ವಿದ್ಯಾರ್ಥಿಗಳು ಧೈರ್ಯದಿಂದ ಪ್ರತಿಭೆ ಪ್ರದರ್ಶಿಸಬೇಕು : ಎಂ.ರವಿ

| Published : Sep 22 2024, 01:47 AM IST

ವಿದ್ಯಾರ್ಥಿಗಳು ಧೈರ್ಯದಿಂದ ಪ್ರತಿಭೆ ಪ್ರದರ್ಶಿಸಬೇಕು : ಎಂ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಬಂಧ, ಆಶುಭಾಷಣ, ಕಂಠಪಾಠ ಸ್ಪರ್ಧೆ, ಛಗ್ಮಾವೇಷ, ಮಿಮಿಕ್ರಿ, ಕವನ ವಾಚನ, ಭಾವಗೀತೆ, ದೇಶಭಕ್ತಗೀತೆ, ಭಕ್ತಿಗೀತೆ, ಜಾನಪದ ಗೀತೆ, ಪ್ಲೇಮಾಡ್ಲಿಂಗ್, ಧಾರ್ಮಿಕ ಪಟ್ಟಣ, ಸಂಸ್ಕೃತ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭಾರತೀನಗರ

ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯದಿಂದ ತಾವು ಕಲಿತ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎಂ.ರವಿ ತಿಳಿಸಿದರು.

ಚಾಂಷುಗರ್ ಶಾಲೆಯಲ್ಲಿ ಆಯೋಜಿಸಿದ್ದ ಅಣ್ಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆ ಹೊರತೆಗೆಯಲು ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿದೆ. ಗ್ರಾಮೀಣ ಪ್ರದೇಶದ ಮಕ್ಕಳು ದೊಡ್ಡಕಲಾವಿದರಾಗಿ ಹೊರಹೊಮ್ಮುವ ಅವಕಾಶವಿದ್ದು ಇಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಮಂಡ್ಯ ಡಯಟ್ ಉಪನ್ಯಾಸಕ ನಾಗರಾಜು ಮಾತನಾಡಿ, ಪ್ರತಿಭಾಕಾರಂಜಿ ಹುಟ್ಟುಹಾಕಿದವರಿಗೆ ಕೃತಜ್ಞತೆ ಸಲ್ಲಿಸಬೇಕು. ಜಾತಿ ಭೇದ-ಬಡವಬಲ್ಲಿಗ ಎನ್ನದೆ ಪ್ರತಿಯೊಬ್ಬರಲ್ಲೂ ತನ್ನದೆಯಾದ ಪ್ರತಿಭೆ ಅಡಗಿದ್ದು ಸಿಗುವ ವೇದಿಕೆಯನ್ನು ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಬಂಧ, ಆಶುಭಾಷಣ, ಕಂಠಪಾಠ ಸ್ಪರ್ಧೆ, ಛಗ್ಮಾವೇಷ, ಮಿಮಿಕ್ರಿ, ಕವನ ವಾಚನ, ಭಾವಗೀತೆ, ದೇಶಭಕ್ತಗೀತೆ, ಭಕ್ತಿಗೀತೆ, ಜಾನಪದ ಗೀತೆ, ಪ್ಲೇಮಾಡ್ಲಿಂಗ್, ಧಾರ್ಮಿಕ ಪಟ್ಟಣ, ಸಂಸ್ಕೃತ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದೇ ವೇಳೆ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎಂ.ರವಿ ಹಾಗೂ ಶ್ರೀಚಾಂಷುಗರ್ ಶಾಲಾ ಆಡಳಿತ ಮಂಡಳಿ ಸದಸ್ಯ ಸೆಂಥಿಲ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹದೇವಪ್ರಸಾದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಂದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರವಿಚಂದ್ರ, ಪ್ರಶಾಂತ್ ಶಾಲೆ ನಿರ್ದೇಶಕರಾದ ಬಸವರಾಜು, ಭಾಸ್ಕರ್, ಮುಖ್ಯ ಶಿಕ್ಷಕ ವಿಜೇಂದ್ರಬಾಬು, ಶಿಕ್ಷಕ ಶ್ರೀನಿವಾಸ್, ಅಣ್ಣೂರು ಸತೀಶ್, ತೀರ್ಪುಗಾರರು ಶಿಕ್ಷಕರು ಸೇರಿದಂತೆ ಹಲವರಿದ್ದರು.