯಾಹಟ್ಟಿ, ಪ್ರಜ್ಷಾ ಮುಧೋಳ, ಭೂಮಿಕಾ ಜೊತೆನ್ನವರ, ಅರ್ಪಿತ ಸಂಗೊಳ್ಳಿ, ವೀಣಾ ಉನ್ನಿ, ತನುಶ್ರೀ ಅರಕೇರಿ, ಪೃಥ್ವಿ ಗಾಣಿಗೇರ, ಶಾಲೆಯ ಶಿಕ್ಷಕರು/ ಶಿಕ್ಷಕಿಯರು ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಲ್ಲ ಮಕ್ಕಳು ಭಾಗವಹಿಸಿದ್ದರು.