ವಿದ್ಯಾರ್ಥಿಗಳು ಯೋಗ, ಧ್ಯಾನ ರೂಢಿಸಿಕೊಳ್ಳಬೇಕು: ಮೀರಾ ಶಿವಲಿಂಗಯ್ಯ

| Published : Jun 29 2024, 12:41 AM IST

ವಿದ್ಯಾರ್ಥಿಗಳು ಯೋಗ, ಧ್ಯಾನ ರೂಢಿಸಿಕೊಳ್ಳಬೇಕು: ಮೀರಾ ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಡ್ರಗ್ಸ್ ಗೆ ಬದಲಾಗಿ ಸರಿ ಸಮಾನವಾಗಿ ಮುಟ್ಟುವ ಶ್ರೇಷ್ಠವಾದ ಧ್ಯಾನ ಮತ್ತು ಯೋಗವನ್ನು ಕಲಿತರೆ ಹೆಚ್ಚು ಮುಂದೆ ಹೋಗುತ್ತೀರಿ, ಸಮನಾಗಿ ನೋಡುವ ಶಕ್ತಿ ಮತ್ತು ಅದರಲ್ಲಿ ಗೆಲುವನ್ನು ಪಡೆಯುವ ಶಕ್ತಿ ಇರುತ್ತದೆ. ಧ್ಯಾನದಲ್ಲೂ ಕೂಡ ಸ್ಥಿತ ಪ್ರಜ್ಞೆತೆ ಇದೆ. ದುಃಖವನ್ನು ಎದುರಿಸುವ ಹಾಗೂ ಸಂತೋಷವನ್ನು ತಡೆಯುವ ಶಕ್ತಿ ಜ್ಞಾನದಿಂದ ಬರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಂಡು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಡ್ಯ, ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಪುರಸಭೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡ್ರಗ್ಸ್ ಗೆ ಬದಲಾಗಿ ಸರಿ ಸಮಾನವಾಗಿ ಮುಟ್ಟುವ ಶ್ರೇಷ್ಠವಾದ ಧ್ಯಾನ ಮತ್ತು ಯೋಗವನ್ನು ಕಲಿತರೆ ಹೆಚ್ಚು ಮುಂದೆ ಹೋಗುತ್ತೀರಿ, ಸಮನಾಗಿ ನೋಡುವ ಶಕ್ತಿ ಮತ್ತು ಅದರಲ್ಲಿ ಗೆಲುವನ್ನು ಪಡೆಯುವ ಶಕ್ತಿ ಇರುತ್ತದೆ. ಧ್ಯಾನದಲ್ಲೂ ಕೂಡ ಸ್ಥಿತ ಪ್ರಜ್ಞೆತೆ ಇದೆ. ದುಃಖವನ್ನು ಎದುರಿಸುವ ಹಾಗೂ ಸಂತೋಷವನ್ನು ತಡೆಯುವ ಶಕ್ತಿ ಜ್ಞಾನದಿಂದ ಬರುತ್ತದೆ ಎಂದರು.

ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಹಾಗೂ ಜಿಲ್ಲಾ ರಾಜ್ಯಪಾಲ ಅಲೈ ಕೆ.ಟಿ.ಹನುಮಂತು ಮಾತನಾಡಿ, ಕಳೆದ 35 ವರ್ಷಗಳಿಂದಲೂ ನಿರಂತರವಾಗಿ ಮಾದಕ ದ್ರವ್ಯ ಮತ್ತು ಕಳ್ಳ ಸಾಗಣೆ ವಿರೋಧಿ ದಿನವನ್ನು ಮಾಡುತ್ತಿದ್ದರು ಕೂಡ ಮಾದಕ ವಸ್ತು ವ್ಯಸನಿಗಳು ಹಾಗೂ ಕಳ್ಳ ಸಾಗಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದರು.

ಪ್ರಸ್ತುತ ಭಾರತದಲ್ಲಿ 5 ಕೋಟಿಗೂ ಹೆಚ್ಚು ಜನ ಮಾದಕ ದ್ರವ್ಯ ವ್ಯಸನಿಗಳಿದ್ದು, ಮಾದಕ ದ್ರವ್ಯ ಹೆಚ್ಚು ಸೇವಿಸುವ ದೇಶಗಳ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ. ಪ್ರಪಂಚದಲ್ಲಿ ಇದೊಂದು ಸಾಮಾಜಿಕ ಪಿಡುಗಾಗಿ ಸಂಭವಿಸಿದೆ ಎಂದರು.

ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಿ.ಗುರುಲಿಂಗೇಗೌಡ, ಉಪನ್ಯಾಸಕಿ ಎಂ.ಎಸ್.ಸವಿತ, ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಮಂಗಲ ಎಂ.ಯೋಗೀಶ್, ಡಾ.ಶಶಿಕಲಾ, ಡೇವಿಡ್, ಶಶಾಂಕ್ ಇದ್ದರು.

ಸ್ವಚ್ಛತೆ ಕಾಪಾಡಿ ರೋಗದಿಂದ ಮುಕ್ತ ವಾತಾವರಣ ಕಲ್ಪಿಸಿ: ಡಾ.ಚೇತನ್

ದೇವಲಾಪುರ:ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ರೋಗ ಮುಕ್ತ ವಾತಾವರಣ ಕಲ್ಪಿಸಲು ಜನರು ಸಹಕಾರ ನೀಡಬೇಕು ಎಂದು ವೈದ್ಯಾಧಿಕಾರಿ ಚೇತನ್ ಕರೆ ನೀಡಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಲಾಪುರದಲ್ಲಿ ಡೆಂಘೀ ಮಾಸಾಚರಣೆ, ಡೆಂಘೀ ತರುವ ಇಡಿಸ್ ಸೊಳ್ಳೆ ನಾಶ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಡೆಂಘೀ ಜ್ವರ ಮಾರಕವಾದರೆ, ಚಿಕೂನ್‍ ಗುನ್ಯಾ ಮಾರಣಾಂತಿಕವಲ್ಲ. ರೋಗ ಖಚಿತಪಟ್ಟಲ್ಲಿ ಸೂಕ್ತ ಆರೋಗ್ಯ ಕೇಂದ್ರದಿಂದ ಸಲಹೆ ಪಡೆದು ಔಷಧಿಗಳನ್ನ ಬಳಸಬೇಕು ಎಂದರು.ಡೆಂಘೀಯಿಂದ ತಪ್ಪಿಸಿಕೊಳ್ಳಲು ಸ್ವಚ್ಛತೆಯೊಂದೇ ಪರಿಹಾರ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಮುತ್ತ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತ್ಯಾಜ್ಯ ವಸ್ತು ಹಾಗೂ ಇನ್ನಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.

ಗ್ರಾಮದಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿ, ಡ್ರಮ್ ಇತರೆ ಪದಾರ್ಥಗಳನ್ನು ಘನತಾಜ್ಯ ವಸ್ತುಗಳನ್ನು ಸಮೀಕ್ಷೆ ಮಾಡೋ ಮೂಲಕ ಸಾರ್ವಜನಿಕರುಗಳಿಗೆ ಅರಿವು ಮೂಡಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿದ್ದಲಿಂಗಯ್ಯ ಹಾಗೂ ಈಶ್ವರ ಸಾರ್ವಜನಿಕರು, ಅಂಗಡಿ, ಹೋಟೆಲ್ ಮಾಲೀಕರುಗಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಆರೋಗ್ಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯವರು, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಹಲವರು ಇದ್ದರು.