ವಿದ್ಯಾರ್ಥಿಗಳು ಪುಸ್ತಕ ಓದಿ ಜ್ಞಾನ ಬೆಳೆಸಿಕೊಳ್ಳಬೇಕು: ಡಾ .ಲೋಕೇಶ್

| Published : Dec 25 2024, 12:46 AM IST

ಸಾರಾಂಶ

ಅಸ್ಪೃಶ್ಯತೆ ಎನ್ನುವುದು ಸಾಮಾಜಿಕ ಪಿಡುಗು. ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಯಾವುದೇ ಧರ್ಮ, ಜಾತಿ ರಹಿತ ಸಮ ಸಮಾಜ ನಿರ್ಮಾಣ ವಾಗಿತ್ತು. ಆದರೆ, ಕಾಲಾಂತರದಲ್ಲಿ ಕಸಬು ಆಧಾರಿತ ವ್ಯವಸ್ಥೆ ಇತ್ತು. ಕಸಬು ಆಧಾರಿತ ವ್ಯವಸ್ಥೆಯಿಂದ ಜಾತಿ ವ್ಯವಸ್ಥೆ ಉಂಟಾಗಲು ಕಾರಣವಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ವ್ಯಾಸಂಗದ ಜೊತೆಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ, ಮಹನೀಯರು ಬರದಿರುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಓದಿ ಜ್ಞಾನಾರ್ಜನೆ ಬೆಳೆಸಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ‌.ಲೋಕೇಶ್ ತಿಳಿಸಿದರು.

ಕೆಪಿಎಸ್ ಶಾಲಾ ಆವರಣದಲ್ಲಿ ಮಹಾನಾಯಕ ಡಾ.ಭೀಮಾರಾವ್ ಸೋಶಿಯಲ್ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಅಸ್ಪೃಶ್ಯತೆ ಆಚರಣೆ ಬಗ್ಗೆ ಕಾನೂನಿನ ಅರಿವು ಮತ್ತು ಅರಿವಿನ ಅಂಗಳ ಎಂಬ ನಾಟಕ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ಮಹನೀಯರ ಪುಸ್ತಕಗಳನ್ನು ಓದುವುದರಿಂದ ಮುಂದಿನ ಜೀವನಕ್ಕೆ ಆಧಾರವಾಗುವುದರ ಜೊತೆಗೆ ಸಮಾಜದಲ್ಲಿ ಅಸ್ಪೃಶ್ಯತೆ ಯನ್ನು ತೊಡೆದು ಹಾಕಲು ಸಹಕಾರಿಯಾಗಲಿದೆ ಎಂದರು.

ಅಸ್ಪೃಶ್ಯತೆ ಎನ್ನುವುದು ಸಾಮಾಜಿಕ ಪಿಡುಗು. ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಯಾವುದೇ ಧರ್ಮ, ಜಾತಿ ರಹಿತ ಸಮ ಸಮಾಜ ನಿರ್ಮಾಣ ವಾಗಿತ್ತು. ಆದರೆ, ಕಾಲಾಂತರದಲ್ಲಿ ಕಸಬು ಆಧಾರಿತ ವ್ಯವಸ್ಥೆ ಇತ್ತು. ಕಸಬು ಆಧಾರಿತ ವ್ಯವಸ್ಥೆಯಿಂದ ಜಾತಿ ವ್ಯವಸ್ಥೆ ಉಂಟಾಗಲು ಕಾರಣವಾಯಿತು.

ಶೇಣಿಕೃತ ಜಾತಿ ವ್ಯವಸ್ಥೆಯನ್ನು ತೊಡೆದು ಸಮಸಮಾಜ ನಿರ್ಮಾಣ ಮಾಡುವಲ್ಲಿ ಬುದ್ಧ ಬಸವ, ಕನಕ, ಅಂಬೇಡ್ಕರ್ ಇನ್ನೂ ಹಲವು ಮಹನೀಯರ ಪಾತ್ರ ಪ್ರಮುಖವಾದುದ್ದು. ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕ್ಕೆ ಸಹಕರಿಸುವಂತೆ ವೇದಿಕೆಯಲ್ಲಿದ್ದ ಮುಖಂಡರಿಗೆ ಕಿವಿಮಾತು ಹೇಳಿದರು.ಕನಕಪುರದ ಜಂಗಮ ಚಿಗುರು ಸಾಂಸ್ಕೃತಿಕ ಕಲಾ ತಂಡದವರು ಅರಿವಿನ ಅಂಗಳ ನಾಟಕ ಪ್ರದರ್ಶಿಸಿದರು ಹಾಗೂ ಜಾಗೃತಿ ಕುರಿತಾದ ಗೀತೆಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ವೇದಿಕೆಯಲ್ಲಿ ಟ್ರಸ್ಟಿನ ಸಂಸ್ಥಾಪಕ ಬಾಳೆಹೊನ್ನಿಗ ಜಿ. ಕುಮಾರ್, ವಿ.ಎ. ಸೋಮಶೇಖರ್, ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲರಾದ ಅನುರಾಧ, ಗ್ರಾಪಂ ಅಧ್ಯಕ್ಷೆ ಆರ್.ಶಶಿಕಲಾ ಶ್ರೀನಿವಾಸಚಾರಿ, ಉಪಾಧ್ಯಕ್ಷೆ ಲತಾ ಮಹದೇವ್, ಸದಸ್ಯರಾದ ಸದ್ರುಲ್, ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಶಿವಮಾದಯ್ಯ, ಕಾರ್ಯದರ್ಶಿ ಸಿದ್ದಲಿಂಗ ಮೂರ್ತಿ ಸೇರಿದಂತೆ ಇತರರು ಇದ್ದರು.