ವಿದ್ಯಾರ್ಥಿಗಳು ಭಾರತ ಸಂವಿಧಾನವನ್ನು ಓದಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Feb 07 2024, 01:51 AM IST

ವಿದ್ಯಾರ್ಥಿಗಳು ಭಾರತ ಸಂವಿಧಾನವನ್ನು ಓದಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಓದುವ ಮೂಲಕ ವಿದ್ಯಾರ್ಥಿಗಳು ಸುಳ್ಳನ್ನು ಸತ್ಯವನ್ನಾಗಿಸಲು ಹೊರಟ್ಟಿರುವವವರಿಗೆ ತಕ್ಕ ಉತ್ತರ ನೀಡುವಂತಾಗಬೇಕು. ಸರ್ವರಿಗೂ ಸಮಪಾಲು ಸಮಬಾಳು, ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್‌ ನಮ್ಮ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಂವಿಧಾನದ ಆಶಯ ತಿಳಿಯಬೇಕೆಂಬ ಉದ್ದೇಶದಿಂದ ಸಂವಿಧಾನದ ಪೀಠಿಕೆ ಓದಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಂವಿಧಾನ ಓದುವ ಮೂಲಕ ವಿದ್ಯಾರ್ಥಿಗಳು ಸುಳ್ಳನ್ನು ಸತ್ಯವನ್ನಾಗಿಸಲು ಹೊರಟ್ಟಿರುವವವರಿಗೆ ತಕ್ಕ ಉತ್ತರ ನೀಡುವಂತಾಗಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ವಿಶ್ವದ ಎಲ್ಲ ಸಂವಿಧಾನಗಳನ್ನು ಓದಿ ಅಪಾರ ಜ್ಞಾನ ಪಡೆದುಕೊಂಡರು ಎಂದರು.

ಸರ್ವರಿಗೂ ಸಮಪಾಲು ಸಮಬಾಳು, ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ನಮ್ಮ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಂವಿಧಾನದ ಆಶಯ ತಿಳಿಯಬೇಕೆಂಬ ಉದ್ದೇಶದಿಂದ ಸಂವಿಧಾನದ ಪೀಠಿಕೆ ಓದಿಸಲಾಗುತ್ತಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದ್ದರು. ಇದರಿಂದಲೇ ಮಳವಳ್ಳಿ ಭಾಗದಲ್ಲಿ ಹೆಚ್ಚು ವಿದ್ಯಾವಂತರನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪಿ.ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಶುಪಾಲ ಕೆ.ಎಂ. ಅಣ್ಣಪ್ಪಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೊಡ್ಡಯ್ಯ, ಸಮಿತಿ ಸದಸ್ಯ ಗಿರೀಶ್, ರಮೇಶ್, ಶಿವಮಾದೇಗೌಡ, ಪುರಸಭೆ ಸದಸ್ಯ ಶಿವಸ್ವಾಮಿ, ಉಪನ್ಯಾಸಕರಾದ ಲಿಂಗರಾಜು ಸೇರಿದಂತೆ ಇತರರು ಇದ್ದರು.ಸಂವಿಧಾನ ಜಾಗೃತಿ ಭವ್ಯ ರಥಕ್ಕೆ ಅದ್ಧೂರಿ ಸ್ವಾಗತ

ಕಿಕ್ಕೇರಿ:ಅಭಿವೃದ್ಧಿಶೀಲ ಭಾರತಕ್ಕೆ ಸಂವಿಧಾನ ಸರ್ವಶ್ರೇಷ್ಟವಾಗಿದೆ. ಎಲ್ಲರೂ ಸಂವಿಧಾನವನ್ನು ಗೌರವಿಸುವಂತಾಗಬೇಕು ಎಂದು ಪಿಡಿಒ ಬಿ.ಎಸ್.ವಿಜಯ್ ತಿಳಿಸಿದರು.ಹೋಬಳಿಯ ಐಕನಹಳ್ಳಿ ಗ್ರಾಪಂ ವ್ಯಾಪ್ತಿ ಆಗಮಿಸಿ ಸಂವಿಧಾನ ಜಾಗೃತಿ ರಥವನ್ನು ಸ್ವಾಗತಿಸಿ ಮಾತನಾಡಿ, ಪ್ರತಿಯೊಬ್ಬರೂ ಬೃಹತ್‌ ರಾಷ್ಟ್ರ ಭಾರತದಲ್ಲಿ ಹುಟ್ಟಿನಿಂದ ಸಾಯವವರಿಗೆ ಕಾನೂನು ಅಡಿಯಲ್ಲಿ ಬದುಕಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸರ್ವ ಜನರ ಲೋಕಕಲ್ಯಾಣಕ್ಕೆ ಬದುಕಿದವರು. ಇವರು ನೀಡಿದ ಸಂವಿಧಾನದ ಅರಿವನ್ನು ಕನಿಷ್ಠ ಮಟ್ಟದಲ್ಲಿ ಯಾದರೂ ತಿಳಿಯಬೇಕು ಎಂದರು.ಪಂಚಾಯ್ತಿ ವ್ಯಾಪ್ತಿಯ ಜನತೆ ಭವ್ಯ ರಥಕ್ಕೆ ಪುಷ್ಪಾರ್ಚನೆಗೈದು ಅಂಬೇಡ್ಕರ್‌ ಅವರಿಗೆ ಜೈಕಾರ ಹಾಕಿದರು. ಪೂರ್ಣಕುಂಭದೊಂದಿಗೆ ರಥವನ್ನು ಸ್ವಾಗತಿಸಿದರು. ತಾಪಂ ಅಧಿಕಾರಿ ನರಸಿಂಹರಾಜು, ಐಕನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜೇಗೌಡ, ಸದಸ್ಯರಾದ ಎ.ಎಸ್.ಮಂಜೇಗೌಡ, ಸುಮಿತ್ರ ಶಂಭುಲಿಂಗಯ್ಯ, ಪಿಡಿಒ ಬಿ.ಎಸ್.ವಿಜಯ್, ಬಿಆರ್‌ಪಿ ವೀರಭದ್ರಯ್ಯ, ಮುಖ್ಯಶಿಕ್ಷಕ ಕೃಷ್ಣಶೆಟ್ಟಿ, ಶಾಂತಪ್ಪಾಜಿ, ಶ್ರೀಧರ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಮುಖಂಡರು ಉಪಸ್ಥಿತರಿದ್ದರು.