ಸಾರಾಂಶ
ಗದಗ: ವಿದ್ಯಾರ್ಥಿಗಳು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದಿರಿ, ಪುಸ್ತಕದಲ್ಲಿರುವುದನ್ನು ಮಸ್ತಕದಲ್ಲಿ ಇಟ್ಟುಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಪ್ರತಿಭಾನ್ವಿತರಾಗಿ ಹೊರಹೊಮ್ಮಿ, ನಿಮ್ಮ ಬದುಕು ಬಂಗಾರವಾಗಲಿ ಎಂದು ವೈದ್ಯ ಡಾ. ಜಿ.ಬಿ. ಬಿಡಿನಹಾಳ ಹೇಳಿದರು.ತಾಲೂಕಿನ ಲಕ್ಕುಂಡಿ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿಯಲ್ಲಿ ಮೊದಲ 5 ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ಕಲಿಯುವುದನ್ನು ಮಾತ್ರ ಮಾಡಬೇಕು. ಸಮಯ ವ್ಯರ್ಥ ಮಾಡುವುದು, ದುಶ್ಚಟಗಳನ್ನು ರೂಢಿಸಿಕೊಳ್ಳುವುದು ಸಲ್ಲದು. ಹಾಗೆಯೇ ಟಿವಿ ಮತ್ತು ಮೊಬೈಲ್‌ಗಳನ್ನು ಅಗತ್ಯವಿದ್ದರೆ ಮಾತ್ರ ಬಳಕೆ ಮಾಡಬೇಕು ಜ್ಞಾನಾರ್ಜನೆಗೆ ಸಂಪರ್ಕಕ್ಕೆ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು ಎಂದರು.ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗಾಯತ್ರಿ ಹಳ್ಳಿ, ರೋಹಿಣಿ ಮಾಡಲಗೇರಿ, ಶಿವಲೀಲಾ ಅಬ್ಬಿಗೇರಿ, ಸೃಷ್ಟಿ ಮುಸ್ಕಿನಬಾವಿ, ವಿಜಯಲಕ್ಷ್ಮೀ ಹಳ್ಳಿ ಅವರಿಗೆ ಪ್ರತಿಭಾ ಪುರಸ್ಕಾರದ ಚೆಕ್ಕು, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್‌ಗಳನ್ನು ನೀಡಿ, ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಲಾಯಿತು.ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್. ಪಾಟೀಲ, ಕಾರ್ಯದರ್ಶಿ ಸುಭಾಸಚಂದ್ರ ಬೆಟದೂರ, ವಿಜಯಲಕ್ಷ್ಮೀ ಅಂಗಡಿ, ನಿರ್ದೆಶಕರಾದ ಡಾ. ಶರಣಬಸವ ಚೌಕಿಮಠ, ಡಾ. ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ. ಬಸವರಾಜ ಚನ್ನಪ್ಪಗೌಡ್ರ, ಭಾರತಿ ಪಾಟೀಲ, ನೇಹಾ, ಸುಧಾರಾಣಿ ಸೇರಿದಂತೆ ಮುಂತಾದವರು ಇದ್ದರು. ಅಧ್ಯಕ್ಷತೆಯನ್ನು ವೈ.ಎಚ್. ತಕ್ಕಲಕೋಟಿ ವಹಿಸಿದ್ದರು. ಎ.ಎಸ್. ಕಳಸದ ಸ್ವಾಗತಿಸಿದರು. ವೈ.ವೈ. ಬೆಟಗೇರಿ ನಿರೂಪಿಸಿದರು. ಎಸ್.ಎ. ಮುಂಡೇವಾಡಿ ವಂದಿಸಿದರು. ಲಕ್ಕುಂಡಿ ವಸತಿ ಶಾಲೆ:
ಲಕ್ಕುಂಡಿಯ ಕಿತ್ತೂರ ಚೆನ್ನಮ್ಮ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸಂಜನಾ ಗೋಣೆನ್ನವರ ಮತ್ತು ಯಶೋಧಾ ಅಳವಂಡಿ, ನಂದಿತಾ ನರೇಗಲ್ಲ, ನಂದಿನಿ ಅಂಗಡಿ, ಮೇಘಾ ದಾಸರ, ಅಂಕಿತಾ ಪೂಜಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ರವಿ ಚಿಕ್ಕಣ್ಣವರ ಸೇರಿದಂತೆ ಪ್ರತಿಷ್ಠಾನದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ವಿ.ಎಚ್. ಕಮ್ಮಾರ ಸ್ವಾಗತಿಸಿದರು. ಎಂ.ಎನ್. ಕುರ್ಡೇಕರ ನಿರೂಪಿಸಿದರು. ಶಿವಾನಂದ ಬಂಡಿವಾಡ ವಂದಿಸಿದರು. ಅಡವಿಸೋಮಾಪೂರ: ಅಡವಿಸೋಮಾಪೂರದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪವಿತ್ರಾ ಖಾನಾಪೂರ, ಭಾಗ್ಯ ಜಗ್ಗಲಿ, ಶಹನಾಜ್‌ಬೇಗಂ ಲಕ್ಕುಂಡಿ, ಮೊಹ್ಮದ್ ಹುಯಿಲಗೋಳ, ಮಂಜವ್ವ ತೋಟಗಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಜಿ.ಜೆ. ವಸ್ತ್ರದ, ಡಾ. ಅರವಿಂದ ಕರಿನಾಗಣ್ಣವರ, ಪ್ರತಿಷ್ಠಾನದ ಪದಾಧಿಕಾರಿಗಳು, ಗಣ್ಯರು ಇದ್ದರು. ಶಿಕ್ಷಕಿ ರೇಖಾ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಎಂ.ವಿ. ತಿಮ್ಮಾಪೂರ ನಿರೂಪಿಸಿ, ವಂದಿಸಿದರು.ನಾಗಾವಿ:ನಾಗಾವಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸವಿತಾ ಭರಮಗೌಡ್ರ, ದೇವಪ್ಪ ಗಾಡಿ, ಸುಮಯ್ಯ ನದಾಫ, ಶಶಾಂಕ ಕಟಗಿಹಳ್ಳಿಮಠ ಹಾಗೂ ಅಭಿಷೇಕ ಹವಳೆಪ್ಪನವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಡಾ. ಧನೇಶ ದೇಸಾಯಿ, ಮಲ್ಲಪ್ಪ ಗೋಲಪ್ಪನವರ ಸೇರಿದಂತೆ ಇತರರು ಇದ್ದರು. ಮಂಜುನಾಥ ಮಾತಿನ ಸ್ವಾಗತಿಸಿದರು. ಎಂ.ಎಂ.ಬಾಗಲಿ ನಿರೂಪಿಸಿದರು. ಎಸ್.ಎಂ.ಕೋರಿಶೆಟ್ಟರ ವಂದಿಸಿದರು.